ಪರಿಸರ ಪ್ರೇಮಿ ಅನುಭವಿ ಪತ್ರಕರ್ತ :- ರಮೇಶ್ ಬಿ ಗುಂಡಾಪುರ
ಹನೂರು: ತಾಲೋಕು ಕಂಡ ಪ್ರತಿಭಾನ್ವಿತ ಪತ್ರಕರ್ತ ರಮೇಶ್ ಗುಂಡಾಪುರವರ ಪರಿಸರ ಸಂಬಂಧಿತ ಪ್ರೋತ್ಸಾಹ, ಪ್ರೇರಣಾ ಕವನಗಳು ಪ್ರಸ್ತುತ ಸಂದರ್ಭದಲ್ಲಿ ಪರಿಸರ ಪ್ರೇಮಿಗಳು ಹಾಗೂ ಪ್ರಜ್ಞಾವಂತ ನಾಗರಿಕರ ಪ್ರಶಂಸೆಗೆ ಪಾತ್ರವಾಗುತ್ತಿವೆ.
ಪತ್ರಕರ್ತ ರಮೇಶ್ ಸುಮಾರು ವರ್ಷಗಳಿಂದ ಕವಿ ಮತ್ತು ಲೇಖಕರಾಗುವ ಕನಸೊಂದಿದ್ದ ರಮೇಶ್ ಕಾರಣಾಂತರಗಳಿಂದ ಹನೂರು ತಾಲೂಕಿನ ಒಬ್ಬ ಅನುಭವಿ ಪತ್ರಕರ್ತರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಹಲವು ವರ್ಷ ಬೆಂಗಳೂರಿನಲ್ಲಿ ವ್ಯಾಸಂಗ ಮಾಡಿ ಸಮಾಜದ ಬಗ್ಗೆ ಮತ್ತು ಪರಿಸರದ ಅಪಾರ ಕಾಳಜಿ ಇಟ್ಟು ಪತ್ರಕರ್ತ ವೃತ್ತಿಯಲ್ಲಿ ಸತ್ಯ ಮತ್ತು ಪ್ರಾಮಾಣಿಕವಾಗಿ ವರದಿಗಳನ್ನು ಮಾಡುತ್ತ ತಾಲೂಕಿನಲ್ಲಿ ಅಪಾರ ಜನಪ್ರಿಯತೆಯನ್ನು ಗಳಿಸಿದ್ದಾರೆ.
ಪ್ರಚಾರದಿಂದ ದೂರ ಉಳಿದು ಎಲೆ ಮರೆಕಾಯಿಯಂತೆ ತಮ್ಮ ಪರಿಸರ ಪ್ರೇಮವನ್ನು ತಮ್ಮ ಚೊಚ್ಚಲ ಕವನದಲ್ಲಿ ಸಾದಾರಪಡಿಸಿರುವುದು ಅವರಲ್ಲಿನ ಅಪರಿಮಿತ ಪರಿಸರ ಕಾಳಜಿಗೆ ಹಿಡಿದ ಕೈಗನ್ನಡಿಯಾಗಿದೆ.
ನಮಸ್ಕಾರ ಎಂಬ ಕವನದಲ್ಲಿ ತಮ್ಮ ಊರಿನ ಚರಿತ್ರೆಯನ್ನು ಸಾರುತ್ತಿದ್ದ ಬೃಹತ್ ಅರಳಿ ಮರ ಧರಗೆ ಉರುಳಿ ಅದು ಇಲ್ಲದ ನೋವನ್ನು ಕಂಡು ಅರಳಿ ಮರದ ಮಹತ್ವವನ್ನು ಸಾರಿರುವುದು, ನಾನೊಬ್ಬ ಬಡವ ನಾ ನೆಡುವೆ ಒಂದು ಗಿಡವ, ಅಮರ ಇನ್ನಿತರೆ ಕವನಗಳು ಓದುಗರನ್ನು ಮಂತ್ರ ಮುಗ್ಧರನ್ನಾಗಿಸಿವೆ.
ಮರಗಿಡಗಳ ಉಳಿವಿಗಾಗಿ ಪಣ ತೊಟ್ಟ ಸುಂದರ್ ಲಾಲ್ ಬಹುಗುಣ, ಸಾಲು ಮರದ ತಿಮ್ಮಕ್ಕ ಅವರಂತ ಮಹನೀಯರು ಅಗ್ರಗಣ್ಯ ಸ್ಥಾನದಲ್ಲಿ ನಿಲ್ಲುತ್ತಾರೆ. ಇಂತಹ ಮೇರು ವ್ಯಕ್ತಿಗಳ ಕಾಯಕವೇ ಸದಾ ಹಸಿರು. ಅಂತಹವರನ್ನು ತಮ್ಮ ಕವನದಲ್ಲಿ ಸ್ಮರಿಸಿದ್ದಾರೆ.
ಇದೇ ರೀತಿ ಅವರು ಸಾಮಾಜಿಕ ಜಾಲಾತಾಣಗಳಲ್ಲಿ ತಮ್ಮ ಕವನಗಳ ಮೂಲಕ ಮರಗಿಡ, ಪರಿಸರ ಸಂರಕ್ಷಣೆ ಬಗ್ಗೆ ಜಾಗೃತಿ ಮೂಡಿಸುತ್ತಿರುವುದು ಶ್ಲಾಘನೀಯ ವಿಚಾರ. ಇನ್ನು ಸಾರ್ವಜನಿಕ ವಲಯದಲ್ಲಿ ಇಂತಹ ಪ್ರತಿಭಾವಂತ ಅನುಭವಿ ಮತ್ತು ಸಾಮಾಜಿಕ ಕಳಕಳಿ ಉಳ್ಳಾ ಪತ್ರಕರ್ತರು ಹೆಚ್ಚಾಗಿ ಮುನ್ನೆಲೆಗೆ ಬಂದು ಸತ್ಯ ಮತ್ತು ನ್ಯಾಯದ ಪರವಾಗಿ ತಮ್ಮ ಸೇವೆ ಸಲ್ಲಿಸಲಿ ಎಂದು ಹಾರೈಸಿದ್ದಾರೆ.
ವರದಿ :- ನಾಗೇಂದ್ರ ಪ್ರಸಾದ್