ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷದ ವತಿಯಿಂದ ದೇವೇಗೌಡರ ಮೇಲೆ ನಿರಂತರ ಅಪಪ್ರಚಾರ _ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ.

ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷದ ವತಿಯಿಂದ ದೇವೇಗೌಡರ ಮೇಲೆ ನಿರಂತರ ಅಪಪ್ರಚಾರ _ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ.

 

 

ತುಮಕೂರು_ಮಾಜಿ ಪ್ರಧಾನಿ ಎಚ್. ಡಿ ದೇವೇಗೌಡ ರವರು ರಾಜ್ಯದ ಹಲವಾರು ನೀರಾವರಿ ಯೋಜನೆಗಳಿಗೆ ಶ್ರಮಿಸಿದ್ದಾರೆ ಈ ಮೂಲಕ ರಾಜ್ಯದ ಹಲವು ಭಾಗಗಳಿಗೆ ನೀರಾವರಿ ಸೌಲಭ್ಯ ಕಲ್ಪಿಸಲು ನೆರವಾಗಿದ್ದಾರೆ ಆದರೆ ಅಂಥವರ ಬಗ್ಗೆ ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷದ ವತಿಯಿಂದ ಅಪಪ್ರಚಾರ ಮಾಡಲಾಗುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಆಕ್ರೋಶ ಹೊರಹಾಕಿದ್ದಾರೆ.

 

 

 

ತುಮಕೂರು ತಾಲೂಕಿನ ಹೆಬ್ಬೂರಿನಲ್ಲಿ ಜೆಡಿಎಸ್ ಪಕ್ಷದ ವತಿಯಿಂದ ನಡೆದ ಜನತಾ ಜಲಧಾರೆ ಸಮಾವೇಶದಲ್ಲಿ ಮಾತನಾಡಿದ ಅವರು ಜನತಾ ಜಲಧಾರೆ ಕೇವಲ ಜೆಡಿಎಸ್ ಪಕ್ಷಕ್ಕೆ ಮತ ನೀಡಲು ಮಾತ್ರವಲ್ಲ ರಾಜ್ಯದ ನೀರಾವರಿ ಸಮಸ್ಯೆಗಳನ್ನು ಬಗೆಹರಿಸಲು ಇರುವ ಪ್ರಮುಖವಾದ ಕಾರ್ಯಕ್ರಮ ಎಂದರು.

 

 

ಆದರೆ ಮಾಜಿ ಪ್ರಧಾನಿ ದೇವೇಗೌಡ ರವರು ರಾಜ್ಯದ ಹಲವರು ನೀರಾವರಿ ಯೋಜನೆಗಳ ಜಾರಿಗೆ ಕಾರಣೀಭೂತರಾಗಿದ್ದಾರೆ ಆದರೆ ಅಂಥವರ ಮೇಲೆ ನಿರಂತರ ಅಪಪ್ರಚಾರ ನಡೆಯುತ್ತಿದ್ದು ಇದಕ್ಕೆ ಮುಂದಿನ ದಿನದಲ್ಲಿ ತಕ್ಕ ಉತ್ತರ ನೀಡುವುದಾಗಿ ತಿಳಿಸಿದರು.

 

 

ಇನ್ನೂ ಮಾಜಿ ಪ್ರಧಾನಿ ದೇವೇಗೌಡರು ಮೊದಲಬಾರಿಗೆ ಶಾಸಕರಾಗಿ ಆಯ್ಕೆಯಾದಾಗ ಅಂದು ರಾಜ್ಯದಿಂದ ತಮಿಳುನಾಡಿಗೆ ಹೆಚ್ಚುವರಿಯಾಗಿ ನೀರನ್ನು ಹರಿಸುವ ಸಂಬಂಧ ಅಂದಿನ ಮುಖ್ಯಮಂತ್ರಿಗಳು ಮುಂದಾಗಿದ್ದರು ಆ ಮೂಲಕ ತಮಿಳುನಾಡಿನಿಂದ ರಾಜ್ಯಕ್ಕೆ ಭತ್ತ ಖರೀದಿ ಮಾಡಲು ಮುಂದಾಗಿದ್ದರು ಆದರೆ ಅಂದು ಈ ಬಗ್ಗೆ ಧ್ವನಿಯೆತ್ತಿ ವಿರೋಧ ವ್ಯಕ್ತಪಡಿಸಿದ್ದು ಇದೆ ದೇವೇಗೌಡ ರವರು ಆ ಮೂಲಕ ರಾಜ್ಯದ ಹಾಗೂ ಕಾವೇರಿ ನದಿ ಭಾಗದ ಜನರಿಗೆ ಅನ್ಯಾಯ ಮಾಡಲು ಹೊರಟಿದ್ದಾರೆ ಬಗ್ಗೆ ಧ್ವನಿಯೆತ್ತಿದ್ದು ಇದೇ ದೇವೇಗೌಡರು ಆದರೆ ಇಂದು ಅದೇ ದೇವೇಗೌಡರ ವಿರುದ್ಧ ನಿರಂತರ ಅಪಪ್ರಚಾರಗಳನ್ನು ಕೆಲವು ಕಿಡಿಗೇಡಿಗಳು ಮಾಡುತ್ತಿದ್ದಾರೆ ಆದರೆ ಇಂತಹ ಅಪಪ್ರಚಾರಗಳನ್ನು ನಾನು ಸಹಿಸಲಾರೆ ಎಂದರು.

 

 

ಇಂದು ಅವರ ಹೋರಾಟದ ಫಲವೇ ಹಾರಂಗಿ, ಕಬಿನಿ ಜಲಾಶಯಗಳು ನಿರ್ಮಾಣವಾಗಲು ಸಹಕಾರಿ ಆಗಿವೆ , ಇನ್ನು ತುಮಕೂರು ಜಿಲ್ಲೆಗೆ ಹೇಮಾವತಿ ಜಲಾಶಯದಿಂದ 29 ಟಿಎಂಸಿ ನೀರು ಹಂಚಿಕೆ ಆಗಿದ್ದು ಸುಮಾರು 3.24 ಹೆಕ್ಟೇರ್ ಪ್ರದೇಶಕ್ಕೆ ತುಮಕೂರು ಜಿಲ್ಲೆಗೆ ನೀರಾವರಿ ಆಗಲಿದೆ ಎಂದರು ಇದು ದೇವೇಗೌಡರು ತುಮಕೂರು ಜಿಲ್ಲೆಗೆ ಹಾಗೂ ರೈತರಿಗೆ ಕೊಟ್ಟ ಕೊಡುಗೆ ಎಂದು ಕುಮಾರಸ್ವಾಮಿ ತಿಳಿಸಿದರು .

 

ಇಂದು ಸಹ ಮಾಜಿ ಪ್ರಧಾನಿ ದೇವೇಗೌಡರಾಗಲಿ ಅಥವಾ ಅವರ ಕುಟುಂಬದವರು ಆಗಲಿ ತುಮಕೂರು ಜಿಲ್ಲೆಯ ಜನತೆಯ ಜೊತೆ ಪ್ರೀತಿ ,ವಿಶ್ವಾಸ ತಮ್ಮ ಮೇಲಿದ್ದು ಇಂತಹ ಜನರ ಋಣದಲ್ಲಿ ತಾವು ಇರುವುದಾಗಿ ತಿಳಿಸಿದ ಅವರು ಮುಂದೆಯೂ ಸಹ ತಮ್ಮ ಕುಟುಂಬದ ಮಕ್ಕಳಾಗಿ ಇರಲಿದ್ದೇವೆ ಎಂದು ಭಾವುಕರಾದರು.

 

 

 

ಇನ್ನು ಜನತಾ ಜಲದಾರೆ ಕಾರ್ಯಕ್ರಮ ರಾಜ್ಯಾದ್ಯಂತ ಯಶಸ್ವಿಯಾಗಲು ರಾಜ್ಯದ ಜನತೆಯ ಸಹಕಾರ ಅವಶ್ಯಕವಾಗಿದ್ದು ಮುಂದಿನ ದಿನದಲ್ಲಿ ಜೆಡಿಎಸ್ ಪಕ್ಷಕ್ಕೆ ಸಂಪೂರ್ಣ ಬಹುಮತ ನೀಡಿ ಗೆಲ್ಲಿಸಲು ರಾಜ್ಯದ ಜನತೆಗೆ ಮನವಿ ಮಾಡಿದ್ದು ಈ ಮೂಲಕ ತಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ರಾಜ್ಯದ ನೀರಾವರಿ ಸಮಸ್ಯೆಗಳನ್ನು ಬಗೆಹರಿಸಲು ತಮ್ಮ ಪಕ್ಷ ಮುಂದಾಗಲಿದೆ ಹಾಗಾಗಿ ರಾಜ್ಯದ ಜನತೆ ಮುಂಬರುವ ಚುನಾವಣೆಯಲ್ಲಿ ತಮಗೆ ಹಾಗೂ ತಮ್ಮ ಪಕ್ಷಕ್ಕೆ ಬಹುಮತವನ್ನು ನೀಡಿ ಪಕ್ಷವನ್ನು ಅಧಿಕಾರಕ್ಕೆ ತರಬೇಕು ಎಂದು ಮನವಿ ಮಾಡಿದರು.

 

 

 

 

ಕಾರ್ಯಕ್ರಮದಲ್ಲಿ ತುಮಕೂರು ಗ್ರಾಮಾಂತರ ಶಾಸಕ ಡಿ ಸಿ ಗೌರಿಶಂಕರ್ ,ತುರುವೇಕೆರೆ ಮಾಜಿ ಶಾಸಕ ಎಂ ಟಿ ಕೃಷ್ಣಪ್ಪ, ಪಾವಗಡ ಮಾಜಿ ಶಾಸಕ ಕೆ ಎಂ ತಿಮ್ಮರಾಯಪ್ಪ, ಜೆಡಿಎಸ್ ಜಿಲ್ಲಾಧ್ಯಕ್ಷ ಆರ್ ಸಿ ಆಂಜಿನಪ್ಪ, ಪಾಲನೇತ್ರಯ ಸಿರಾಕ್ ರವಿ, ಬೆಳ್ಳಿ ಲೋಕೇಶ್ ಸೇರಿದಂತೆ ಹಲವು ಮುಖಂಡರು ಹಾಗೂ ಕಾರ್ಯಕರ್ತರು ಕಾರ್ಯಕ್ರಮದಲ್ಲಿ ಹಾಜರಿದ್ದರು.

 

ವರದಿ ಮಾರುತಿ ಪ್ರಸಾದ್ ತುಮಕೂರು

Leave a Reply

Your email address will not be published. Required fields are marked *

You cannot copy content of this page

error: Content is protected !!
Exit mobile version