ಕಾರ್ಯಕರ್ತರನ್ನು ಓಲೈಸಿಕೊಳ್ಳುವಲ್ಲಿ ವಿಫಲರಾದರಾ ಜೆಡಿಎಸ್ ಮುಖಂಡ ಎನ್.ಗೋವಿಂದರಾಜು

ಕಾರ್ಯಕರ್ತರನ್ನು ಓಲೈಸಿಕೊಳ್ಳುವಲ್ಲಿ ವಿಫಲರಾದರಾ ಜೆಡಿಎಸ್ ಮುಖಂಡ ಎನ್.ಗೋವಿಂದರಾಜು

ತುಮಕೂರು : ಜೆಡಿಎಸ್ ಪಕ್ಷದ ಮಹತ್ವಾಕಾಂಕ್ಷೆಯ ಆಲೋಚನೆಗಳನ್ನು ಮುಂದಿಟ್ಟುಕೊಂಡು ಪಂಚರತ್ನ ರಥಯಾತ್ರೆಯನ್ನು ರಾಜ್ಯಾದ್ಯಂತ ನಡೆಸುತ್ತಿದ್ದು, ಅದರ ಭಾಗವಾಗಿ ಡಿಸೆಂಬರ್ 01 ರಂದು ತುಮಕೂರು ನಗರಕ್ಕೆ ಆಗಮಿಸಲಿದ್ದು, ಇದರ ಸಾರಥ್ಯವನ್ನು ಆಯಾ ಕ್ಷೇತ್ರದ ಮುಖಂಡರು, ಟಿಕೇಟ್ ಆಕಾಂಕ್ಷಿಗಳಿಗೆ ಈ ರಥ ಯಾತ್ರೆಯನ್ನು ಯಶಸ್ವಿಗೊಳಿಸುವ ಜವಾಬ್ದಾರಿಯನ್ನು ನೀಡಲಾಗಿದೆಂದು ಇತ್ತೀಚೆಗೆ ಸುದ್ಧಿಗೋಷ್ಠಿಯೊಂದರಲ್ಲಿ ಜಿಲ್ಲಾಧ್ಯಕ್ಷರಾದ ಆರ್.ಸಿ.ಆಂಜಿನಪ್ಪನವರು ತಿಳಿಸಿರುತ್ತಾರೆ.

 

 

 

 

ಅದರಂತೆ ತುಮಕೂರು ನಗರದ ಬಹುತೇಕ ಸಾರಥ್ಯವನ್ನು ಎನ್.ಗೋವಿಂದರಾಜುರವರು ತೆಗೆದುಕೊಂಡಿರುತ್ತಾರೆ, ಆದರೆ ಅವರು ಪಕ್ಷದ ಎಲ್ಲಾ ನಾಯಕರನ್ನು, ಮುಖಂಡರನ್ನು, ಮಿಗಿಲಾಗಿ ನಿಷ್ಠಾವಂತ ಕಾರ್ಯಕರ್ತರುಗಳನ್ನು ಕಡೆಗಣಿಸಿದ್ದಾರೆಂಬ ಪ್ರಬಲವಾದ ಸುದ್ಧಿ ಪಕ್ಷದ ಆಂತರಿಕ ವಲಯದಲ್ಲಿ  ಹರಿದಾಡುತ್ತಿದೆ. ಇದಕ್ಕೆ ಪುಷ್ಠಿ ನೀಡುವಂತೆ ಗೋವಿಂದರಾಜುರವರು ರಥಯಾತ್ರೆಯ ಸಂಪೂರ್ಣ ವಿವರ, ರೂಪುರೇಷೆ, ಇತ್ಯಾದಿಗಳ ಬಗ್ಗೆ ಚರ್ಚೆಯಾಗಲೀ, ತಮ್ಮ ಆಲೋಚನೆಗಳನ್ನು ಹಂಚಿಕೊಳ್ಳುತ್ತಿಲ್ಲವೆಂಬ ಸುದ್ಧಿ ಹರಿದಾಡುತ್ತಿದೆ.

 

 

 

 

ಪಕ್ಷದ ಕಾರ್ಯಕರ್ತರುಗಳು ತಮ್ಮ ಪಕ್ಷದ ಮೇಲಿನ ಅಭಿಮಾನ, ಪಕ್ಷದ ನಿಷ್ಠೆಗಾಗಿ, ಕುಮಾರಣ್ಣನವರು ಮುಖ್ಯಮಂತ್ರಿಗಳಾಗಬೇಕೆಂಬ ಕನಸು ಕಾಣುತ್ತಿದ್ದಾರೆ, ಅದಕ್ಕೆ ಗೋವಿಂದರಾಜು ತಣ್ಣಿರು ಎರೆಚುವ ಕೆಲಸ ಮಾಡುತ್ತಿದ್ದಾರೆ, ಯಾರೊಬ್ಬ ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೇ ಕೇವಲ ಅವರಿಗೆ ಅತ್ಯಾಪ್ತರೆನಿಸಿದವರನ್ನು ಮಾತ್ರ ಓಲೈಸಿಕೊಂಡು ಕೆಲಸ ಮಾಡುತ್ತಿದ್ದಾರೆಂಬ ಆರೋಪಗಳು ಪಕ್ಷದ ಕಾರ್ಯಕರ್ತರುಗಳಿಂದಲೇ ಕೇಳಿ ಬರುತ್ತಿದೆ.

 

 

 

 

 

ಇತ್ತೀಚೆಗೆ ತಾನೇ ಜನತಾ ಜಲಧಾರೆಯ ಕಾರ್ಯಕ್ರಮದಲ್ಲಿ ಹಲವಾರು ಕಾರ್ಯಕರ್ತರನ್ನು ಕಡೆಗಣಿಸಿ, ರಾಜ್ಯಮಟ್ಟದ ನಾಯಕರು ಮತ್ತು ಜಿಲ್ಲೆಯ ಪ್ರಭಾವಿ ಮುಖಂಡರುಗಳ ಕೆಂಗಣ್ಣಿಗೆ ಗುರಿಯಾಗಿದ್ದರು, ಆದರೂ ಸಹ ಗೋವಿಂದರಾಜು ಮೇಲೆ ವಿಶ್ವಾಸವಿಟ್ಟು ಪಂಚರತ್ನ ಯಾತ್ರೆಯ ಸಾರಥ್ಯವನ್ನು ನೀಡಲು ಮುಂದಾಗಿದ್ದ ಜಿಲ್ಲೆಯ ನಾಯಕರುಗಳಿಗೆ ಇವರ ನಡವಳಿಕೆಯಿಂದ ಬೇಸರವುಂಟಾಗಿದೆಂದು ತಿಳಿದು ಬಂದಿದ್ದು. ರಥಯಾತ್ರೆ ತುಮಕೂರಿಗೆ ಕಾಲಿಡಲು ಇನ್ನೂ ಒಂದೇ ಒಂದು ದಿನ ಕಾಲವಕಾಶವಿದ್ದು, ಈಗಲಾದರೂ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಮುನ್ನಡೆಯುತ್ತಾರಾ, ಕಾದು ನೋಡಬೇಕಾಗಿದೆ.

Leave a Reply

Your email address will not be published. Required fields are marked *

You cannot copy content of this page

error: Content is protected !!
Exit mobile version