ರಾಜ್ಯಾದ್ಯಂತ ದಿನೇದಿನೇ ಕೊರೋನ ಸೋಂಕು ವಿಸ್ತರಿಸುತ್ತಿದ್ದು ತೀವ್ರ ಆತಂಕಕ್ಕೆ ಎಡೆಮಾಡಿದೆ.
ಇನ್ನು ಕರ್ನಾಟಕ ರಾಜ್ಯದಲ್ಲೂ ಸಹ ಪ್ರತಿ ಜಿಲ್ಲೆಗಳನ್ನು ದಿನೇದಿನೇ ಕೊರೊನಾ ಸೋಂಕು ಹೆಚ್ಚಾಗುತ್ತಿದೆ. ಸರ್ಕಾರ ಕೋರೋಣ ಸೋಂಕು ತಡೆಗೆ ಏನೆಲ್ಲ ಮಾರ್ಗಗಳನ್ನು ಅನುಸರಿಸಿದರು ಕೊರನಾ ಸೋಂಕಿತರು ಹೆಚ್ಚಾಗುತ್ತಿರುವುದು ಸರ್ಕಾರಕ್ಕೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.
ಒಂದೆಡೆ ಚುನಾವಣೆ ಕಾವು ಮತ್ತೊಂದೆಡೆ ಸಾರಿಗೆ ನೌಕರರ ಮುಷ್ಕರ ,ಸಾಲು ಸಾಲು ಹಬ್ಬಗಳು ಹೀಗೆ ಹಲವು ತೊಂದರೆಗಳು ಉಂಟಾಗಿರುವ ಸಮಯದಲ್ಲಿ ದಿನೇ ದಿನೇ ಸೋಂಕು ಹೆಚ್ಚಾಗುತ್ತಿರುವುದು ಆತಂಕದ ವಿಷಯ.
ಇನ್ನು ಪ್ರತಿದಿನ ಒಂದು ಮನೆಯಲ್ಲಿ ಒಬ್ಬ ಸೋಂಕಿತರು ಪತ್ತೆಯಾದಲ್ಲಿ ಮನೆಯಲ್ಲಿರುವ ಎಲ್ಲರನ್ನು ಪರೀಕ್ಷೆಗೊಳಪಡಿಸಿದ್ದು ಇದರ ಪಲಿತಾಂಶ ಎಲ್ಲರನ್ನು ಬೆಚ್ಚಿಬೀಳಿಸುವಂತಿದೆ. ಮನೆಯಲ್ಲಿಯೇ ಇರುವ ಅಷ್ಟು ಮಂದಿಗೂ ಕೊರೊನಾ ಸೋಂಕು ತಗುಲುತ್ತಿರುವುದು ಆತಂಕದ ವಿಷಯವಾಗಿದೆ. ಇನ್ನು ತಜ್ಞ ವೈದ್ಯರ ಪ್ರಕಾರ ಕೊರೊನಾ ಸೋಂಕು ತೀವ್ರಗತಿಯಲ್ಲಿ ಒಬ್ಬರಿಂದ ಒಬ್ಬರಿಗೆ ಹರಡುತ್ತಿರುವುದರಿಂದ ಮನೆಯಲ್ಲಿ ಇರುವ ಎಲ್ಲರೂ ಸಹ ಮಾಸ್ಕ್ ಹಾಕುವುದು ಸಾಮಾಜಿಕ ಅಂತರವನ್ನು ಕಾಪಾಡುವಷ್ಟು ಪರಿಸ್ಥಿತಿ ಬಿಗಡಾಯಿಸುತ್ತಿದೆ. ಇನ್ನಾದರೂ ಸಾರ್ವಜನಿಕರು ಎಚ್ಚೆತ್ತು ಮಾಸ್ಕ್ ಬಳಕೆ ಸಾಮಾಜಿಕ ಅಂತರ ಕಾಪಾಡುವಿಕೆ ಸೇರಿದಂತೆ ಎಲ್ಲ ತರಹದ ಮುಂಜಾಗ್ರತಾ ಕ್ರಮಗಳನ್ನು ಕೂಡಲೇ ತೆಗೆದುಕೊಳ್ಳಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಒಟ್ಟಾರೆಯಾಗಿ ದಿನದಿನ ಕೋರೋನ ಸೋಂಕು ಹೆಚ್ಚಾಗುವುದನ್ನು ತಡೆಯಬೇಕಾಗಿದೆ ಇಲ್ಲವಾದರೆ ಮುಂದಿನ ದಿನಗಳಲ್ಲಿ ದೊಡ್ಡ ಸಮಸ್ಯೆಯಾಗಿ ಪರಿಣಮಿಸುವುದುರಲ್ಲಿ ಯಾವುದೇ ಅನುಮಾನವಿಲ್ಲ.