ವಿಧಾನ ಪರಿಷತ್ ಚುನಾವಣೆ ಹಿನ್ನಲೆಯಲ್ಲಿ ನಾಳೆ ಗುಬ್ಬಿ ನಗರಕ್ಕೆ ಮಾಜಿ ಪ್ರಧಾನಿಗಳಾದ ದೇವೇಗೌಡರ ಆಗಮನ

ವಿಧಾನ ಪರಿಷತ್ ಚುನಾವಣೆ ಹಿನ್ನಲೆಯಲ್ಲಿ ನಾಳೆ ಗುಬ್ಬಿ ನಗರಕ್ಕೆ ಮಾಜಿ ಪ್ರಧಾನಿಗಳಾದ ದೇವೇಗೌಡರ ಆಗಮನ

ಗುಬ್ಬಿ :- ತುಮಕೂರು ಜಿಲ್ಲೆಯ ವಿಧಾನ ಪರಿಷತ್ ಚುನಾವಣೆ ನಿಮಿತ್ತ ಶುಕ್ರವಾರ ಬೆಳಿಗ್ಗೆ 11 ಗಂಟೆಗೆ ಗುಬ್ಬಿ ಹೊರವಲಯದ ಹೇರೂರು ಬಳಿಯ ಶ್ರೀಬಾಲಾಜಿ ಕಲ್ಯಾಣ ಮಂಟಪದಲ್ಲಿ ಜೆಡಿಎಸ್ ಪಕ್ಷದ ಅಭ್ಯರ್ಥಿಯಾದ ಆರ್.ಅನಿಲ್ ಕುಮಾರ ಅವರ ಪರವಾಗಿ ಮತಯಾಚನೆ ಮಾಡಲು ಜೆಡಿಎಸ್ ಪಕ್ಷದ ವರಿಷ್ಟರಾದ ಮಾಜಿ ಪ್ರಧಾನಮಂತ್ರಿಗಳು ಹೆಚ್.ಡಿ ದೇವೇಗೌಡರು ಆಗಮಿಸುತ್ತಿದ್ದು ಗುಬ್ಬಿ ತಾಲೂಕಿನ ಗ್ರಾಮ ಪಂಚಾಯತಿ ಸದಸ್ಯರು, ಪಟ್ಟಣ ಪಂಚಾಯ್ತಿ ಸದಸ್ಯರು ಆಗಮಿಸಿ ಸಭೆಯನ್ನು ಯಶಸ್ವಿಗೊಳಿಸುವಂತೆ ಗುಬ್ಬಿ ಪಟ್ಟಣದ ಜೆಡಿಎಸ್ ಪಕ್ಷದ ಕಛೇರಿಯಲ್ಲಿ ನೆಡೆದ ಪತ್ರಿಕಾ ಗೋಷ್ಠಿಯ ಮೂಲಕ ಬಿ.ಎಸ್.ನಾಗರಾಜು ಮನವಿ ಮಾಡಿದ್ದಾರೆ.

 

ತುಮಕೂರು ಜಿಲ್ಲೆಯ ವಿಧಾನ ಪರಿಷತ್ ಚುನಾವಣೆಗೆ ಸ್ಪರ್ಧಿಸಿರುವ ಜೆಡಿಎಸ್ ಪಕ್ಷದ ಅಭ್ಯರ್ಥಿಯಾದ ವಿದ್ಯಾವಂತ ಬುದ್ದಿವಂತ ಹಾಗು ಜಿಲ್ಲೆಯ ಗ್ರಾಮೀಣ ಪ್ರದೇಶದ ಜನರ ಕಷ್ಟ ಸುಖ ಗಳನ್ನು ಅರಿತಿರುವ ಅನಿಲ್ ಕುಮಾರ್ ಅವರು ಕೆ.ಎ.ಎಸ್.ಅಧಿಕಾರಿಯಾಗಿ ಜನರ ಸಮಸ್ಯೆಯನ್ನು ರಾಜ್ಯ ಮತ್ತು ಜಿಲ್ಲಾ ಮಟ್ಟದ ಅಧಿಕಾರಿಗಳ ಮತ್ತು ಸರ್ಕಾರದ ಮಟ್ಟದಲ್ಲಿ ಕಾರ್ಯನಿರ್ವಹಿಸುವ ವ್ಯಕ್ತಿಯಾಗಿದ್ದಾರೆ.

ಈ ಹಿನ್ನಲೆಯಲ್ಲಿ ಒಬ್ಬ ವಿದ್ಯಾವಂತ, ಉತ್ತಮ ಅಭ್ಯರ್ಥಿಯನ್ನು ಜೆಡಿಎಸ್ ಪಕ್ಷದ ವರಿಷ್ಠರು ಜಿಲ್ಲೆಗೆ ಆಯ್ಕೆ ಮಾಡಿರುವುದು ಸ್ವಾಗತಾರ್ಹವಿಚಾರವಾಗಿದೆ ಇಂತಹ ಅಭ್ಯರ್ಥಿಯನ್ನು ಜಿಲ್ಲೆಯ ಹಾಗು ತಾಲೂಕಿನ ಜಿಲ್ಲಾ ಪಂಚಾಯಿತಿ ತಾಲೂಕು ಪಂಚಾಯಿತಿ ಮತ್ತು ಗ್ರಾಮ ಪಂಚಾಯಿತಿ ಚುನಾಯಿತ ಪ್ರತಿನಿಧಿಗಳು ಆಯ್ಕೆ ಮಾಡುವಂತೆ ಮನವಿ ಮಾಡಿದರು.

ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಸದಸ್ಯರು ಹಾಗೂ ಮಾಜಿ ಅಧ್ಯಕ್ಷರಾದ ಕಳ್ಳಿಪಾಳ್ಯ ಲೋಕೇಶ್ ಮಾತನಾಡಿ ಜೆಡಿಎಸ್ ಪಕ್ಷ ಈ ರಾಜ್ಯದ ದಲಿತರ ಹಿಂದುಳಿದ ವರ್ಗಗಳ ರೈತರ ಏಳಿಗೆಗಾಗಿ ಶ್ರಮಿಸುವ ಪಕ್ಷವಾಗಿದೆ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷದ ನಾಯಕರು ಅವರ ಪಕ್ಷದ ಹೈಕಮಾಂಡ್ ನಾಯಕರ ಕೈಗೊಂಬೆಗಳಾಗಿ ಕೇಲಸ ಮಾಡುವಂತ ಪರಿಸ್ಥಿತಿ ನಿರ್ಮಾಣವಾಗಿದೆ ಪ್ರಾದೇಶಿಕ ಪಕ್ಷವಾದ ಜೆಡಿಎಸ್ ಪಕ್ಷದಲ್ಲಿ ಅಂತಹ ಯಾವುದೇ ಸಂದರ್ಭಗಳು ಇರುವುದಿಲ್ಲ ಗುಬ್ಬಿ ವಿಧಾನಸಭಾ ಹಾಗೂ ತುರುವೇಕೆರೆ ವಿಧಾನಸಭಾ ಕ್ಷೇತ್ರದ ಸ್ಥಳೀಯ ಸಂಸ್ಥೆಗಳ ಚುನಾಯಿತ ಪ್ರತಿನಿಧಿಗಳು ತುಮಕೂರು ವಿಧಾನ ಪರಿಷತ್ ಚುನಾವಣೆಯ ಜೆಡಿಎಸ್ ಅಭ್ಯರ್ಥಿ ಅನಿಲ್ ಕುಮಾರ್ ರವರಿಗೆ ಬಹು ಮತಗಳ ಅಂತರದಿಂದ ಮತಗಳನ್ನು ಹಾಕುವ ಮೂಲಕ ಅವರನ್ನು ಜಯಶೀಲರನ್ನಾಗಿ ಮಾಡುವಂತೆ ಮನವಿ ಮಾಡಿದರು

 

 

ಪತ್ರಿಕಾ ಗೋಷ್ಠಿಯಲ್ಲಿ ಮಾಜಿ ಜಿಲ್ಲಾ ಪಂಚಾಯ್ತಿ ಸದಸ್ಯ ರಾಮಾಂಜನಪ್ಪ , ಮುಖಂಡರಾದ ಶಿವಣ್ಣ, ಯುವ ಮುಖಂಡ ಯೋಗೀಶ್, ಗೋಪಾಲ್ ಗೌಡ ಇತರರು ಇದ್ದರು‌.

 

ವರದಿ

ಯೋಗೀಶ್ ಮೇಳೇಕಲ್ಲಹಳ್ಳಿ

Leave a Reply

Your email address will not be published. Required fields are marked *

You cannot copy content of this page

error: Content is protected !!
Exit mobile version