ಬಿಜೆಪಿ ಪಕ್ಷಕ್ಕೆ ರಾಜೀನಾಮೆ ನಿರ್ಧಾರ ಘೋಷಿಸಿದ ಮಾಜಿ ಸಚಿವ ಸೊಗಡು ಶಿವಣ್ಣ.

ಬಿಜೆಪಿ ಪಕ್ಷಕ್ಕೆ ರಾಜೀನಾಮೆ ನಿರ್ಧಾರ ಘೋಷಿಸಿದ ಮಾಜಿ ಸಚಿವ ಸೊಗಡು ಶಿವಣ್ಣ.

 

 

 

 

 

ತುಮಕೂರು – ಕಳೆದ 30 ವರ್ಷದಿಂದ ಬಿಜೆಪಿಯ ಸಕ್ರಿಯ ಕಾರ್ಯಕರ್ತ ಹಾಗೂ ತುಮಕೂರು ನಗರದ ಬಿಜೆಪಿ  ಕಟ್ಟಾಳು ಎಂದು ಬಿಂಬಿತವಾಗಿದ್ದ ಮಾಜಿ ಸಚಿವ ಸೊಗಡು ಶಿವಣ್ಣರವರು 2023ರ ಚುನಾವಣೆ ಟಿಕೆಟ್ ಕೈತಪ್ಪಿದ ಹಿನ್ನೆಲೆಯಲ್ಲಿ ಬಿಜೆಪಿ ಪಕ್ಷಕ್ಕೆ ರಾಜೀನಾಮೆ ನೀಡುವುದಾಗಿ ಕಾರ್ಯಕರ್ತರ ಸಭೆಯಲ್ಲಿ ಘೋಷಿಸಿದ್ದಾರೆ.

 

 

 

ಇನ್ನು ನಾಲ್ಕು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದ ಸೊಗಡು ಶಿವಣ್ಣರವರು ತುಮಕೂರು ನಗರದ ಜನಪ್ರಿಯ ಶಾಸಕರಾಗಿ ಗುರುತಿಸಿಕೊಂಡಿದ್ದರು ನಂತರದ ಬೆಳವಣಿಗೆಯಲ್ಲಿ ಶಾಸಕ ಜ್ಯೋತಿಗಳೆರವರಿಗೆ ಟಿಕೆಟ್ ಲಭಿಸಿ ಶಾಸಕರಾಗಿದ್ದರು.

 

 

 

ಇನ್ನು 2023ರ ಚುನಾವಣೆಯು ಸಹ ಸಮೀಪ ತಪಿದ್ದು ನೆನ್ನೆ ಬಿಡುಗಡೆಯಾದ ಬಿಜೆಪಿ ಟಿಕೆಟ್ ಕೈತಪ್ಪಿದ ಹಿನ್ನೆಲೆಯಲ್ಲಿ ಬಿಜೆಪಿ ಪಕ್ಷದ ಮುಖಂಡರ ವಿರುದ್ಧ ತೀವ್ರ ಬೇಸರ ವ್ಯಕ್ತಪಡಿಸಿದ ಮಾಜಿ ಸಚಿವ ಸೊಗಡು ಶಿವಣ್ಣರವರು ಇಂದು ತುಮಕೂರಿನಲ್ಲಿ ಅಭಿಮಾನಿಗಳು ಹಾಗೂ ಕಾರ್ಯಕರ್ತರ ಸಭೆಯನ್ನು ನಡೆಸಿ ಮಾತನಾಡಿದ ಅವರು ಬಿಜೆಪಿ ಪಕ್ಷಕ್ಕೆ ರಾಜೀನಾಮೆ ಸಲ್ಲಿಸಿ ಸ್ವತಂತ್ರವಾಗಿ ಚುನಾವಣೆಗೆ ಸ್ಪರ್ಧಿಸುವುದಾಗಿ ಘೋಷಿಸುವ ಮೂಲಕ ಬಿಜೆಪಿ ಪಕ್ಷದ ನಂಟನ್ನ ಕಡಿದುಕೊಳ್ಳಲು ಮುಂದಾಗಿದ್ದಾರೆ.

 

 

 

ಇನ್ನು ರಾಜೀನಾಮೆ ಬಗ್ಗೆ ಪತ್ರಕರ್ತರೊಂದಿಗೆ ಮಾತನಾಡಿರುವ ಅವರು ನನ್ನ ಪಕ್ಷದ ಹಿರಿಯ ಮುಖಂಡರು ಹಾಗೂ ಪಕ್ಷದ ರಾಜ್ಯಾಧ್ಯಕ್ಷರಿಗೆ ಸಲ್ಲಿಸುತ್ತೇನೆ ಇನ್ನು ನಾನು ಪಕ್ಷದ ಕಚೇರಿಯ ಬಾಗಿಳು ಸಹ ತುಳಿಯಲು ಇಷ್ಟಪಡುವುದಿಲ್ಲ ಇನ್ನು ಪಕ್ಷದಲ್ಲಿ ನನಗೆ  ಇನ್ನುಮುಂದೆ ಯಾವ ಸ್ಥಾನವನ್ನು ಇರುವುದಿಲ್ಲ ನಾಳೆ ನನ್ನ ರಾಜಿನಾಮೆ ಪತ್ರವನ್ನು ಸಲ್ಲಿಸುತ್ತಿದ್ದೇನೆ ಎಂದರು.

 

 

 

ನನಗೆ ಯಾವುದೇ ಹೈಕಮಾಂಡ್ ಇಲ್ಲ ಇನ್ನು ನನ್ನ ಕ್ಷೇತ್ರದ ಎರಡು ಲಕ್ಷ ಮತದಾರರೇ ನನ್ನ ಹೈಕಮಾಂಡ್ ಎಂದ ಅವರು .ನನಗೆ ಬೆಲೆ ಇಲ್ಲದ ಜಾಗದಲ್ಲಿ ನಾನು ಜಂಗ್ಲಿ ಆಗಲು ಇಷ್ಟಪಡುವುದಿಲ್ಲ ಒಮ್ಮೆ ಕಾಲನ್ನ ಆಚೆ ತೆಗೆದರೆ ಮತ್ತೊಮ್ಮೆ ಯಾವುದೇ ಕಾರಣಕ್ಕೂ ನನ್ನ ಕಾಲನ್ನು ಆ ಜಾಗಕ್ಕೆ ಇಡುವುದಿಲ್ಲ ಎನ್ನುವ ಮೂಲಕ ತಮ್ಮ ನೋವನ್ನು ಹಾಗೂ ಆಕ್ರೋಶವನ್ನು ಹೊರ ಹಾಕಿದ್ದಾರೆ.

 

 

ಇನ್ನು ಇದೇ ಸಂದರ್ಭದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಬಿಜೆಪಿ ಪಕ್ಷಕ್ಕೆ ಮೂಲ ಬಿಜೆಪಿಗರು ರಾಜೀನಾಮೆ ಸಲ್ಲಿಸುವ ಮೂಲಕ ಬಿಜೆಪಿ ಪಕ್ಷಕ್ಕೆ ದೊಡ್ಡ ಹೊಡೆತ ನೀಡಲು ಮುಂದಾಗಿದ್ದು ಇನ್ನು ಕಾರ್ಯಕರ್ತರ ರಾಜೀನಾಮೆ ನಿರ್ಧಾರ ಅವರಿಗೆ ಬಿಟ್ಟದ್ದು ಅದು ಅವರ ಸ್ವಂತಿಕೆ ನಿರ್ಧಾರ ಇನ್ನು  ತುಮಕೂರು ಜಿಲ್ಲೆಯ ಹಲವು ಮೂಲ ಬಿಜೆಪಿಗರು ಸಹ ರಾಜೀನಾಮೆ ನೀಡಲು ಸಿದ್ದರಾಗಿದ್ದು ಮುಂದಿನ ದಿನದಲ್ಲಿ ರಾಜೀನಾಮೆ ನೀಡುವವರ ಸಂಖ್ಯೆಯು ಸಹ ಹೆಚ್ಚಾಗಲಿದೆ ಎಂದಿದ್ದಾರೆ.

 

ಈ ಬಾರಿಯ ಚುನಾವಣೆಗೆ ತಾವು ನಿಲ್ಲುವುದು ಶತಸಿದ್ಧ ಇದರಲ್ಲೇ ಯಾವುದೇ ರಾಜಿ ಇಲ್ಲ ನನ್ನ ಕಾರ್ಯಕರ್ತರ ನಿರ್ಧಾರದಂತೆ ನಾನು ನನ್ನ ನಿರ್ಧಾರವನ್ನ ಪ್ರಕಟಿಸುವ ಮೂಲಕ ಈ ಬಾರಿ ಚುನಾವಣೆಗೆ ಸ್ಪರ್ಧಿಸುತ್ತೇನೆ ಇದರಲ್ಲಿ ಯಾವುದೇ ಗೊಂದಲ ಕಾರ್ಯಕರ್ತರಲ್ಲಿ ಬೇಡ ಎಂದು ಸ್ಪಷ್ಟನೆ ನೀಡಿದ್ದಾರೆ.

 

ಅದೇನೇ ಇರಲಿ ಇದುವರೆಗೂ ಬಿಜೆಪಿಯ ಕಟ್ಟಾಳು ಎಂದು ಗುರುತಿಸಿಕೊಂಡಿದ್ದ ಮಾಜಿ ಸಚಿವ ಸೊಗಡು ಶಿವಣ್ಣರವರ ನಡೆ ನಿಜಕ್ಕೂ ಬಿಜೆಪಿ ಪಕ್ಷಕ್ಕೆ ಬಿಸಿ ತುಪ್ಪವಾಗಿ ಪರಿಣಮಿಸುವುದರ ಜೊತೆಗೆ ಹಾಲಿ ಶಾಸಕ ಜ್ಯೋತಿ ಗಣೇಶ ರವರಿಗೂ ಸಹ ದೊಡ್ಡ ಹೊಡೆತ ನೀಡಲು ಮುಂದಾಗಿದೆ ಎಂದರೆ ತಪ್ಪಾಗಲಾರದು.

 

 

ವರದಿ ಮಾರುತಿ ಪ್ರಸಾದ್ ತುಮಕೂರು

Leave a Reply

Your email address will not be published. Required fields are marked *

You cannot copy content of this page

error: Content is protected !!
Exit mobile version