ಯೋಗ್ಯವಲ್ಲದ ಟೈರ್ ಅಳವಡಿಸಿ ಚಾಲನೆ : ಮುಜುರಾಯಿ ಇಲಾಖೆ ವಿರುದ್ಧ ಪ್ರಯಾಣಿಕರ ಆಕ್ರೋಶ
ಚಾಮರಾಜನಗರ : ಜೆಲ್ಲೆಯ ಹನೂರು ತಾಲೂಕಿನಲ್ಲಿ ಶ್ರೀ ಮಲೈ ಮಹದೇಶ್ವರ ಬೆಟ್ಟ ಪ್ರಾಧಿಕಾರಕ್ಕೆ ಸೇರಿರುವ ಬಸ್ಗಳಲ್ಲಿ ಯೋಗ್ಯವಲ್ಲದ ಚಕ್ರ ಅಳವಡಿಸಿ ಚಾಲನೆ ಮಾಡುತ್ತಿರುವ ಮುಜುರಾಯಿ ಇಲಾಖೆ ವಿರುದ್ಧ ರೈತ ಮುಖಂಡರು ಅಕ್ರೋಶ ವ್ಯಕ್ತಪಡಿಸಿದ್ದಾರೆ.
ಹನೂರು ತಾಲೂಕಿನ ಶ್ರೀ ಮಲೆ ಮಹದೇಶ್ವರ ಬೆಟ್ಟದ ಪ್ರಾಧಿಕಾರಕ್ಕೆ ಸೇರಿರುವ ಬಸ್ಸೋoದು ಕೊಳ್ಳೇಗಾಲ ಖಾಸಗಿ ಬಸ್ ನಿಲ್ದಾಣದಲ್ಲಿ ಬೆಂಗಳೂರಿಗೆ ತೆರಳಲು ನಿಂತಿದ್ದ ವೇಳೆ ರೈತ ಮುಖಂಡರೊಬ್ಬರು ಸೂಕ್ತವಲ್ಲದ ಯೋಗ್ಯವಲ್ಲದ ಟೈರ್ ಗಳನ್ನು ಅಳವಡಿಸಿ ಚಾಲನೆ ಮಾಡುತ್ತಿದ್ದೀರಲ್ಲ ಏನಾದರೂ ಅಪಾಯ ಅಪಘಾತವಾದರೆ ಯಾರು ಹೊಣೆ, ಮಲೈ ಮಹದೇಶ್ವರ ಸನ್ನಿದಿಯಲ್ಲಿ ತಿಂಗಳಿಗೆ ಕೋಟ್ಯಾಂತರ ರೂಪಾಯಿ ದೇಣಿಗೆ ಕಾಣಿಕೆ ಸಂಗ್ರಹವಾಗುತ್ತಿದ್ದರು.
ಉತ್ತಮ ಗುಣಮಟ್ಟದ ಚಕ್ರವನ್ನು ಅಳವಡಿಸಲು ತಮಗೆ ಸಾಧ್ಯವಿಲ್ಲವೇ ದೇವಸ್ಥಾನದ ಆಡಳಿತ ಅಧಿಕಾರಿಗೆ ಜವಾಬ್ದಾರಿಲ್ಲವೇ ಈ ಬಸ್ಸಿನಲ್ಲಿ ಪ್ರಯಾಣ ಮಾಡುವ ಚಾಲಕರು ಮತ್ತು ಸಾರ್ವಜನಿಕರಿಗೆ ಮತ್ತು ಅವರ ಕುಟುಂಬಕ್ಕೆ ಏನಾದರೂ ಅಪಾಯವಾದರೆ ಯಾರು ಹೊಣೆ ಈಗ ಅಪಘಾತಗಳಾಗಿ ಸಾವು ನೋವುಗಳ ಸಂಖ್ಯೆ ನಿಮ್ಮ ಕಣ್ಣಿಗೆ ಕಾಣುತ್ತಿಲ್ಲವೇ ಎಂದು ಅಕ್ರೋಶ ವ್ಯಕ್ತಪಡಿಸಿ ಕೂಡಲೇ ಸೂಕ್ತವಾದ ಟೈರ್ ಗಳನ್ನು ಅಳವಡಿಸಿ ಬಸ್ ಚಾಲನೆ ಮಾಡಲು ಸರ್ವೋದಯ ಕರ್ನಾಟಕ ಪಕ್ಷದ ಕೊಳ್ಳೇಗಾಲ ತಾಲೂಕು ರೈತ ಸಂಘದ ಮುಖಂಡರಾದ ಮಾದೇವ ಪಿ,ಕುಮಾರ್, ವಾಸು,ಮಲ್ಲೇಶ,ಸೂರಾಪುರ ಕುಮಾರ್, ಬಸವರಾಜು ಅಗ್ರಹಿಸಿದ್ದಾರೆ.
ವರದಿ :- ನಾಗೇಂದ್ರ ಪ್ರಸಾದ್