ದೇವನಹಳ್ಳಿ ಪಟ್ಟಣದ ಹೊಸಬಸ್ ನಿಲ್ದಾಣದಲ್ಲಿ ಬ್ಯಾಕ್ ಸೈಡ್ ಊಟದ ವ್ಯವಸ್ಥೆ ಮತ್ತು ಪ್ರತಿ ದಿನ ಒಂದು ಸಾವಿರ ಬಡಜನಗಳಿಗೆ ಊಟಧ ವ್ಯವಸ್ಥೆ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎ.ಸಿ ಶ್ರೀನಿವಾಸ್ ರವರಿಂದ
ಕನ್ನಮಂಗಲ ಗ್ರಾಮ ಪಂಚಾಯತಿಯಲ್ಲಿ ದಿನಸಿ ಕಿಟ್
ಕುಂದಾಣ ಗ್ರಾಮ ಪಂಚಾಯತಿಯ ಸರ್ಕಾರಿ ಆಸ್ಪತ್ರೆಗೆ, ಸ್ಯಾನಿಟೈಜರ್, ಹಾಗೂ ಆರೋಗ್ಯ ಕಿಟ್ ವಿತರಣೆ
ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮತ್ತು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನವರ ಸೂಚನೆ ಮೇರೆಗೆ
ದೇವನಹಳ್ಳಿ ತಾಲ್ಲೂಕು ಪಕ್ಷದ ಮುಖಂಡರ ಮೂಲಕ ಬಡವರಿಗೆ ಆಹಾರ ಕಿಟ್ ನೀಡುವುದು,
ಕೋವಿಡ್ ಕೇರ್ ಸಂಟರ್ ಗಳಿಗೆ ಅಗತ್ಯವಿರುವ ಸಾಮಾಗ್ರಿಗಳನ್ನು ನೀಡುವುದು
ಕೊರೋನಾ ವಾರಿಯರ್ಸ್ ಗಳಿಗೆ ಮತ್ತು ಅಂಗವಿಕಲರಿಗೆ ಅಗತ್ಯ ದಿನಸಿ ವಸ್ತುಗಳನ್ನು ನೀಡುವುದು,
ಆಂಬುಲೆನ್ಸ್ ಸೌಕರ್ಯ ಮಾಡುವುದು ಹೀಗೆ ರಾಜ್ಯಾದ್ಯಂತ ಪಕ್ಷದ ಮುಖಂಡರ ಸಹಕಾರದಿಂದ ಕಷ್ಟದಲ್ಲಿರುವ ಜನರಿಗೆ ಸಹಾಯ ಮಾಡುವ ಮೂಲಕ ಸೇವಾ ಚಟುವಟಿಕೆ ಮಾಡಲಾಗುತ್ತಿದೆ
ಎಂದು ಮಾಜಿ ಸಚಿವ ಹಾಗು ಹಾಲಿ ಶಾಸಕ ಕೃಷ್ಣಭೈರೇಗೌಡ ತಿಳಿಸಿದರು.
ಈ ಸಂದರ್ಭದಲ್ಲಿ ವಿಧಾನಪರಿಷತ್ ಸದಸ್ಯ ಎಸ್.ರವಿ, ದೊಡ್ಡಬಳ್ಳಾಪುರ ಶಾಸಕ ವೆಂಕಟರಮಣಯ್ಯ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎ.ಸಿ.ಶ್ರೀನಿವಾಸ್, ಮಾಜಿ ಶಾಸಕ ವೆಂಕಟಸ್ವಾಮಿ,ಜಿಲ್ಲಾ ಪಂಚಾಯತಿ ಮಾಜಿ ಅಧ್ಯಕ್ಷ ಬಿ.ರಾಜಣ್ಣ,ರಾಜ್ಯ ಹಿಂದುಳಿದ ವರ್ಗಗಳ ಉಪಾಧ್ಯಕ್ಷ ಸಿ.ಜಗನ್ನಾಥ್,ಮುಖಂಡ ಸೋಮಣ್ಣ,ದೇವನಹಳ್ಳಿ ಬ್ಲಾಕ ಕಾಂಗ್ರೆಸ್ ಅಧ್ಯಕ್ಷ ಪ್ರಸನ್ನಕುಮಾರ್, ಉಪಾಧ್ಯಕ್ಷ ದ್ಯಾವರಹಳ್ಳಿ ಶಾಂತಕುಮಾರ್, ತೂಬಗೆರೆ ಬ್ಲಾಕ ಕಾಂಗ್ರೆಸ್ ಅಧ್ಯಕ್ಷ ರಂಗಪ್ಪ, ಜಿಲ್ಲಾ ಪಂಚಾಯತಿ ಸ್ಥಾಯಿ ಸಮಿತಿ ಅಧ್ಯಕ್ಷ ಕೆ.ಸಿ.ಮಂಜುನಾಥ್, ಕೆಪಿಸಿಸಿ ಸದಸ್ಯ ಚಿನ್ನಪ್ಪ, ಜಿಲ್ಲಾಯುವ ಕಾಂಗ್ರೆಸ್ ಅಧ್ಯಕ್ಷ ನಾಗೇಶ್, ಕೆಪಿಸಿಸಿ ಸಾಮಾಜಿಕ ಜಾಲತಾಣ ಜಿಲ್ಲಾಧ್ಯಕ್ಷರಾದ ಸಂದೀಪ್ ತಾಲ್ಲೂಕು ಯುವಕಾಂಗ್ರೇಸ್ ಅಧ್ಯಕ್ಷ ಸುಮಂತ್, ಎ.ಪಿ.ಎಂ.ಸಿ ಉಪಾಧ್ಯಕ್ಷ ಸುಧಾಕರ್, ದೇವನಹಳ್ಳಿ ಪುರಸಭಾ ಅಧ್ಯಕ್ಷೆ ರೇಖಾ ಹಾಗೂ ಇನ್ನು ಹಲವು ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು,ಜನಪ್ರತಿನಿಧಿಗಳು ಇದ್ದರು.
ಗುರುಮೂರ್ತಿ ಬೂದಿಗೆರೆ
8861100990