ದೇವನಹಳ್ಳಿ: ನಾಡಿನ ವಿಷಯ ಬಂದಾಗ ಜಯಕರ್ನಾಟಕ ಸಂಘಟನೆ ಕಾನೂನಾತ್ಮಕವಾಗಿ, ಹೋರಾಟ ಮೂಲಕ, ಪ್ರತಿಭಟನೆ ಮೂಲಕ ಸಾತ್ವಿಕವಾಗಿ ಒಂದು ಎಚ್ಚರಿಕೆಯನ್ನು ಕೊಡುವ ಮೂಲಕ ಹೋರಾಟ ಮಾಡಲಾಗುತ್ತದೆ ಎಂದು ಜಯಕರ್ನಾಟಕ ಸಂಘಟನೆಯ ಬೆಂಗಳೂರು ನಗರ ನಿಗಟಪೂರ್ವ ಜಿಲ್ಲಾಧ್ಯಕ್ಷ ಜಗದೀಶ್ ಗೌಡ ತಿಳಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲಾ ಜಯಕನಾಟಕ ಸಂಘಟನೆಯ ವತಿಯಿಂದ ಹಮ್ಮಿಕೊಂಡಿದ್ದ ಜನ್ಮದಿನದ ಅಭಿನಂದನಾ ಕಾರ್ಯಕ್ರಮದಲ್ಲಿ ಪದಾಧಿಕಾರಿಗಳಿಂದ ಅಭಿನಂದನೆ ಸ್ವೀಕರಿಸಿ ಅವರು ಮಾತನಾಡಿದರು. ಜಯಕರ್ನಾಟಕ ಸಂಘಟನೆಯ ರೂವಾರಿ ಮುತ್ತಪ್ಪ ರೈ ಅವರು ಸ್ಥಾಪಿಸಿ ೧೩-೧೪ ವರ್ಷಗಳಾಗಿದೆ. ಎಲ್ಲಾ ಪದಾಧಿಕಾರಿಗಳು ಒಗ್ಗೂಡಿ ಸಂಘಟನೆಯನ್ನು ಬಲಿಷ್ಠಗೊಳಿಸಲಾಗುತ್ತಿದೆ. ಸಾಮಾಜಿಕ ಕಾರ್ಯಗಳನ್ನು ಮಾಡುವುದರ ಮೂಲಕ ಸಂಘಟನೆ ನೊಂದವರ, ಕನ್ನಡಿಗರ, ಎಲ್ಲಾರೊಂದಿಗೆ ಒಗ್ಗೂಡಿ ಕೆಲಸ ಮಾಡುತ್ತಾ ಬರುತ್ತಿದೆ. ಬಹು ಭಾಷಿಗರ ದೇಶ ನಮ್ಮ ಭಾರತ ದೇಶ, ಎಷ್ಟು ಭಾಷೆಗಳಿಗೆ ಆದ್ಯತೆ ಇದೆ ಎಂಬುವುದು ಎಲ್ಲರಿಗೂ ತಿಳಿದಿರುವ ವಿಷಯವಾಗಿದೆ. ಎಲ್ಲಾ ಪ್ರತಿಭಾನ್ವಿತ ಪ್ರಭುತ್ವದಲ್ಲಿ ಕೆಲಸ ಮಾಡಿರುವ ರಾಜಕಾರಣಿಗಳು, ಸಾಹಿತಿಗಳು, ವಿದ್ಯಾವಂತರಿಗೆಲ್ಲರಿಗೂ ಗೊತ್ತಿರುವ ವಿಷಯ. ಭಾಷೆಗಳ ಮೇಲೆ ಇನ್ನೊಂದು ಭಾಷೆಗಳನ್ನು ಅಧಿಕೃತವಾಗಿ ಹೇರಿಕೆ ಮಾಡುವಂತಹದ್ದು ಸರಿಯಾದ ಕ್ರಮವಲ್ಲ. ಅದನ್ನು . ಹಳ್ಳಿಗಳಿಂದ ತುಂಬಿರುವ ಭಾಷೆಗಳಲ್ಲಿ ಆಯಾ ಪ್ರಾಂತ್ಯಗಲು ಎಂದರು.