ಕರೋನ ಸಂದರ್ಭದಲ್ಲಿ ಇಂದಿನ ಯುವಕರು ಸಾರ್ವಜನಿಕರಿಗೆ ಹಲವು ರೀತಿಯಲ್ಲಿ ತಮ್ಮ ಕೈಲಾದ ಸೇವೆ ಸಲ್ಲಿಸುತ್ತಿರುವುದು ನಿಜಕ್ಕೂ ಶ್ಲಾಘನೀಯ. ಕರೋನ ಬಂದಾಗಿನಿಂದ ಸಾರ್ವಜನಿಕರು ಹಲವು ರೀತಿಯ ತೊಂದರೆಗಳನ್ನು ಅನುಭವಿಸುತ್ತಿದ್ದು ಜನರನ್ನು ಆತಂಕಕ್ಕೀಡು ಮಾಡಿದೆ. ಆದರೆ ಇಂಥ ಸಂಕಷ್ಟ ಕಾಲದಲ್ಲಿ ಯುವಕರು ಮುಂದೆ ಬಂದು ತಮ್ಮ ಕೈಲಾದ ಸೇವೆಯನ್ನು ಸಾರ್ವಜನಿಕರಿಗೆ ಸಲ್ಲಿಸುವ ಮೂಲಕ ಎಲ್ಲರಿಗೂ ಮಾದರಿಯಾಗಿದ್ದಾರೆ ಡಾಕ್ಟರ್ ಜಿ ಪರಮೇಶ್ವರ್ ತಿಳಿಸಿದರು.
ತುಮಕೂರಿನ ಸಿದ್ಧಾರ್ಥ ಮೆಡಿಕಲ್ ಕಾಲೇಜು ಮುಂಭಾಗದಲ್ಲಿ ಸಾರ್ವಜನಿಕರಿಗೆ 3B ಪರಿವಾರ ಹಾಗೂ ಡಾಕ್ಟರ್ ಜಿ ಪರಮೇಶ್ವರ್ ಯುವ ಸೈನ್ಯ ವತಿಯಿಂದ ಸಾರ್ವಜನಿಕರಿಗೆ ಮಧ್ಯಾಹ್ನದ ಬಿಸಿ ಊಟ ವಿತರಿಸಿದ ಮಾಜಿ ಉಪ ಮುಖ್ಯಮಂತ್ರಿಗಳು ಹಾಗೂ ಕೊರಟಗೆರೆ ಶಾಸಕರಾದ ಡಾ ಜಿ ಪರಮೇಶ್ವರ್ ಅವರು ಯುವಕರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ಇಂತಹ ಸಂದರ್ಭದಲ್ಲಿ ಸಾರ್ವಜನಿಕರು ಊಟಕ್ಕೆ ಪರಿತಪಿಸುತ್ತಿದ್ದಾರೆ ಇಂತಹ ಸಂದರ್ಭದಲ್ಲಿ ಅವರ ರಕ್ಷಣೆಗೆ ಮುಂದಾಗಿರುವ ಯುವಕರ ಕಾರ್ಯ ಎಲ್ಲರೂ ಮೆಚ್ಚುವಂತದ್ದು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಮುಖಂಡ ನರಸಿಂಹರಾಜು ಮಾತನಾಡಿ ಲಾಕ್ ಡೌನ್ ಆದಾಗಿನಿಂದ ಹೋಟೆಲ್ಗಳು ಮುಚ್ಚಿರುವ ಕಾರಣ ಸಾರ್ವಜನಿಕರಿಗೆ ಹಾಗೂ ಆಸ್ಪತ್ರೆಗೆ ಆಗಮಿಸುವವರಿಗೆ ತೀವ್ರ ತೊಂದರೆ ಉಂಟಾಗಿತ್ತು ಆದ್ದರಿಂದ ಸಾರ್ವಜನಿಕರಿಗೆ ಅನುಕೂಲವಾಗಲೆಂದು ತಾವು ಹಾಗೂ ತಮ್ಮ ಸ್ನೇಹಿತರು ಸೇರಿ ಈ ಕಾರ್ಯ ನಡೆಸುತ್ತಿರುವುದಾಗಿ ತಿಳಿಸಿದರು.
ಇದೇ ಸಂದರ್ಭದಲ್ಲಿ ಅಖಿಲ ಕರ್ನಾಟಕ ಡಾಕ್ಟರ್ ಜಿ ಪರಮೇಶ್ವರ್ ಯುವ ಸೈನ್ಯ ಜಿಲ್ಲಾಧ್ಯಕ್ಷರಾದ ನರಸಿಂಹಮೂರ್ತಿ, ಪರಮೇಶ್ವರ ಯುವ ಸೈನ್ಯದ ರಾಜ್ಯ ಕಾರ್ಯದರ್ಶಿ ರಮೇಶ್, ಕಾಂಗ್ರೆಸ್ ಮುಖಂಡ ರಜನಿಕಾಂತ್ ,ಕೆಪಿಸಿಸಿ ಕಾರ್ಯದರ್ಶಿ ದಿನೇಶ್, ಕಾಂಗ್ರೆಸ್ ಮುಖಂಡ ಚಂದ್ರಶೇಖರಗೌಡ,ಮೆಡಿಕಲ್ ರವಿನಂದ, ಶಂಕರ್ ನಿಂಗಯ್ಯ, ಎಲೆಕ್ಟ್ರಿಕಲ್ ಶಂಕರ್, ಶಿವಪ್ರಸಾದ್, ಹನುಮಂತು, ಬಸವರಾಜು ಸೇರಿದಂತೆ ಸಂಘದ ಪದಾಧಿಕಾರಿಗಳು ಹಾಜರಿದ್ದರು.