ಕೋವಿಡ್‌ನಿಂದ ಮೃತಪಟ್ಟವರ ಅಸ್ತಿಗಳನ್ನು ವಿಸರ್ಜಿಸಿ ಮಾನವೀಯತೆ ಮೆರೆದ ಮಾಜಿ ಸಚಿವ ಶಿವಣ್ಣ ಮತ್ತು ತಹಶೀಲ್ದಾರ್ ಮೋಹನ್
ತುಮಕೂರು : ಕಳೆದ ೦೬ ತಿಂಗಳಿಂದ ಕೋವಿಡ್ ಸೋಂಕಿನಿಂದ ಮೃತಪಟ್ಟಿದ್ದ ೨೨ ಜನರ ಅಸ್ತಿಗಳು ವಿಸರ್ಜಿಸದೇ ಇದ್ದು, ಆ ಆಸ್ತಿಗಳಿಗೆ ಸಂಬಂಧಪಟ್ಟ ಕುಟುಂಬಸ್ಥರಿಗೆ ವಿಷಯ ತಿಳಿಸಿದಾಗ್ಯೂ ಯಾರೂ ಸಹ ಆ ಅಸ್ತಿಗಳನ್ನು ವಿಸರ್ಜಿಸಲು ಮುಂದೆ ಬಾರದೇ ಇದ್ದ ಕಾರಣ ಅಲ್ಲಿ ಉಳಿದಿದ್ದವು, ಇದಕ್ಕೆ ಸಂಬಂಧಿಸಿದಂತೆ ಮೃತಪಟ್ಟವರಿಗೆ ಮುಕ್ತಿ ನೀಡುವ ಸಲುವಾಗಿ ಸರ್ಕಾರದ ಆದೇಶ ಹಾಗೂ ತುಮಕೂರು ಜಿಲ್ಲಾಡಳಿತದ ನಿರ್ದೇಶನದ ಮೇರೆಗೆ ಇಂದು ಮೈಸೂರು ಬಳಿಯಿರುವ ಶ್ರೀರಂಗಪಟ್ಟಣದ (ಪಶ್ಚಿಮವಾಹಿನಿ-ಸಂಗಮ)ದಲ್ಲಿ ಮಾಜಿ ಸಚಿವ ಎಸ್.ಶಿವಣ್ಣ ಹಾಗೂ ತುಮಕೂರು ತಾಲ್ಲೂಕು ತಹಶೀಲ್ದಾರ್ ಮೋಹನ್ ಕುಮಾರ್‌ರವರುಗಳು ಶಾಸ್ತ್ರೋಕ್ತವಾಗಿ ಆ ಅಸ್ತಿಗಳನ್ನು ವಿಸರ್ಜಿಸುವ ಮೂಲಕ ಮೃತಪಟ್ಟವರಿಗೆ ಗೌರವ ಸಲ್ಲಿಸುವದರೊಂದಿಗೆ ಮುಕ್ತಿಯನ್ನು ನೀಡುವಲ್ಲಿ ಮಾನವೀಯತೆ ಮೆರೆದಿದ್ದಾರೆ.