ಸಮುದ್ರದಲ್ಲಿರುವ ನೀರು ಎಷ್ಟು ಮೃದುವೋ…. ಅಷ್ಟೇ ತಾನು ಕಠಿಣ ಎಂದು ಮಾಜಿ ಉಪಮುಖ್ಯಮಂತ್ರಿ ಡಾ. ಜಿ ಪರಮೇಶ್ವರ್ ಹೇಳಿದ್ದು ಯಾರಿಗೆ…..?
ತುಮಕೂರು_ಸಮುದ್ರದಲ್ಲಿರುವ ನೀರು ಎಷ್ಟು ಮೃದುವಾಗಿರುತ್ತವೆ ಅಷ್ಟೇ ತಾನು ಕಠಿಣ ಇನ್ನು ಸಮುದ್ರದಲ್ಲಿರುವ ನೀರು ಕಲ್ಲನ್ನು ಕರಗಿಸುವಂತಹ ಶಕ್ತಿ ಇರುತ್ತದೆ ಇನ್ನು ನೀರಿನ ಶಕ್ತಿ ತಡೆಯಲು ಯಾರಿಗೂ ಇರುವುದಿಲ್ಲ ಅದೇ ರೀತಿ ತಾನು ಎಷ್ಟು ಮೃದುವಾಗಿದ್ದರೂ ಸಹ, ತನ್ನ ಚಿಂತನೆಗಳು ಅಷ್ಟೇ ಕಠಿಣವಾಗಿರಲಿದೆ ಎಂದು ಡಾಕ್ಟರ್ ಜಿ ಪರಮೇಶ್ವರ್ ಅವರು ತನ್ನ ವಿರೋಧಿಗಳಿಗೆ ನೇರ ಎಚ್ಚರಿಕೆಯನ್ನು ಸಹ ರವಾನಿಸಿದ್ದಾರೆ.
ಭಾನುವಾರ ತುಮಕೂರಿನ ಸಿದ್ಧಾರ್ಥ ಮೆಡಿಕಲ್ ಕಾಲೇಜು ಆವರಣದಲ್ಲಿ ನಡೆದ “ಸವ್ಯಸಾಚಿ” ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಅವರು ಇನ್ನು ತನ್ನ ರಾಜಕೀಯ ಹಾಗೂ ಸಾರ್ವಜನಿಕ ಜೀವನದಲ್ಲಿ ತನಗೆ ಸಹಕಾರ ನೀಡಿದ ಎಲ್ಲರಿಗೂ ಅಭಿನಂದನೆಗಳನ್ನು ಸಲ್ಲಿಸಿ ಮಾತನಾಡಿದ ಅವರು.
ಸಹಕರ ಕೊಡದೆ ಇರುವವರ ಬಗ್ಗೆ ನಾನು ತಲೆ ಕೆಡಿಸಿಕೊಳ್ಳುವುದಿಲ್ಲ ಆದರೆ ಸಹಕಾರ ಕೊಟ್ಟಿರುವವರ ಬಗ್ಗೆ ತಾನು ಹೇಳಲೇಬೇಕು ಎಂದರು ಇನ್ನೂ ಕೆಲವರು ತನ್ನ ಜೀವನದಲ್ಲಿ ಸಹಕಾರ, ಶಕ್ತಿ,ಉಮ್ಮಸ್ಸು ನೀಡಿ ಈ ಮಟ್ಟಕ್ಕೆ ಬೆಳೆಯಲು ಸಹಕಾರ ನೀಡಿದ್ದಾರೆ ಅಂತಹವರನ್ನು ತಾನು ಸ್ಮರಿಸಬೇಕು ಎಂದರು.
ಇನ್ನೂ ಕೆಲವರು ಹೇಳುತ್ತಾರೆ ಡಾಕ್ಟರ್ ಜಿ ಪರಮೇಶ್ವರ್ ಬಹಳ ಸಾಫ್ಟ್ ಅಂತ ಹೌದು ತಾನು ಬಹಳ ಮೃದು ಮನುಷ್ಯ ಇನ್ನು ನಮ್ಮ ಹಿರಿಯರು ಒಳ್ಳೆಯ ಸಂಸ್ಕಾರ ಸಹ ಕಲಿಸಿದ್ದಾರೆ ಅದರಂತೆ ನಾನು ಅವರ ದಾರಿಯಲ್ಲಿ ನಡೆಯುತ್ತೇನೆ ಎಂದರು.
ಇನ್ನು ಸಮುದ್ರದಲ್ಲಿರುವ ನೀರು ಎಷ್ಟು ಮೃದುವಾಗಿ ಇರುವುದು ಹಾಗೆ ತಾನು ಕೂಡ ಮೃದು ಆದರೆ ಸಮುದ್ರದಲ್ಲಿರುವ ನೀರಿನ ಶಕ್ತಿ ಕಲ್ಲನ್ನು ಸಹ ಕರಗಿಸುವಂಥದು , ಇನ್ನು ನೀರಿನ ಅಲೆಯ ಶಕ್ತಿ ಕೂಡ ಹೇಗೆ ಇರುತ್ತದೆ ಅನ್ನುವುದನ್ನು ಅರ್ಥಮಾಡಿಕೊಳ್ಳಬೇಕು ಎಂದು ವಿರೋಧಿಗಳಿಗೆ ನೇರ ಎಚ್ಚರಿಕೆಯನ್ನು ಸಹ ರವಾನಿಸಿದ್ದಾರೆ.
ವರದಿ_ ಮಾರುತಿ ಪ್ರಸಾದ್ ತುಮಕೂರು