ನಗರದಲ್ಲಿ ಶಾಂತಿ, ಸೌಹಾರ್ಧತೆ ಕಾಪಾಡಲು ಜಿಲ್ಲಾ ಕಾಂಗ್ರೆಸ್ ಮುಖಂಡರ ಮನವಿ
ತುಮಕೂರು: ತುಮಕೂರು ನಗರದಲ್ಲಿ ಎರಡು ದಿನಗಳ ಹಿಂದೆ ನಡೆದಿರುವ ಟ್ರಾಫೀಕ್ ವಿಚಾರವಾಗಿ ನಡೆದ ಗಲಭೆಗೆ ಕೋಮು ಬಣ್ಣ ಕಟ್ಟಿ ನಗರದಲ್ಲಿ ಶಾಂತಿ ಕದಡುವ ಯತ್ನಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡರುಗಳು ಹಾಗೂ ಮಾಜಿ ಶಾಸಕರಾದ, ಎಸ್.ಷಫಿ ಅಹ್ಮದ್ ಮತ್ತು ಡಾ.ರಫೀಕ್ ಅಹ್ಮದ್ ರವರ ನೇತೃತ್ವದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳನ್ನು ಭೇಟಿ ಮಾಡಿ, ನಗರದಲ್ಲಿ ಶಾಂತಿ ಕಾಪಾಡುವಂತೆ ಮನವಿ ಮಾಡಿದ್ದಾರೆ.
ಈ ವೇಳೆ ಮಾತನಾಡಿದ ಮಾಜಿ ಶಾಸಕ ಡಾ.ರಫೀಕ್ ಅಹ್ಮದ್ ರವರು, ದಾರಿ ಬಿಡುವ ವಿಚಾರದಲ್ಲಿ ಇಬ್ಬರ ನಡುವೆ ನಡೆದಿರುವ ಘಟನೆಯನ್ನೇ ದೊಡ್ಡದು ಮಾಡಿ ತುಮಕೂರು ಬಂದ್‌ಗೆ ಮುಂದಾಗಿದ್ಧಾರೆ. ಘಟನೆಗೆ ಸಂಬoಧಿಸಿದoತೆ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಕಳೆದ ೨೦ ವರ್ಷಗಳಿಂದ ಮುಸ್ಲಿಂ ಮತ್ತು ಹಿಂದೂಗಳು ಅಣ್ಣ ತಮ್ಮಂದಿರoತೆ, ಶಾಂತಿ ಸೌಹಾರ್ಧತೆಯಿಂದ ಬದುಕುತಿದ್ದೇವೆ. ಹಾಗಾಗಿ ಹೊರಗಿನ ಶಕ್ತಿಗಳು ಈ ಘಟನೆ ಲಾಭ ಪಡೆದು ನಗರದ ಜನರಲ್ಲಿರುವ ಶಾಂತಿ ಸೌಹಾರ್ಧತೆ ಕದಡದಂತೆ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಲಾಗಿದೆ ಎಂದರು.
ಮಾಜಿ ಶಾಸಕ ಎಸ್.ಷಪಿ ಅಹ್ಮದ್ ರವರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳನ್ನು ಭೇಟಿಯಾಗಿ ಮಾತನಾಡಿ, ಕಳೆದ ಹತ್ತಾರು ವರ್ಷಗಳಿಂದ ಕಾಪಾಡಿಕೊಂಡು ಬಂದಿರುವ ಸಹೋದರತೆ, ಬಾತೃತ್ವವನ್ನು ಕದಡಲು ಅವಕಾಶ ನೀಡಬಾರದು ಎಂದು ಮನವಿ ಮಾಡಲಾಗಿದೆ ಎಂದರು . ಎರಡು ಕಡೆಯ ಯುವಕರು ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡು ಶಾಂತಿಯಿoದ ವರ್ತಿಸಬೇಕೆಂಬುದು ನಮ್ಮ ಮನವಿಯಾಗಿದೆ ಎಂದರು.
ಪಾಲಿಕೆಯ ವಿರೋಧಪಕ್ಷದ ನಾಯಕ ಕೆ.ಕುಮಾರ್ ಮಾತನಾಡಿ, ರಸ್ತೆಯಲ್ಲಿ ಜಾಗ ಬಿಡುವ ವಿಚಾರಕ್ಕೆ ನಡೆದ ಘಟನೆಗೆ ಕೋಮು ಬಣ್ಣ ಹಚ್ಚಿ, ವಿಚಿದ್ರಕಾರಿ ಶಕ್ತಿಗಳು ತಮ್ಮ ರಾಜಕೀಯ ಬೆಳೆ ಬೇಯಿಸಿಕೊಳ್ಳಲು ಮುಂದಾಗಿವೆ. ಈಗಾಗಲೇ ಪೊಲೀಸರು ಘಟನೆಗೆ ಕಾರಣರಾದ ಆರೋಪಿಗಳನ್ನು ಬಂಧಿಸಿದ್ದಾರೆ. ಮುಂದೆ ಇಂತಹ ಘಟನೆ ನಡೆಯದಂತೆ ನಾವೆಲ್ಲರೂ ಎಚ್ಚರಿಕೆ ವಹಿಸಬೇಕಾಗಿದೆ ಎಂದರು.
ವಕೀಲರಾದ ಟಿ.ಎಸ್.ನಿರಂಜನ್ ಮಾತನಾಡಿ, ಇಬ್ಬರು ವ್ಯಕ್ತಿಗಳ ನಡುವೆ ನಡೆದ ಘಟನೆ ದುರ್ಘಟನೆಯಾಗಬಾರದು, ಇಬ್ಬರು ವ್ಯಕ್ತಿಗಳ ಕಿತ್ತಾಟ ಸಮುದಾಯದ ಕಿತ್ತಾಟವಾಗದಂತೆ ಹಾಗೂ ಅಮಾಯಕ ಯುವಕರು ಬಲಿಯಾಗದಂತೆ ನೋಡಿಕೊಳ್ಳುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದು ತಿಳಿಸಿದರು.
ಈ ವೇಳೆ ಪಾಲಿಕೆಯ ಆರೋಗ್ಯ ಮತ್ತು ಸಾಮಾಜಿಕ ನ್ಯಾಯ ಸ್ಥಾಯಿಸಮಿತಿ ಅಧ್ಯಕ್ಷ ನಯಾಜ್, ಪಾಲಿಕೆ ಸದಸ್ಯ ಮಹೇಶ್, ಮುಖಂಡರಾದ ಚಿಕ್ಕರಂಗಯ್ಯ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳಾದ ಜಿ.ರಾಜು, ಮೆಹಬೂಬ್ ಪಾಷ ಮತ್ತು ಇನ್ನಿತರ ಮುಖಂಡರಾದ ಮಂಜಣ್ಣ, ಶೆಟ್ಟಳಯ್ಯ, ರಾಜೇಂದ್ರ, ಅಯಾಜ್, ಉಬೇದ್, ಪ್ರಣೀತ್, ಜಾಕೀರ್ ಪಾಷ ಸೇರಿದಂತೆ ಹಲವರು ಜೊತೆಗಿದ್ದರು.