ಕೋವಿಡ್ ಪರೀಕ್ಷೆಗಳಿಗೆ ಹೊಸ ದರ ನಿಗಧಿ

 

ತುಮಕೂರು

ಕೋವಿಡ್-19 ಪತ್ತೆ ಹಚ್ಚಲು ನಡೆಸುವ ಆರ್ ಟಿಪಿಸಿಆರ್, ಟ್ರೂ-ನ್ಯಾಟ್, ಸಿಬಿ ನ್ಯಾಟ್,ರ್ಯಾಪಿಡ್ (rapid) ಆ್ಯಂಟಿಜನ್ ಹಾಗೂ ರ್ಯಾಪಿಡ್ ಅ್ಯಂಟಿಬಾಡಿ ಪರೀಕ್ಷೆಗಳ ದರವನ್ನು ಸರ್ಕಾರ ಮರು ನಿಗಧಿಪಡಿಸಿದೆ ಎಂದು‌ ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ತಿಳಿಸಿದ್ದಾರೆ.

 

 

ಸರ್ಕಾರಿ ಆಸ್ಪತ್ರೆಗಳಿಂದ ಖಾಸಗಿ ಪ್ರಯೋಗಶಾಲೆಗಳಿಗೆ ಮಾದರಿಗಳನ್ನು ಕಳುಹಿಸುವ

ಆರ್ ಟಿ-ಪಿಸಿಆರ್ ಪರೀಕ್ಷೆಗೆ 500ರೂ., ಖಾಸಗಿ ಆಸ್ಪತ್ರೆಗಳಿಂದ ಸ್ವೀಕೃತವಾದ ಮಾದರಿಗಳನ್ನು ಖಾಸಗಿ ಪ್ರಯೋಗಶಾಲೆಗಳಲ್ಲಿ ಪರೀಕ್ಷಿಸಿಸುವ ಆ‍ರ್ ಟಿ – ಪಿಸಿಆರ್ ಪರೀಕ್ಷೆಗೆ 800ರೂ., ಖಾಸಗಿ ಆಸ್ಪತ್ರೆಗಳಿಂದ ಸ್ವೀಕೃತವಾದ ಮಾದರಿಗಳನ್ನು ಖಾಸಗಿ ಪ್ರಯೋಗಶಾಲೆಗಳಲ್ಲಿ ಪರೀಕ್ಷಿಸಿಸುವ ಟ್ರೂ ನ್ಯಾಟ್ ಪರೀಕ್ಷೆಗೆ 1250ರೂ., ಖಾಸಗಿ ಆಸ್ಪತ್ರೆಗಳಿಂದ ಸ್ವೀಕೃತವಾದ ಮಾದರಿಗಳನ್ನು ಖಾಸಗಿ ಪ್ರಯೋಗಶಾಲೆಗಳಲ್ಲಿ ಪರೀಕ್ಷಿಸುವ ಸಿಬಿ ನ್ಯಾಟ್ ಪರೀಕ್ಷೆಗೆ 2400ರೂ., ಖಾಸಗಿ ಪ್ರಯೋಗಶಾಲೆ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ನಡೆಸುವ ರ್ಯಾಪಿಡ್ ಆಂಟಿಜೆನ್ ಪರೀಕ್ಷೆಗೆ 400ರೂ., ಖಾಸಗಿ ಪ್ರಯೋಗಶಾಲೆ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ನಡೆಸುವ ರ್ಯಾಪಿಡ್ ಆ್ಯಂಟಿಬಾಡಿ ಪರೀಕ್ಷೆಗೆ (IgG ELISA)500ರೂ.,ಗಳ ದರವನ್ನು ನಿಗಧಿಪಡಿಸಲಾಗಿದೆ.

 

ಈ ಎಲ್ಲಾ ಪರೀಕ್ಷೆಗಳ ಮಾದರಿಯನ್ನು ಮನೆಯಿಂದ ಸಂಗ್ರಹಿಸಬೇಕಾದಲ್ಲಿ ಒಂದು ಮನೆಯ ಸಂಗ್ರಹ ದರ‌ 400 ರೂ.ಗಳನ್ನು ಮೀರಬಾರದು. ಆರ್ ಟಿಪಿಸಿಆರ್, ಟ್ರೂ ನ್ಯಾಟ್, ಸಿಟಿನ್ಯಾಟ್, ರ್ಯಾಪಿಡ್ ಆಂಟಿಜೆನ್ ಹಾಗೂ ರ್ಯಾಪಿಡ್ ಆ್ಯಂಟಿಬಾಡಿ ಪರೀಕ್ಷೆಗಳನ್ನು ಐಸಿಎಂಆ‌ರ್ ಪ್ರಮಾಣಿತ ಪ್ರಯೋಗಶಾಲೆಗಳಲ್ಲಿಯೇ ನಡೆಸಬೇಕು ಎಂದು ಅವರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

You cannot copy content of this page

error: Content is protected !!
Exit mobile version