ನವೆಂಬರ್ 14ರಂದು ಫ್ಯಾಶನ್ ಶೋ ಆಡಿಷನ್ ತುಮಕೂರು ಪ್ರತಿಭೆಗಳಿಗೆ ಸುವರ್ಣವಕಾಶ

ನವೆಂಬರ್ 14ರಂದು ಫ್ಯಾಶನ್ ಶೋ ಆಡಿಷನ್ ತುಮಕೂರು ಪ್ರತಿಭೆಗಳಿಗೆ ಸುವರ್ಣವಕಾಶ

 

ತುಮಕೂರು: ನಗರದ ಶ್ರೀ ಫ್ಯಾಷನ್ ಇವೆಂಟ್ಸ್ ವತಿಯಿಂದ ಮೊಟ್ಟಮೊದಲ ಬಾರಿಗೆ ರಾಜ್ಯ ಮಟ್ಟದ ಫ್ಯಾಶನ್ ಶೋ ಆಯೋಜಿಸಲಾಗಿದೆ ಎಂದು ಶ್ರೀ ಫ್ಯಾಶನ್ ಇವೆಂಟ್ಸ್ ಸಿಇಒ ಅಮೃತ ಶೆಟ್ಟಿ ತಿಳಿಸಿದರು.

 

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ತುಮಕೂರಿನವರೇ ಸೇರಿ ಈ ಫ್ಯಾಶನ್ ಶೋ ಆಯೋಜನೆ ಮಾಡುತ್ತಿದ್ದು, ಜಿಲ್ಲೆಯ ಪ್ರತಿಭಾವಂತರಿಗೆ ವೇದಿಕೆ ನೀಡುವ ಮೂಲಕ ಅವರನ್ನು ಬೆಳಕಿಗೆ ತರುವುದು ನಮ್ಮ ಸಂಸ್ಥೆಯ ಧ್ಯೇಯವಾಗಿದೆ ಎಂದು ತಿಳಿಸಿದರು.

 

ಶ್ರೀ ಫ್ಯಾಷನ್ ಇವೆಂಟ್ಸ್ ಸಂಸ್ಥೆಯಿಂದ ನಡೆಸುತ್ತಿರುವ ಕರ್ನಾಟಕ ಫ್ಯಾಶನ್- 2022 ಪ್ರಶಸ್ತಿಗೆ ನಡೆಯಲಿರುವ ಸ್ಪರ್ಧೆಗೆ ನವೆಂಬರ್ 14ರಂದು ಆಡಿಷನ್ ನಡೆಯಲಿದ್ದು, ಏಳು ವಿಭಾಗಗಳಲ್ಲಿ ಈ ಫ್ಯಾಶನ್ ಶೋ ಸ್ಪರ್ಧೆ ನಡೆಯಲಿದ್ದು ಆಸಕ್ತರು ನೊಂದಾಯಿಸಿಕೊಳ್ಳಬಹುದಾಗಿದೆ ಎಂದು ಹೇಳಿದರು.

 

ಪ್ರತಿ ವಿಭಾಗದಲ್ಲಿ 100 ಸ್ಪರ್ಧಾಳು ಭಾಗವಹಿಸಬಹುದಾಗಿದ್ದು, ಆಡಿಷನ್ ನಲ್ಲಿ ಆಯ್ಕೆಯಾಗುವವರಿಗೆ ರ್ಯಾಂಪ್ ವಾಕ್ ಸೇರಿದಂತೆ ಅಗತ್ಯ ತರಬೇತಿಯನ್ನು ನೀಡಿ, ಮುಂದಿನ ಡಿಸೆಂಬರ್ ನಲ್ಲಿ ಅಂತಿಮ ಸುತ್ತಿನ ಸ್ಪರ್ಧೆಯನ್ನು ತುಮಕೂರಿನಲ್ಲಿ ನಡೆಸಲು ಯೋಜಿಸಲಾಗಿದೆ ಎಂದು ಹೇಳಿದರು.

 

ಫ್ಯಾಷನ್ ಶೋ ನಿರ್ದೇಶಕಿ ಹರ್ಷಿಣಿ ರೇಣುಕೇಶ್, ಮಾತನಾಡಿ ಈ ಶೋನಲ್ಲಿ ಮಕ್ಕಳು, ಯುವಕ, ಯುವತಿಯರು ಹಾಗೂ ದಂಪತಿಗಳಿಗೆ, ಮಿಸ್ಟರ್ ಮತ್ತು ಮಿಸಸ್ ಎಂದು ಏಳು ವಿಭಾಗಗಳಲ್ಲಿ ಸ್ಪರ್ಧೆಯಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ಹೇಳಿದರು.

 

ತುಮಕೂರಿನಲ್ಲಿ ಮೊಟ್ಟಮೊದಲ ರಿಜಿಸ್ಟರ್ ಆಗಿರುವ ಫ್ಯಾಷನ್ ಇವೆಂಟ್ಸ್ ಸಂಸ್ಥೆ ಇದಾಗಿದ್ದು, ಇಲ್ಲಿ ಸ್ಪರ್ಧಿಸುವ ಮತ್ತು ವಿಜೇತರಾಗುವ ಅಭ್ಯರ್ಥಿಗಳಿಗೆ ಮಾಡೆಲಿಂಗ್ ಸೇರಿದಂತೆ ಹೆಚ್ಚಿನ ಅವಕಾಶಗಳು ಸಿಗಲಿದೆ, ಆಡಿಷನ್ ಮೂಲಕ ಆಯ್ಕೆಯಾಗುವವರಿಗೆ ಸ್ಪರ್ಧೆಗೆ ಬೇಕಾದ ಅಗಮಾಡುತ್ತಿದ್ದನು ಸಂಸ್ಥೆ ಮಾಡಿಕೊಡಲಿದೆ, ಇದರಿಂದಾಗಿ ಭಯವಿಲ್ಲದೆ ಸ್ಪರ್ಧೆಯಲ್ಲಿ ಪಾಲ್ಗೊಳ್ಳಬಹುದಾಗಿದೆ ಎಂದರು.

 

ಫ್ಯಾಷನ್ ಶೋ ಆಡಿಷನ್ ನಲ್ಲಿ ಶಾಸಕ ಜ್ಯೋತಿಗಣೇಶ್, ಪ್ರಗತಿ ಟಿವಿ ಸಿ ಇ ಓ ಶಿಲ್ಪ .ಎಸ್ ಮಾಲ್ ಮಾಲೀಕರಾದ ನಾಗರಾಜಶೆಟ್ಟಿ, ಚಿತ್ರ ನಟರಾದ ಅರ್ಜುನ್ ಯೋಗೇಶ್, ನಟಿ ಹಿಮಾರಾವ್ ಭಾಗವಹಿಸಲಿದ್ದಾರೆ ಎಂದ ಅವರು ಆಡಿಷನ್ ನಲ್ಲಿ ಆಯ್ಕೆಯಾಗುವವರು ಮುಂದಿನ ಸುತ್ತಿನ ಸ್ಪರ್ಧೆಗೆ ತಯಾರಾಗಬೇಕಿದ್ದು, ಈ ನಿಟ್ಟಿನಲ್ಲಿ ಯಾರಿಗೂ ತೊಂದರೆ ಆಗದಂತೆ ರಜೆ ದಿನಗಳಲ್ಲಿಯೇ ಸ್ಪರ್ಧೆ ನಡೆಸಲಾಗುವುದು ಎಂದರು.

 

ಸುದ್ದಿಗೋಷ್ಠಿಯಲ್ಲಿ ಸಂಸ್ಥಾಪಕ ಶ್ರೀರಘು, ಸಂಯೋಜಕರಾದ ಸರಿತಾ ಪ್ರಸಾದ್, ಪ್ರಸಾದ್, ರೇಣುಕೇಶ್, ನವೀನ್ ಇತರರಿದ್ದರು.

Leave a Reply

Your email address will not be published. Required fields are marked *

You cannot copy content of this page

error: Content is protected !!
Exit mobile version