ತಾಯಿ ಮಕ್ಕಳ ಧಾರುಣ ಸಾವು ಪ್ರಕರಣ ವೈದ್ಯ ಹಾಗೂ ಮೂವರು ನರ್ಸ್ ಗಳು ಅಮಾನತು_ ಆರೋಗ್ಯ ಸಚಿವ ಕೆ ಸುಧಾಕರ್ ಹೇಳಿಕೆ.
ತುಮಕೂರು_ತುಮಕೂರಿನಲ್ಲಿ ತಾಯಿ ಮಕ್ಕಳ ಧಾರುಣ ಸಾವಿನ ಹಿನ್ನೆಲೆಯಲ್ಲಿ ತುಮಕೂರು ಜಿಲ್ಲಾಸ್ಪತ್ರೆಗೆ ಆರೋಗ್ಯ ಸಚಿವ ಕೆ ಸುಧಾಕರ್ ಅವರು ಖುದ್ದು ಬೇಟಿ ನೀಡಿ ಒಂದು ಗಂಟೆಗೂ ಹೆಚ್ಚು ಕಾಲ ಸುದೀರ್ಘ ಚರ್ಚೆ ನಡೆಸಿ ಅಧಿಕಾರಿಗಳಿಂದ ಮಾಹಿತಿ ಪಡೆದರು.
ಇದೇ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿರುವ ಆರೋಗ್ಯ ಸಚಿವ ಕೆ ಸುಧಾಕರ್ ರವರು ಇನ್ನು ತಾಯಿ ಹಾಗೂ ಮಕ್ಕಳ ಧಾರುಣ ಸಾವು ನಿಜಕ್ಕೂ ಆಗಾತ ತಂದಿದೆ ಇಂತಹ ಘಟನೆ ನಡೆದಿರುವುದು ಅಮಾನವೀಯ ಹಾಗೂ ದುರದೃಷ್ಟಕರ ಮುಂದೆ ಈ ರೀತಿ ಆಗದಂತೆ ಇಲಾಖೆ ಸೂಕ್ತ ಕ್ರಮ ತೆಗೆದುಕೊಳ್ಳಲಿದೆ ಎಂದರು.
ಇನ್ನು ಹೆರಿಗೆ ನೋವಿನಿಂದ ಬಳಲುತ್ತಿದ್ದ ಮಹಿಳೆಗೆ ಚಿಕಿತ್ಸೆ ಕೊಡಿಸಲು ಸ್ಥಳೀಯರು ಜಿಲ್ಲಾಸ್ಪತ್ರೆಗೆ ಕರೆತಂದಿದ್ದು ಆಕೆ ಬಂದಾಗ ದಾದಿಯರು ಒಳಗಡೆ ಕರೆದುಕೊಂಡು ಹೋಗಿರುವುದು ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು ಈ ವೇಳೆ ತಾಯಿ ಕಾರ್ಡ್ ಹಾಗೂ ಆಧಾರ್ ಕಾರ್ಡ್ ಕೇಳಿದ್ದು ಅವರ ಬಳಿ ಲಭ್ಯವಿಲ್ಲದ ಕಾರಣ ಆಕೆಯು ಪುನಃ ಮನೆಗೆ ಮರಳಿದ್ದಾರೆ ಇನ್ನು ಆಕೆಯ ಮೊದಲ ಹೆರಿಗೆ ಸಹಜವಾಗಿ ಆಗಿದ್ದು ಇದು ಸಹ ಅದೇ ರೀತಿ ಆಗಬಹುದು ಎನ್ನುವ ಮನಸ್ಥಿತಿಯಲ್ಲಿ ಪುನಃ ಮನೆಗೆ ಮರಳಿದ್ದು ನಂತರ ಈ ಘಟನೆ ನಡೆದಿದೆ ಎಂದು ಮೇಲ್ನೋಟಕ್ಕೆ ಕಂಡುಬಂದಿದೆ ಎಂದರು.
ಇನ್ನು ಜಿಲ್ಲಾಸ್ಪತ್ರೆಗೆ ಬಂದ ಕೂಡಲೇ ವಿಶೇಷ ಆರೈಕೆಯಲ್ಲಿ ಚಿಕಿತ್ಸೆ ನೀಡಬಹುದಿತ್ತು ಆದರೆ ಅದು ಸಾಧ್ಯವಾಗಿಲ್ಲ ಮೇಲ್ನೋಟಕ್ಕೆ ದಾದಿಯರು ಹಾಗೂ ವೈಧ್ಯೆ ಕರ್ತವ್ಯ ಲೋಪ ಎಸಗಿದ್ದಾರೆ. ಇನ್ನು ತಾವು ಕೂಡ ಈ ಘಟನೆಯಿಂದ ಬಹಳ ದಿಗ್ಭ್ರಮೆಗೊಂಡಿರುವುದಾಗಿ ತಿಳಿಸಿದ್ದಾರೆ.
ಮೃತಪಟ್ಟ ಮಹಿಳೆಗೆ ಹೆಣ್ಣು ಮಗು ಇದ್ದು ಇಂದು ನಿರ್ಗತಿಗಳಾಗಿದ್ದು ಆಕೆಯನ್ನು ಕುಟುಂಬದವರು ಪೋಷಿಸದಿದ್ದಲ್ಲಿ ಜಿಲ್ಲಾಡಳಿತದಿಂದ 18 ವರ್ಷದವರೆಗೂ ಉಚಿತ ಶಿಕ್ಷಣ ವಸತಿ ಕಲ್ಪಿಸಲು ವ್ಯವಸ್ಥೆ ಮಾಡುತ್ತೇವೆ ಹಾಗೂ ವೈಯಕ್ತಿಕವಾಗಿ ನಾನು ಮಗುವಿನ ಅಕೌಂಟಲ್ಲಿ ಎಫ್ ಡಿ ಮಾಡಲು ಮುಂದಾಗುತ್ತೇನೆ ಎಂದಿದ್ದಾರೆ.
ಇನ್ನು ಘಟನೇ ಸಂಬಂಧ ವೈದ್ಯ ಹಾಗೂ ಶುಶ್ರೂಷಕರನ್ನ ಕೂಡಲೇ ಅಮಾನತು ಪಡಿಸಿ ಇಲಾಖಾ ತನಿಖೆಗೆ ಒಳಪಡಿಸಿ ಉನ್ನತ ತನಿಖೆಗೂ ಸಹ ಆದೇಶ ದೇಶ ಮಾಡಿದ್ದು ಜಿಲ್ಲಾ ಶಸ್ತ್ರ ಚಿಕಿತ್ಸಕರಿಗೂ ಸಹ ನೋಟಿಸ್ ನೀದುವುದಾಗಿ ತಿಳಿಸಿದ್ದಾರೆ.
ಘಟನೆ ಸಂಬಂಧ ಬೆಂಗಳೂರಿನ ವಾಣಿವಿಲಾಸ್ ಸೇರಿದಂತೆ ಹಿರಿಯ ಅಧಿಕಾರಿಗಳ ನೇತೃತ್ವದಲ್ಲಿ ತಂಡ ರಚಿಸಿ ತನಿಖೆ ನಡೆಸಿ 2 ವಾರದಲ್ಲಿ ವರದಿ ನೀಡುವಂತೆ ಸೂಚಿಸಿದ್ದು ವರದಿ ಬಂದ ನಂತರ ಕಠಿಣ ಕಾನೂನು ಕ್ರಮ ತೆಗೆದುಕೊಳ್ಳಲಿದ್ದೇವೆ ಎಂದ ಅವರು ಮುಂದಿನ ದಿನದಲ್ಲಿ ಈ ತರಹದ ಘಟನೆಗಳು ಮರುಕಳಿಸಿದರೆ ಕ್ರಿಮಿನಲ್ ಮುಖದ ಮೇಲೆ ಸಹ ಓಡುವ ಬಗ್ಗೆ ಕ್ರಮ ತೆಗೆದುಕೊಳ್ಳಲಾಗುವುದು ಎಂದರು
ಇನ್ನು ವಿಪಕ್ಷ ನಾಯಕರ ತಿರುಗೇಟಿಗೆ ಸಂಬಂಧಿಸಿದಂತೆ ಪ್ರತಿಕ್ರಿಸಿದ ಅವರು ಇನ್ನು ಘಟನೆ ಸಂಬಂಧ ಯಾರು ಏನೇ ಮಾತನಾಡಿದರು ಇದರಲ್ಲಿ ರಾಜಕೀಯ ಬೆರೆಸುವ ಬಗ್ಗೆ ಇಷ್ಟಪಡುವುದಿಲ್ಲ ಎಂದ ಅವರು ಮುಂದೆ ಈ ರೀತಿ ಆಗದಂತೆ ಸೂಕ್ತ ಕ್ರಮ ತೆಗೆದುಕೊಳ್ಳುವುದಂತೂ ಸತ್ಯ ಎಂದಿದ್ದಾರೆ.
ಇನ್ನು ರಾಜ್ಯದಲ್ಲೂ ಸಹ ಸಾಕಷ್ಟು ಆರೋಗ್ಯ ಕೇಂದ್ರಗಳಲ್ಲಿ ಪದೇಪದೇ ಇಂತಹ ಘಟನೆಗಳು ಮರುಕಳಿಸುತ್ತಿದ್ದು ಇದರ ಬಗ್ಗೆ ಕಠಿಣ ಕಾನೂನು ತರುವ ಅವಶ್ಯಕತೆ ಇದ್ದು ಮುಂಬರುವ ವಿಧಾನಸಭೆಯಲ್ಲಿ ಈ ಬಗ್ಗೆ ಚರ್ಚೆ ನಡೆಸಿ ಕ್ರಮ ಕೈಗೊಳ್ಳಲಾಗುವುದು ಎಂದರು
ಇದೇ ಸಂದರ್ಭದಲ್ಲಿ ತುಮಕೂರು ನಗರ ಶಾಸಕ ಜ್ಯೋತಿ ಗಣೇಶ್ , ಜಿಲ್ಲಾಧಿಕಾರಿ ವೈ ಎಸ್ ಪಾಟೀಲ್ , ಜಿಲ್ಲಾ ಪಂಚಾಯತ್ ಸಿಇಓ ವಿದ್ಯಾ ಕುಮಾರಿ, ಅಡಿಷನಲ್ ಎಸ್ಪಿ ಉದೇಶ್, ಡಿ.ಹೆಚ್. ಓ ಮಂಜುನಾಥ್,ಜಿಲ್ಲಾ ಸರ್ಜನ್ ವೀಣಾ ಸೇರಿದಂತೆ ಹಲವು ಅಧಿಕಾರಿಗಳು ಬೇಟಿ ಹಾಜರಿದ್ದರು
ವರದಿ _ಮಾರುತಿ ಪ್ರಸಾದ್ ತುಮಕೂರು