ಕೊರೊನಾ ಸೋಂಕಿನ ಬಗ್ಗೆ ನಿರ್ಲಕ್ಷö್ಯ ಬೇಡ : ಮಾಜಿ ಶಾಸಕ ಡಾ.ರಫೀಕ್ ಅಹ್ಮದ್
ತುಮಕೂರು: ತುಮಕೂರು ನಗರ ಸೇರಿದಂತೆ ಜಿಲ್ಲೆಯಲ್ಲಿ ಕೋರೋನ ಸೋಂಕಿತರ ಪ್ರಮಾಣ ಇಳಿಕೆಯಾದ ಹಿನ್ನೆಲೆಯಲ್ಲಿ ಸರಕಾರ ಗುರುವಾರ ಲಾಕ್‌ಡೌನ್ ಸಡಿಲಿಕೆ ಘೋಷಿಸಿದ್ದು, ಜನಸಾಮಾನ್ಯರು ಇವುಗಳನ್ನು ಪಾಲಿಸುವ ಮೂಲಕ ಜಿಲ್ಲೆಯನ್ನು ಸಂಪರ‍್ಣ ಕೋರೋನ ಮುಕ್ತ ಜಿಲ್ಲೆಯಾಗಿಸಲು ಮುಂದಾಗಬೇಕು ಎಂದು ತುಮಕೂರು ನಗರ ಕ್ಷೇತ್ರದ ಮಾಜಿ ಶಾಸಕ ಡಾ.ರಫೀಕ್ ಅಹ್ಮದ್ ಮನವಿ ಮಾಡಿದ್ದಾರೆ.
ಲಾಕ್‌ಡೌನ್ ಸಡಿಲಿಕೆ ಮಾಡಿರುವುದು ಕೋರೋನ ಹೋಗಿದೆ ಎಂದು ರ‍್ಥೈಸುವಂತಿಲ್ಲ. ಕೋರೋನ ಸೋಂಕಿನ ವೇಗ ಕಡಿಮೆಯಾಗಿದೆ ಎಂದಷ್ಟೇ ತಿಳಿಯಬೇಕಾಗಿದೆ. ಹಾಗಾಗಿ ಸರಕಾರದ ನಿಯಮಾವಳಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುವ ಮೂಲಕ ಸೋಂಕಿತರ ಸಂಖ್ಯೆ ಹೆಚ್ಚಾಗದಂತೆ ನೋಡಿಕೊಳ್ಳುವ ಜವಾಬ್ದಾರಿ ಪ್ರತಿಯೊಬ್ಬರ ನಾಗರಿಕರು, ಜನಪ್ರತಿನಿಧಿಗಳು, ಅಧಿಕಾರಿಗಳ ಮೇಲಿದೆ.
ಜಿಲ್ಲೆಯಲ್ಲಿ ಸೋಂಕಿಗೆ ತುತ್ತಾಗುತ್ತಿರುವವರ ಸಂಖ್ಯೆ ಶೇ೧೩ರಷ್ಟಿದ್ದರೂ, ಸಕ್ರಿಯ ಪ್ರಕರಣಗಳು ತೀರ ಕಡಿಮೆ ಇರುವ ಕಾರಣ ಸರಕಾರ ಜೂನ್ ೧೪ ರಿಂದ ಹಲವಾರು ಸಡಿಲಿಕೆ ನೀಡಿದ್ದು. ಆದರೆ ಇದನ್ನೇ ನೆಪವಾಗಿಟ್ಟುಕೊಂಡು ಅನಗತ್ಯವಾಗಿ ಜನರು ರಸ್ತೆಗೆ ಇಳಿದರೆ ಮತ್ತೊಮ್ಮೆ ಲಾಕ್‌ಡೌನ್‌ಗೆ ಒಳಗಾಗಬೇಕಾಗುತ್ತದೆ ಎಂಬ ಎಚ್ಚರ ಜನರಲ್ಲಿ ಇರಬೇಕು. ಹಣ್ಣು,ದಿನಸಿ ಪದರ‍್ಥಗಳನ್ನು ಕೊಳ್ಳಲು ಈ ಹಿಂದಿನoತೆ ದೂರದ ಮಾರುಕಟ್ಟೆಗಳಿಗೆ ಹೋಗುವ ಬದಲು ಮನೆಯ ಬಳಿಯೇ ಇರುವ ಅಂಗಡಿಗಳಲ್ಲಿ ಕೊಳ್ಳುವುದನ್ನು ಮುಂದುವರೆಸುವುದು ಸೂಕ್ತ. ಅಲ್ಲದೆ ಮನೆಯಿಂದ ಹೊರ ಹೋಗುವಾಗ ಕಡ್ಡಾಯವಾಗಿ ಮಾಸ್ಕ್ ಧರಿಸುವುದರ ಜೊತೆಗೆ, ಮನೆಗೆ ಬಂದ ನಂತರ ಸ್ಯಾನಿಟೈಜರ್ ಬಳಸಿ, ನಂತರ ಸೋಪಿನಿಂದ ಕೈತೊಳೆಯುವುದನ್ನು ಮರೆಯಬಾರದು. ಗುಂಪು ಗುಂಪಾಗಿ ಕುಳಿತು ಹರಟೆ ಹೊಡೆಯುತ್ತಾ, ಚಹ ಕುಡಿಯುವುದು, ಸಿಗರೇಟ್ ಸೇದುವುದು ಮಾಡುವುದರಿಂದ ಮತ್ತೊಮ್ಮೆ ಕೋರೋನ ವ್ಯೂಹದಲ್ಲಿ ಸಿಲುಕುವ ಸಾಧ್ಯತೆ ಹೆಚ್ಚಿರುತ್ತದೆ. ಆದ್ದರಿಂದ ಜನರು ಸಾಧ್ಯವಾದಷ್ಟು ಸಾಮಾಜಿಕ ಅಂತರ ಕಾದುಕೊಳ್ಳುವುದು ಸೂಕ್ತ ಎಂದು ಡಾ.ರಫೀಕ್ ಅಹ್ಮದ್ ಅಭಿಪ್ರಾಯಪಟ್ಟಿದ್ದಾರೆ.
ಈಗಾಗಲೇ ಮೂರನೇ ಅಲೆಯ ಬಗ್ಗೆ ಸಾಕಷ್ಟು ಊಹಾಪೋಹಗಳು ಹರಿದಾಡುತ್ತಿದ್ದು, ಮಕ್ಕಳು ಹೆಚ್ಚು ತೊಂದರೆಗೆ ಒಳಗಾಗಲಿದ್ದಾರೆ ಎಂಬುದು ತಜ್ಞರ ಅಭಿಪ್ರಾಯವಾಗಿದೆ. ಆದ್ದರಿಂದ ಚಿಕ್ಕ ಮಕ್ಕಳನ್ನು ಅವರ ಇಷ್ಟದಂತೆ ಆಟವಾಡಲು ಬಿಡದೆ, ಅವರು ಚಟುವಟಿಕೆಯಿಂದಿರಲು ರಚನಾತ್ಮಕ ಆಟಗಳಲ್ಲಿ ಅವರನ್ನು ತೊಡಗಿಕೊಳ್ಳುವಂತೆ ಪೋಷಕರು ಮಾಡಬೇಕಾಗಿದೆ. ಮಕ್ಕಳಲ್ಲಿ ಸೋಂಕಿನ ಲಕ್ಷಣಗಳು ಕಂಡು ಬಂದಲ್ಲಿ ಕೂಡಲೇ ವೈದ್ಯರ ಬಳಿ ಭೇಟಿ ನೀಡಿ ಪರೀಕ್ಷೆಗೆ ಒಳಗಾಗುವುದು ಸೂಕ್ತ. ಈ ನಿಟ್ಟಿನಲ್ಲಿ ಪ್ರತಿಯೊಬ್ಬ ಪೋಷಕರು ತಮ್ಮ ಮಕ್ಕಳ ಬಗ್ಗೆ ಎಚ್ಚರ ವಹಿಸುವಂತೆ ಡಾ.ರಫೀಕ್ ಅಹ್ಮದ್ ಮನವಿ ಮಾಡಿದ್ದಾರೆ.