ಮಾಜಿ ಉಪ ಮುಖ್ಯಮಂತ್ರಿಗಳು ಹಾಗೂ ಕೊರಟಗೆರೆ ಶಾಸಕರಾದ ಡಾಕ್ಟರ್ ಜಿ ಪರಮೇಶ್ವರ್ ಅವರು ತುಮಕೂರಿನ ಸಿದ್ಧಾರ್ಥ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಇಂದು ಕೋವಿಡ ಮೊದಲ ಡೋಸ್ ಲಸಿಕೆಯನ್ನು ಪಡೆದರು.
ಕೋರೋಣ ಲಸಿಕೆ ಪಡೆದ ನಂತರ ಪ್ರತಿಕ್ರಿಯಿಸಿದ ಡಾಕ್ಟರ ಜಿ ಪರಮೇಶ್ವರ್ ಅವರು ದೇಶದಾದ್ಯಂತ ಕೋರೊನ ಎರಡನೇ ಅಲೆ ವ್ಯಾಪಕವಾಗಿ ಹರಡುತ್ತಿದ್ದು ಇದರ ಮುನ್ನೆಚ್ಚರಿಕೆ ಕ್ರಮವಾಗಿ ನಾನು ಕೂಡ ಲಸಿಕೆ ಪಡೆದಿದ್ದು. ಮುಂದಿನ ದಿನಗಳಲ್ಲಿ ಕೋವಿಡ್ ಸೋಂಕು ಮತ್ತಷ್ಟು ಹೆಚ್ಚಾಗುವ ಲಕ್ಷಣಗಳು ಕಂಡು ಬರುತ್ತಿರುವ ಹಿನ್ನೆಲೆಯಲ್ಲಿ 45 ವರ್ಷ ಮೇಲ್ಪಟ್ಟ ಎಲ್ಲರೂ ಕೂಡ ಲಸಿಕೆ ಪಡೆಯಬೇಕಾಗಿದೆ ಎಂದರು. ಇನ್ನು ಕೊರೋಣ ಸಾಂಕ್ರಾಮಿಕ ರೋಗದ ಎರಡನೇ ಅಲೆ ನಮ್ಮ ದೇಶದಲ್ಲಿತೀವ್ರ ವೇಗವಾಗಿ ಹರಡುತ್ತಿದೆ. ಇದರ ಮುಂಜಾಗೃತೆಗಾಗಿ ಎಲ್ಲರೂ ಕೊರನ ನಿಯಮಗಳನ್ನು ತಪ್ಪದೆ ಪಾಲಿಸಿ ಕೂಡಲೇ ಲಸಿಕೆ ಪಡೆಯಿರಿ ಇದರಿಂದ ದೇಹದಲ್ಲಿರುವ ರೋಗ ನಿರೋಧಕ ಶಕ್ತಿ ಹೆಚ್ಚಾಗುವುದರ ಮೂಲಕ ಕೋರೋನ ತಡೆಗಟ್ಟಲು ಸಹಕಾರಿಯಾಗಲಿದೆ ಆದ್ದರಿಂದ ಕೂಡಲೇ ಎಲ್ಲರೂ ಲಸಿಕೆ ಪಡೆಯಿರಿ ಎಂದು ತಿಳಿಸಿದರು.