ಪೆಗಾಸಸ್ ಸ್ಪೈವೇರ್ ಮೂಲಕ ಸ್ನೂಪ್ ಗೆ ಡಾಕ್ಟರ್ ಜಿ ಪರಮೇಶ್ವರ್ ಕಳವಳ.

ಪೆಗಾಸಸ್ ಸ್ಪೈವೇರ್ ಮೂಲಕ ಸ್ನೂಪ್ ಗೆ ಡಾಕ್ಟರ್ ಜಿ ಪರಮೇಶ್ವರ್ ಕಳವಳ.

ಪೆಗಾಸಸ್ ಸ್ಪೈವೇರ್ ಮೂಲಕ ವಿಶ್ವದಾದ್ಯಂತ 50 ಸಾವಿರಕ್ಕೂ ಹೆಚ್ಚು ಗಣ್ಯ ವ್ಯಕ್ತಿಗಳು ಪತ್ರಕರ್ತರು ರಾಜಕಾರಣಿಗಳು ಹಾಗೂ ಹಲವು ಗಣ್ಯರ ಮೇಲೆ ಪೆಗಾಸಸ್ ಸಾಫ್ಟ್ವೇರ್ ಬಳಸಿ ಗುರುತಿಸಲಾಗದ ಏಜೆನ್ಸಿಯವರು ಯಶಸ್ವಿಯಾಗಿ ಸ್ನೂಪ್ ಮಾಡಿದ್ದಾರೆ ಎಂದು ದಿವೈರ್ ಸ್ವತಂತ್ರ ಸುದ್ದಿ ವೆಬ್ಸೈಟ್ ಭಾನುವಾರ ವರದಿ ಮಾಡಿದ್ದು ಇದಕ್ಕೆ ಪ್ರತಿಕ್ರಿಯಿಸಿದ ಕಾಂಗ್ರೆಸ್ ನ ಹಿರಿಯ ಮುಖಂಡರು, ಮಾಜಿ ಉಪಮುಖ್ಯಮಂತ್ರಿಗಳಾದ ಡಾಕ್ಟರ್ ಜಿ ಪರಮೇಶ್ವರ್ ಅವರು ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.

 

 

ತುಮಕೂರಿನಲ್ಲಿ ಪ್ರತಿಕ್ರಯಿಸಿದ ಡಾಕ್ಟರ್ ಜಿ ಪರಮೇಶ್ವರ್ ಅವರು ವಿಶ್ವದಾದ್ಯಂತ 50 ಸಾವಿರಕ್ಕೂ ಹೆಚ್ಚು ಕಾಲ್ಗಳನ್ನು ಹೊಂದಾಣಿಕೆ ಮಾಡುವ ಮೂಲಕ ಪೆಗಾಸಸ್ ಸ್ಪೈವೇರ್ ಬಳಸಿ ಸ್ನೂಪ್ ಮಾಡುವ ಮೂಲಕ ಮಾಹಿತಿ ಕದಿಯಲು ದೊಡ್ಡ ಷಡ್ಯಂತ್ರ ನಡೆದಿರುವುದು ಎಲ್ಲರಲ್ಲೂ ಆತಂಕ ತಂದೊಡ್ಡಿದೆ ಎಂದರು.

ದೇಶದ ಗಣ್ಯ ವ್ಯಕ್ತಿಗಳ ಮಾಹಿತಿ ಸೋರಿಕೆ ಆತಂಕ…..?

ಈ ಮೂಲಕ ಭಾರತದಲ್ಲಿನ ಪತ್ರಕರ್ತರು, ವಿರೋಧಪಕ್ಷದ ನಾಯಕರು, ಸರ್ಕಾರಿ ಅಧಿಕಾರಿಗಳನ್ನು ಸಹ ಇದಕ್ಕೆ ಗುರಿಯಾಗಿದ್ದು ಯಾರು ಏಕೆ ಮಾಡಿದ್ದಾರೆ ಎಂದು ತಿಳಿಯುತ್ತಿಲ್ಲ ಈ ಮೂಲಕ ಮಾಹಿತಿ ಕದಿಯಲು ದೊಡ್ಡ ಷಡ್ಯಂತ್ರ ನಡೆದಿದೆ ಎಂದರು.

 

ತಾವು ಕೂಡ ಮಾಧ್ಯಮಗಳ ವರದಿಯನ್ನು ನೋಡಿ ಅಚ್ಚರಿಯಾಗಿದ್ದು ಈ ತರಹ ಕೂಡ ಮಾಹಿತಿ ಕದಿಯಲು ಕಾರ್ಯತಂತ್ರ ರೂಪಿಸಿರುವುದು ಆಶ್ಚರ್ಯಕ್ಕೆ ಎಡೆಮಾಡಿಕೊಟ್ಟಿದ್ದು ಈ ಬಗ್ಗೆ ಸಮಗ್ರ ತನಿಖೆ ಆಗಬೇಕಾಗಿದೆ ಯಾರು ಏತಕ್ಕಾಗಿ ಈ ತರಹ ಮಾಹಿತಿ ಕದಿಯಲು ಪ್ರಯತ್ನಿಸುತ್ತಿದ್ದಾರೆ ಎಂದು ದೇಶದ ಜನರಿಗೆ ತಿಳಿಯಬೇಕಾಗಿದೆ ಈ ಬಗ್ಗೆ ಕೇಂದ್ರ ಸರ್ಕಾರ ಸ್ಪಷ್ಟ ನಿರ್ಧಾರ ಪ್ರಕಟಿಸಬೇಕು ಎಂದರು.

 

ದೇಶಾದ್ಯಂತ ಹಲವು ಸರ್ಕಾರಗಳು ಈ ಸ್ನೂಪ್ ಗೆ ಬಲಿಯಾಗಿದ್ದು ಎಲ್ಲಿ ಏನು ನಡೆಯುತ್ತಿದೆ ಎಂದು ತಿಳಿಯುತ್ತಿಲ್ಲ ಈ ಬಗ್ಗೆ ಕೇಂದ್ರ ಸರ್ಕಾರ ಉತ್ತರ ನೀಡಬೇಕು ಈ ತರಹದ ಬೆಳವಣಿಗೆಗೆಯನ್ನು ದೇಶದ ಜನರು ಎಂದು ನಿರೀಕ್ಷಿಸಿರಲಿಲ್ಲ ಎಂದರು.

 

ಕೇಂದ್ರ ಸರ್ಕಾರ ಸ್ಪಷ್ಟೀಕರಣ ನೀಡಲು ಒತ್ತಾಯ

ಅಂತರರಾಷ್ಟ್ರೀಯ ಮಟ್ಟದಲ್ಲಿ ಈ ತರಹದ ಸುದ್ದಿ ಹರಿದಾಡುತ್ತಿದ್ದರೂ ಕೇಂದ್ರ ಸರ್ಕಾರ ಮೌನವಾಗಿರುವುದನ್ನು ನೋಡಿದರೆ ಅಚ್ಚರಿಯಾಗುತ್ತದೆ ಆದ್ದರಿಂದ ಕೇಂದ್ರ ಸರ್ಕಾರ ಈ ಬಗ್ಗೆ ಸ್ಪಷ್ಟ ನಿರ್ಧಾರ ಪ್ರಕಟಿಸಬೇಕು ಇದರ ಹಿಂದೆ ನಡೆದಿರುವ ದೊಡ್ಡ ಷಡ್ಯಂತ್ರವನ್ನು ಭೇದಿಸಿ ಸತ್ಯವನ್ನು ದೇಶದ ಜನರಿಗೆ ತಿಳಿಸಬೇಕು ಎಂದು ಪ್ರತಿಕ್ರಿಯೆ ನೀಡಿದ್ದಾರೆ

One thought on “ಪೆಗಾಸಸ್ ಸ್ಪೈವೇರ್ ಮೂಲಕ ಸ್ನೂಪ್ ಗೆ ಡಾಕ್ಟರ್ ಜಿ ಪರಮೇಶ್ವರ್ ಕಳವಳ.

  1. Very nice post. I just stumbled upon your blog and wished to say that I have really enjoyed surfing around your blog posts. After all I will be subscribing to your feed and I hope you write again very soon!

Leave a Reply

Your email address will not be published. Required fields are marked *

You cannot copy content of this page

error: Content is protected !!
Exit mobile version