ಗೃಹ ಸಚಿವರ ನೇತೃತ್ವದಲ್ಲಿ ಭ್ರಷ್ಟಾಚಾರ ತುಂಬಿ ತುಳುಕುತ್ತಿದೆ _ಕಾಂಗ್ರೆಸ್ ಮುಖಂಡ ಬಿ.ಕೆ ಹರಿಪ್ರಸಾದ್ ಗಂಭೀರ ಆರೋಪ.

ಗೃಹ ಸಚಿವರ ನೇತೃತ್ವದಲ್ಲಿ ಭ್ರಷ್ಟಾಚಾರ ತುಂಬಿ ತುಳುಕುತ್ತಿದೆ _ಕಾಂಗ್ರೆಸ್ ಮುಖಂಡ ಬಿ.ಕೆ ಹರಿಪ್ರಸಾದ್ ಗಂಭೀರ ಆರೋಪ.

 

 

ತುಮಕೂರು_ ಕರ್ನಾಟಕ ರಾಜ್ಯದ ಗೃಹ ಸಚಿವರಾದ ಆರಗ ಜ್ಞಾನೇಂದ್ರ ರವರ ನೇತೃತ್ವದಲ್ಲಿ ಇಂದು ಭ್ರಷ್ಟಾಚಾರ ತುಂಬಿ ತುಳುಕುತ್ತಿದೆ ಎಂದು ಕಾಂಗ್ರೆಸ್ ನ ಹಿರಿಯ ಮುಖಂಡ ಬಿ.ಕೆ ಹರಿಪ್ರಸಾದ್ ಗೃಹಸಚಿವರ ಅರಗ ಜ್ಞಾನೇಂದ್ರ ರವರ ಮೇಲೆ ಗಂಭೀರ ಆರೋಪ ಮಾಡಿದ್ದಾರೆ.

 

 

 

 

ತುಮಕೂರಿನ ಕಾರಗೃಹಕ್ಕೆ ಭೇಟಿ ನೀಡಿ ಎನ್ಎಸ್ಯುಐ ಕಾರ್ಯಕರ್ತರನ್ನು ಭೇಟಿ ಮಾಡಿದ ಅವರು ನಂತರ ಪತ್ರಕರ್ತರೊಂದಿಗೆ ಮಾತನಾಡಿದ್ದು ಇನ್ನು ರಾಜ್ಯದ ಗೃಹ ಸಚಿವರ ವಿರುದ್ಧ ವಿದ್ಯಾರ್ಥಿಗಳು ಪ್ರತಿಭಟನೆ ಮಾಡಿದ್ದು ಆ ಸಮಯದಲ್ಲಿ ಪೊಲೀಸ್ ಅವರು ಕಾನೂನುಬಾಹಿರವಾಗಿ ವಿದ್ಯಾರ್ಥಿಗಳನ್ನು ಬಂಧಿಸಿ ದ್ದಾರೆ ಎಂದು ತಿಳಿಸಿದ ಅವರು ವಿದ್ಯಾರ್ಥಿಗಳ ಮೇಲೆ ಇಲ್ಲಸಲ್ಲದ ಆರೋಪ ಮಾಡಿ ಕಠಿಣ ಸೆಕ್ಷನ್ ಗಳನ್ನು ಹಾಕಿ ವಿದ್ಯಾರ್ಥಿಗಳನ್ನು ಜೈಲಿಗೆ ಹಾಕಿದ್ದಾರೆ ಎಂದು ಆಕ್ರೋಶ ಹೊರಹಾಕಿದ್ದಾರೆ.

 

 

 

ರಾಜ್ಯದ ಗೃಹ ಸಚಿವರಾದ ಆರಗ ಜ್ಞಾನೇಂದ್ರ ರವರು ತುಮಕೂರು ಜಿಲ್ಲೆಯ ಉಸ್ತುವಾರಿಯನ್ನು ಹೊಂದಿದ್ದು ವಿದ್ಯಾರ್ಥಿಗಳು ಶಿಕ್ಷಣ ಸಚಿವರ ಬಗ್ಗೆ ಪ್ರತಿಭಟನೆ ಮಾಡುವಾಗ ಅವರ ವಿರುದ್ಧ ಕಠಿಣ ಸೆಕ್ಷನ್ ಗಳನ್ನು ಹಾಕಿರುವುದನ್ನು ಗಮನಿಸಿದಾಗ ಅವರು ಪಕ್ಷತೀತವಾಗಿ ಇಲ್ಲ ಹಾಗೂ ಸಂವಿಧಾನ ಚೌಕಟ್ಟಿನಲ್ಲಿ ಇಲ್ಲ ಅನ್ನೋದು ಸ್ಪಷ್ಟವಾಗಿದೆ ಎಂದು ಆರೋಪಿಸಿದರು.

 

 

ಇತ್ತೀಚಿಗೆ ಬೆಂಗಳೂರಿನ ಗಾಂಧಿ ಭವನದಲ್ಲಿ ಬಿಜೆಪಿ ಗೂಂಡಾಗಳು ಹೋಗಿ ರೈತ ನಾಯಕನ ಮೇಲೆ ಹಲ್ಲೆ ಮಾಡಿದಾಗ ಅವರ ಮೇಲೆ ಸ್ವಾಭಾವಿಕ ಕೇಸ್ ಗಳನ್ನು ದಾಖಲು ಮಾಡಿದ್ದಾರೆ. ಇನ್ನು ದೇಶ ಹಾಗೂ ರಾಜ್ಯದಲ್ಲಿ ಗಂಭೀರ ಕೇಸ್ ಗಳನ್ನು ಹಾಕುವುದಾದರೆ ಅದು ರಾಜ್ಯದ ಗೃಹ ಸಚಿವರ ಮೇಲೆ ಹಾಕಬೇಕು ಇನ್ನೂ ರಾಜ್ಯದ ಗೃಹ ಸಚಿವರ ನೇತೃತ್ವದಲ್ಲಿ ಇಂದು ರಾಜ್ಯದಲ್ಲಿ ಭ್ರಷ್ಟಾಚಾರ ತುಂಬಿ ತುಳುಕುತ್ತಿದೆ ಎಂದಿರುವ ಅವರು ಇನ್ನು ರಾಜ್ಯದ ಪೊಲೀಸರ ಮೇಲೆ ಕೆಟ್ಟ ಭಾಷೆಯನ್ನು ಪ್ರಯೋಗ ಮಾಡುವುದರಲ್ಲಿ ಈ ದೇಶದಲ್ಲೇ ಯಾರು ಇಲ್ಲ ಈ ಗೃಹ ಸಚಿವರ ಮೇಲೆ ಪೊಲೀಸ್ ಅಧಿಕಾರಿಗಳು ಮಾಡಿರುವ ಆರೋಪ ಅದಕ್ಕೆ ಅನುಗುಣವಾಗಿ ಇವರ ಮೇಲೆ ಕೇಸ್ ದಾಖಲು ಮಾಡಬೇಕಿತ್ತು.

 

ಆದರೆ ಗೃಹಸಚಿವರು ವಿದ್ಯಾರ್ಥಿಗಳ ಮೇಲೆ ಕಠಿಣ ಕಾನೂನಿನ ಪ್ರಯೋಗ ಮಾಡಿದ್ದು ಗೃಹಸಚಿವರು ಏನೇ ಮಾಡಿದರೂ ಮುಂದಿನ ಆರು ತಿಂಗಳೊಳಗೆ ಮಾತ್ರ ಮಾಡಬಹುದು  ಎಂದು ಗೃಹ ಸಚಿವರ ವಿರುದ್ಧ ಕಿಡಿಕಾರಿದ್ದಾರೆ.

 

ಇದೇ ಸಂದರ್ಭದಲ್ಲಿ ತುಮಕೂರು ಜಿಲ್ಲಾ ಕಾಂಗ್ರೆಸ್ ಘಟಕದ ಅಧ್ಯಕ್ಷರಾದ ಆರ್ ರಾಮಕೃಷ್ಣಪ್ಪ, ಮುರಳೀಧರ ಹಾಲಪ್ಪ ಸೇರಿದಂತೆ ಹಲವು ಮುಖಂಡರು ಹಾಜರಿದ್ದರು

Leave a Reply

Your email address will not be published. Required fields are marked *

You cannot copy content of this page

error: Content is protected !!
Exit mobile version