ಕೇಂದ್ರ ಹಾಗೂ ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಕಾಂಗ್ರೆಸ್ ಬಗ್ಗೆ ಟೀಕಿಸುವುದು ಸರಿಯಲ್ಲ_ ಡಾಕ್ಟರ್ ಜಿ ಪರಮೇಶ್ವರ್.
ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಪಕ್ಷದವರು ಕಾಂಗ್ರೆಸ್ ಪಕ್ಷವನ್ನು ಅವಹೇಳನಕಾರಿಯಾಗಿ ಮಾತನಾಡುತ್ತಿದ್ದಾರೆ ಕೀಳುಮಟ್ಟದ ಭಾಷೆಯನ್ನು ಪ್ರಯೋಗಿಸಿ ಮಾತನಾಡುತ್ತಿದ್ದಾರೆ .ಕಾಂಗ್ರೆಸ್ ಪಕ್ಷ ಈ ದೇಶದಲ್ಲಿ ಏನು ಮಾಡಿಲ್ಲ ಎಂದು ಮಾತನಾಡುತ್ತಿರುವುದು ಸರಿಯಲ್ಲ ಎಂದು ಡಾಕ್ಟರ್ ಜಿ ಪರಮೇಶ್ವರ್ ಅವರು ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಭಾನುವಾರ ತುಮಕೂರಿನ ಅಮಾನಿಕೆರೆಯ ಗಾಜಿನ ಮನೆಯಲ್ಲಿ ಕಾಂಗ್ರೆಸ್ ಪಕ್ಷದ ವತಿಯಿಂದ ನಡೆದ ಬೆಲೆ ಏರಿಕೆ ನೀತಿ ವಿರುದ್ಧ, ಜನಜಾಗೃತಿ ಅಭಿಯಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು ಕಾರ್ಯಕ್ರಮದಲ್ಲಿ ಮಾತನಾಡಿದ ಮಾಜಿ ಉಪಮುಖ್ಯಮಂತ್ರಿ ಡಾಕ್ಟರ್ ಜಿ ಪರಮೇಶ್ವರ್ ಅವರು ಈ ದೇಶದಲ್ಲಿ ರೈತರ ನ್ಯಾಯಕ್ಕಾಗಿ, ರೈತರಿಗೆ ಆಗುವಂತಹ ಸಮಸ್ಯೆಗಳಿಗಾಗಿ ಒಂದು ವರ್ಷ ಸತತವಾಗಿ ಹೋರಾಟ ಮಾಡುವಂತಹ ಸಂದರ್ಭದಲ್ಲಿ ಹಲವು ರೈತರು ತಮ್ಮನ್ನು ತಾವು ಅರ್ಪಣೆ ಮಾಡಿಕೊಂಡಿದ್ದಾರೆ ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದರು.
ಇನ್ನು ಯಾರೋ ಸಾಮಾನ್ಯ ಕಾರ್ಯಕರ್ತರು ಕಾಂಗ್ರೆಸ್ ಬಗ್ಗೆ ಕೀಳಾಗಿ ಮಾತನಾಡಿದರೆ ನಮಗೆ ನೋವಾಗುತ್ತಿರಲಿಲ್ಲ ಆದರೆ ಈ ದೇಶದ ಆಡಳಿತ ಮಾಡುತ್ತಿರುವ ಪ್ರಧಾನಮಂತ್ರಿಗಳು ಅವರ ಸಂಪುಟದ ಮುಖ್ಯ ಸದಸ್ಯರುಗಳು, ಪಕ್ಷದ ಮುಖ್ಯಸ್ಥರುಗಳು ಕಾಂಗ್ರೆಸ್ ಪಕ್ಷ ಈ ದೇಶಕ್ಕೆ ಏನು ಮಾಡಿಲ್ಲ ಎಂದು ಮಾತನಾಡುತ್ತೀರಲ್ಲಾ ನಿಮಗೆ ಇತಿಹಾಸ ಓದಲು ಹೇಳಬೇಕು ಎಂದು ಪ್ರಶ್ನಿಸಿದರು.
ಕಾಂಗ್ರೆಸ್ನ ಇತಿಹಾಸವನ್ನು ಕಾಂಗ್ರೆಸ್ ಚರಿತ್ರೆಯನ್ನು ಓದಿಕೊಳ್ಳಿ ನೀವು ಕಾಂಗ್ರೆಸ್ ಪಕ್ಷ ಈ ದೇಶಕ್ಕೆ ಈ ದೇಶಕ್ಕೆ ಸ್ವತಂತ್ರ ತಂದು ಕೊಟ್ಟಿದೆ ನಿಮಗೆ ಜ್ಞಾಪಕ ಇರಲಿ ಎಂದರು.
ನಾವು ಕಾಂಗ್ರೆಸ್ನವರು ನಿಮ್ಮನ್ನು ಪ್ರಶ್ನೆ ಮಾಡುತ್ತಿದ್ದೇವೆ ಸ್ವಾತಂತ್ರ್ಯ ಹೋರಾಟದಲ್ಲಿ ಎಲ್ಲಿದ್ದೀರಿ ನೀವು? ಕಾಂಗ್ರೆಸ್ ಪಕ್ಷ ಸ್ವತಂತ್ರ ಬಂದಾಗಿನಿಂದ ಇಲ್ಲಿಯವರೆಗೂ 54 ವರ್ಷ ಕೇಂದ್ರದಲ್ಲಿ ಆಡಳಿತ ಮಾಡಿದ್ದೇವೆ ಸುಮ್ಮನೆ ಮಾಡಲಿಲ್ಲ ಸ್ವಾತಂತ್ರ್ಯ ಭಾರತದಲ್ಲಿ ಭವ್ಯ ಭಾರತವನ್ನು ನಾವು ಕಟ್ಟಿದ್ದೇವೆ ನೀವಲ್ಲ ಕಾಂಗ್ರೆಸ್ ಪಕ್ಷ ಎಂಬುದು ನೆನಪಿರಲಿ ಎಂದು ಬಿಜೆಪಿ ಪಕ್ಷವನ್ನು ತೀವ್ರ ತರಾಟೆಗೆ ತೆಗೆದುಕೊಂಡರು.
ಪ್ರತಿಕ್ಷಣ ಪ್ರತಿದಿನ ಕಾಂಗ್ರೆಸ್ ಪಕ್ಷವನ್ನು ಟೀಕೆ ಮಾಡುತ್ತಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ನ ಪ್ರತಿಯೊಬ್ಬ ಕಾರ್ಯಕರ್ತರು ಮನೆ ಮನೆಗೆ ಹೋಗಬೇಕು ಎದೆತಟ್ಟಿಕೊಂಡು ಹೇಳಿ ಕಾಂಗ್ರೆಸ್ನವರು ಏನು ಮಾಡಿದ್ದೇವೆ ಎಂದು ಸಾಮಾಜಿಕ ನ್ಯಾಯವನ್ನು ಕೊಡುವಂತಹ ಕೆಲಸ ಮಾಡಿದ್ದೇವೆ .ಅದಕ್ಕಾಗಿ ಸೋನಿಯಾಗಾಂಧಿ ರಾಹುಲ್ ಗಾಂಧಿ ರವರು ಜನಜಾಗೃತಿ ಸಮಾವೇಶವನ್ನು ಮಾಡಲು ತಿಳಿಸಿದ್ದಾರೆ ಎಂದರು.
ಇನ್ನೂ ದೇಶದ ಜನತೆಗೆ ಅಗತ್ಯ ವಸ್ತುಗಳ ಬೆಲೆ ಏರಿಕೆಯನ್ನು ಮಾಡಿ ದೇಶದ ಜನತೆಯ ಮೇಲೆ ಬರೆ ಎಲೆಯಲು ಹೊರಟಿರುವ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಒಮ್ಮೆ ಆತ್ಮಾವಲೋಕನ ಮಾಡಿಕೊಳ್ಳಲಿ ಎಂದು ಟಾಂಗ್ ನೀಡಿದ್ದಾರೆ.
ತುಮಕೂರಿನಲ್ಲಿ ನಡೆದ ಜನಜಾಗೃತಿ ಸಮಾವೇಶದಲ್ಲಿ ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ ಶಿವಕುಮಾರ್, ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ, ಮಾಜಿ ಉಪಮುಖ್ಯಮಂತ್ರಿಗಳಾದ ಡಾಕ್ಟರ್ ಜಿ ಪರಮೇಶ್ವರ್, ಮಾಜಿ ಸಚಿವರಾದ ಟಿ.ಬಿ ಜಯಚಂದ್ರ, ಮಾಜಿ ಶಾಸಕರಾದ ಕೆ ಎನ್ ರಾಜಣ್ಣ, ಶಫಿ ಅಹಮದ್, ರಫೀಕ್ ಅಹಮದ್, ಪಾವಗಡ ಶಾಸಕರಾದ ವೆಂಕಟರಮಣಪ್ಪ, ಮಾಜಿ ಸಂಸದರಾದ ಮುದ್ದಹನುಮೇಗೌಡ, ತಿಪಟೂರು ಮಾಜಿ ಶಾಸಕರಾದ ಷಡಕ್ಷರಿ ,ಕಾಂಗ್ರೆಸ್ ವಕ್ತಾರ ಮುರಳಿದರ ಹಾಲಪ್ಪ ಹಾಗೂ ತುಮಕೂರು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ರಾಮಕೃಷ್ಣಪ್ಪ ಸೇರಿದಂತೆ ಹಲವು ಕಾಂಗ್ರೆಸ್ ಮುಖಂಡರು ಭಾಗವಹಿಸಿದ್ದರು