ಸಿದ್ಧಾರ್ಥ ಅಡ್ವಾನ್ಸ್ಡ ಹಾರ್ಟ್‌ಸೆಂಟರ್ ನಲ್ಲಿ ಓಪನ್ ಹಾರ್ಟ್ ಸರ್ಜರಿ ಯಶಸ್ವಿ-ಬಿ.ಪಿ.ಎಲ್, ಆಯುಷ್ಮನ್‌ಕಾರ್ಡ್-ಸರ್ಕಾರದ ಸೇವೆಗಳಿಗೂ ಒತ್ತು-ಡಾ.ಜಿ. ಪರಮೇಶ್ವರ

ಸಿದ್ಧಾರ್ಥ ಅಡ್ವಾನ್ಸ್ಡ ಹಾರ್ಟ್‌ಸೆಂಟರ್ ನಲ್ಲಿ ಓಪನ್ ಹಾರ್ಟ್ ಸರ್ಜರಿ ಯಶಸ್ವಿ-ಬಿ.ಪಿ.ಎಲ್, ಆಯುಷ್ಮನ್‌ಕಾರ್ಡ್-ಸರ್ಕಾರದ ಸೇವೆಗಳಿಗೂ ಒತ್ತು-ಡಾ.ಜಿ. ಪರಮೇಶ್ವರ

 

ತುಮಕೂರು: ಜಾಗತಿಕ ಮಟ್ಟಕ್ಕೆ ಸರಿಸಮಾನವಾದರೀತಿಯಲ್ಲಿ ತುಮಕೂರಿನ ಸಿದ್ದಾರ್ಥ ವೈದ್ಯಕೀಯ ಆಸ್ಪತ್ರೆ ಮತ್ತು ಕಾಲೇಜಿನ ಸಿದ್ಧಾರ್ಥ ಅಡ್ವಾನ್ಸ್ಡ ಹಾರ್ಟ್‌ಸೆಂಟರ್ ನಲ್ಲಿ ಯಶಸ್ವಿಯಾಗಿ ಓಪನ್ ಹಾರ್ಟ್ ಸರ್ಜರಿಯನ್ನು ಉಚಿತವಾಗಿ ನಡೆಸಲಾಗಿದೆ. ಇದು ಇತಿಹಾಸದಲ್ಲಿ ಹೊಸ ಅಧ್ಯಾಯವನ್ನ ಸೃಷ್ಟಿಸಿದೆ ಎಂದು ಶ್ರೀ ಸಿದ್ದಾರ್ಥ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಹಾಗೂ ಮಾಜಿ ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರಅವರು ಹರ್ಷ ವ್ಯಕ್ತಪಡಿಸಿದ್ದಾರೆ.

ಶ್ರೀಸಿದ್ದಾರ್ಥ ವೈದ್ಯಕೀಯಆಸ್ಪತ್ರ ಮತ್ತುಕಾಲೇಜಿನಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ತುಮಕೂರಿನಂತಹ ಪ್ರದೇಶದಲ್ಲಿಇದೇ ಮೊದಲ ಬಾರಿಗೆ ಓಪನ್ ಹಾರ್ಟ್ ಸರ್ಜರಿಯನ್ನು ನಡೆಸಿ ಯಶಸ್ವಿಯಾಗಿರುವುದು ದಾಖಲಾರ್ಹ.ಶಸ್ತ್ರಚಿಕಿತ್ಸೆಯಾದಅರ್ಧ ತಾಸಿನಲ್ಲೇ ರೋಗಿ ಚೇತರಿಸಿಕೊಂಡು, ವೈದ್ಯರೊಂದಿಗೆ ಮಾತನಾಡಿದ್ದು, ಗಮನಾರ್ಹ ಸಂಗತಿಎಂದರು.

ಸಿದ್ದಾರ್ಥ ವೈದ್ಯಕೀಯ ಕಾಲೇಜು ಮತ್ತುಆಸ್ಪತ್ರೆ ಯುಜಿಸಿಯಿಂದ ’ಎ’ ಗ್ರೇಡ್ ಮಾನ್ಯತೆ ಪಡೆದಿದ್ದು ಸ್ವಾಯತ್ತ ವಿಶ್ವವಿದ್ಯಾಲಯವಾಗಿ ಪರಿವರ್ತನೆಗೊಂಡಿದೆ.ತಂದೆ ಶಿಕ್ಷಣ ಭೀಷ್ಮಡಾ.ಎಚ್.ಎಂಗಂಗಾಧರಯ್ಯನವರಆಶಯ ಮತ್ತುಸಹೋದರರಾದಡಾ.ಜಿ ಶಿವಪ್ರಸಾದ್ ಅವರ ಕನಸಿನ ಕೂಸಾಗಿರುವ ನೂತನ ಹೃದಯರೋಗತಪಾಸಣೆಕೇಂದ್ರಗ್ರಾಮಾಂತರ ಪ್ರದೇಶದ ಬಡಜನತೆ ಮತ್ತು ಸಮುದಾಯದತ್ತ ಆರೋಗ್ಯ ಸೇವೆಗಳನ್ನು ನೀಡುವ ಉದ್ದೇಶವನ್ನಿಟ್ಟುಕೊಂಡು ಮುನ್ನಡೆಯಲ್ಲಿದೆ ಎಂದರು.

೧೯೮೮ರಲ್ಲಿ ಆರಂಭವಾದ ವೈದ್ಯಕೀಯ ಕಾಲೇಜಿನಿಂದ ೫೫೦೦ ವಿದ್ಯಾರ್ಥಿಗಳು ವೃತ್ತಿಪರರಾಗಿದ್ದು ದೇಶ-ವಿದೇಶದ ಹೆಸರಾಂತ ಆಸ್ಪತ್ರೆಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಹಾಗಾಗಿ ಆರೋಗ್ಯ ಸೇವೆಗೆ ಒತ್ತು ನೀಡಲು ಹಾಗೂ ಸಮಾಜದಜನರಿಗೆ ಸೇವೆ ಒದಗಿಸಲು ಅಡ್ವಾನ್ಸ್ ಕಾರ್ಡಿಯಾಕ್ ಹಾರ್ಟ್ ಸೆಂಟರ್ ಆರಂಭಿಸಿದ್ದೆವೆ. ಪರಿಣಿತಯುವ ವೈದ್ಯರ ತಂಡ ಕಾರ್ಯೋನ್ಮುಖವಾಗಿದೆ ಎಂದುಅವರು ವಿವರಿಸಿದರು.

ದೇಶದ ಪ್ರತಿಷ್ಠಿತ ಹೃದಯರೋಗ ಸಂಬಂಧಿ ಆಸ್ಪತ್ರೆಗಳ ವೈದ್ಯರು ಮತ್ತು ಮಾಲೀಕರೊಂದಿಗೆ ಸಮಾಲೋಚಿಸಿ ಅವರ ಸಲಹೆಗಳ ಆಧಾರದ ಮೇಲೆ ಬೆಂಗಳೂರಿನ ಕಾರ್ಡಿಯಾಕ್ ಪ್ರಾಂಟಿಡ ನಿರ್ದೇಶಕಡಾ.ತಮಿಮ್‌ಅಹಮದ್‌ ನೇತೃತ್ವದ ತಂಡದೊಂದಿಗೆ ಪರಸ್ಪರ ಸಹಕಾರದಿಂದ ಆಸ್ಪತ್ರೆಯಲ್ಲಿ ಹಾರ್ಟ್ ಸೆಂಟರ್‌ ಆರಂಭಿಸಲಾಯಿತು. ವಿದೇಶಿ ಗುಣಮಟ್ಟದ ಸಲಕರಣೆಗಳನ್ನು ಒಳಗೊಂಡಂತೆ ಸುಮಾರು ೧೬ ಕೋಟಿ ವೆಚ್ಚದಲ್ಲಿ ಸಂಸ್ಥೆ ಪ್ರಾರಂಭ ಮಾಡಿದ್ದು, ಸಂಸ್ಥೆಯನ್ನುಅಂತರಾಷ್ಟ್ರೀಯ ಮಟ್ಟಕ್ಕೆಕೊಂಡೊಯ್ಯುವಗುರಿ ಹೊಂದಿದ್ದೇವೆಎಂದುಡಾ.ಜಿ ಪರಮೇಶ್ವರ್ ವಿವರಿಸಿದರು.

Leave a Reply

Your email address will not be published. Required fields are marked *

You cannot copy content of this page

error: Content is protected !!