ಆ. 22ರಿಂದ ಭಾರತ ಸೇರಿ ಕೆಲ ದೇಶಗಳಿಗೆ ವಾಣಿಜ್ಯ ವಿಮಾನಗಳ ಹಾರಾಟ ಆರಂಭಿಸಲಿರುವ ಕುವೈತ್‌

ಆ. 22ರಿಂದ ಭಾರತ ಸೇರಿ ಕೆಲ ದೇಶಗಳಿಗೆ ವಾಣಿಜ್ಯ ವಿಮಾನಗಳ ಹಾರಾಟ ಆರಂಭಿಸಲಿರುವ ಕುವೈತ್‌

ಕುವೈತ್‌: ಕೊರೊನಾ ಕಡಿಮೆಯಾಗುತ್ತಿದ್ದಂತೆ ದೇಶಗಳು ಅಂತರಾಷ್ಟ್ರೀಯ ವಿಮಾನಗಳ ಮರು ಚಾಲನೆ ನೀಡುತ್ತಿದೆ. ಇದೀಗ ಕುವೈತ್‌ ಭಾರತದೊಂದಿಗಿನ ವಾಣಿಜ್ಯ ವಿಮಾನಗಳನ್ನು ಪುನಾರಾರಂಭಿಸುವ ಬಗ್ಗೆ ಘೋಷಣೆ ಮಾಡಿದೆ.

 

ಭಾರತ, ಈಜಿಪ್ಟ್, ಬಾಂಗ್ಲಾದೇಶ, ಪಾಕಿಸ್ತಾನ, ಶ್ರೀಲಂಕಾ ಮತ್ತು ನೇಪಾಳದೊಂದಿಗೆ ವಾಣಿಜ್ಯ ವಿಮಾನಗಳ ಕಾರ್ಯಾಚರಣೆಯನ್ನು ಪುನರಾರಂಭಿಸಲು ನಿರ್ಧರಿಸಲಾಗಿದೆ ಎಂದು ಕುವೈತ್‌ ಸರಕಾರ ತಿಳಿಸಿದೆ.

ಕುವೈಟ್ ಕ್ಯಾಬಿನೆಟ್, ಆಗಸ್ಟ್ 18ರ ಬುಧವಾರ ನಡೆಸಿದ ಮಹತ್ವದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಇದಲ್ಲದೆ ವಾಣಿಜ್ಯ ವಿಮಾನಗಳ ಪುನಾರರಂಭದ ಜೊತೆಗೆ, ಸಚಿವಾಲಯ ಸಮಿತಿಯು ಕೊರೊನಾ ತುರ್ತುಸ್ಥಿತಿಗಳಿಗೆ ನಿಗದಿಪಡಿಸಿದ ಎಲ್ಲಾ ನಿಯಂತ್ರಣಗಳು ಹಾಗೂ ಮುನ್ನೆಚ್ಚರಿಕಾ ಕ್ರಮಗಳನ್ನು ಅನುಸರಿಸಲಿದೆ ಎಂದು ಕೂಡ ಸರಕಾರ ತಿಳಿಸಿದೆ.

Leave a Reply

Your email address will not be published. Required fields are marked *

You cannot copy content of this page

error: Content is protected !!
Exit mobile version