ದಾಸನಕೊಪ್ಪಲು ಗ್ರಾಮದಲ್ಲಿ ಇಂದು ವಿವಿಧ ಯೋಜನೆಯಡಿಯಲ್ಲಿ ನಿರ್ಮಿಸಲು ಉದ್ದೇಶಿಸಿರುವ ಹಲವು ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಾಯಿತು.

ದಾಸನಕೊಪ್ಪಲು ಗ್ರಾಮದಲ್ಲಿ ಇಂದು ವಿವಿಧ ಯೋಜನೆಯಡಿಯಲ್ಲಿ ನಿರ್ಮಿಸಲು ಉದ್ದೇಶಿಸಿರುವ ಹಲವು ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಾಯಿತು.

“ಅಭಿವೃದ್ಧಿ ಕಾಮಗಾರಿಗಳ ಸಂಕ್ಷಿಪ್ತ ವಿವರ ”

 

* 2 ಕೋಟಿ ರೂಪಾಯಿ ವೆಚ್ಚದಲ್ಲಿ ದಾಸನಕೊಪ್ಪಲು ಗ್ರಾಮದ ಮುಖ್ಯರಸ್ತೆ ಅಭಿವೃದ್ಧಿ (P.W.D.) ಕಾಮಗಾರಿಗೆ ಚಾಲನೆ.

 

* ದಾಸನಕೊಪ್ಪಲು ಗ್ರಾಮದ ಪರಿಮಿತಿಯಲ್ಲಿ 1 ಕೋಟಿ ರೂಪಾಯಿ ವೆಚ್ಚದಲ್ಲಿ ರಸ್ತೆ ಮತ್ತು ಒಳ ಚರಂಡಿ‌ ನಿರ್ಮಾಣ ಕಾಮಗಾರಿಗೆ ( R.D.P.R.) ಚಾಲನೆ.

 

* ದಾಸನಕೊಪ್ಪಲು ಗ್ರಾಮದ ವಿವಿಧ ಲಿಂಕ್ ರೋಡ್ ಗಳು ಹಾಗೂ ಒಳಚರಂಡಿ ಕಾಮಗಾರಿ ಕೈಗೊಳ್ಳಲು ಅಂದಾಜು ವೆಚ್ಚವನ್ನು ಸಿದ್ದಪಡಿಸಿ, ಸಿಸಿ ರೋಡ್ ಕಾಮಗಾರಿ ಕೈಗೆತ್ತಿಕೊಳ್ಳಲು ಅಧಿಕಾರಿಗಳಿಗೆ ತಾಕೀತು.

 

* ದಾಸನಕೊಪ್ಪಲು ಮುಂಭಾಗದ ಮುಖ್ಯರಸ್ತೆಯಲ್ಲಿ ಪಾಳು ಬಿದ್ದಿರುವ ಸರ್ಕಾರಿ ಜಮೀನನ್ನು ಸರ್ವೆ ಮಾಡಿಸಿ, ತ್ಯಾಜ್ಯ ವಸ್ತುಗಳನ್ನು ಎಸೆಯದಂತೆ ಭದ್ರಪಡಿಸಲು ಅಧಿಕಾರಿಗಳಿಗೆ ಸೂಚನೆ.

 

* ದಾಸನಕೊಪ್ಪಲು ಗ್ರಾಮಸ್ಥರಿಗೆ ಅಶ್ರಯ ಮನೆ ಕಲ್ಪಿಸಲು ಸರ್ಕಾರಿ ಜಮೀನನ್ನು ಸರ್ವೆ ಮಾಡಲು ಸೂಚನೆ.

 

ಈ ವೇಳೆ ದಾಸನಕೊಪ್ಪಲು ಗ್ರಾಮದಲ್ಲಿ ಸಾರ್ವಜನಿಕ ಜನಸಂಪರ್ಕ ಸಭೆ ನಡೆಸಿ, ಗ್ರಾಮಸ್ಥರ ಕುಂದು-ಕೊರತೆಗಳನ್ನು ಆಲಿಸುವ ಮೂಲಕ, ಜನರ ಸಮಸ್ಯೆಗಳನ್ನು ಶೀಘ್ರವಾಗಿ ಬಗೆಹರಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಲಾಯಿತು.

Leave a Reply

Your email address will not be published. Required fields are marked *

You cannot copy content of this page

error: Content is protected !!
Exit mobile version