ಕಿಲೋಮಿಟರ್ ಗಟ್ಟಲೆ ಕಾಂಡೋಮ್ ಕಂಡು ಬೆಚ್ಚಿದ ವಾಹನ ಸವಾರರು.
ತುಮಕೂರಿನ ಪ್ರಮುಖವಾದ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಬರುವ ತುಮಕೂರಿನ ಕ್ಯಾತ್ಸಂದ್ರ ದಿಂದ ಬಟವಾಡಿ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಿಲೋಮೀಟರ್ ಗಟ್ಟಲೆ ಕಾಂಡೋಮ್ಗಳು ರಸ್ತೆ ಪಕ್ಕದಲ್ಲಿ ಬಿದ್ದಿದ್ದು ಇದನ್ನು ಕಂಡ ವಾಹನ ಸವಾರರು ಬೆಚ್ಚಿಬಿದ್ದಿದ್ದಾರೆ.
ರಾಷ್ಟ್ರೀಯ ಹೆದ್ದಾರಿಯಲ್ಲಿ ಬರುವ ಶ್ರೀರಾಜ್ ಚಿತ್ರಮಂದಿರದ ಎದುರು ಇರುವ ಫ್ಲೈಓವರ್ ಮೇಲೆ ಕಿಲೋಮೀಟರ್ ಗಟ್ಟಲೆ ಕಾಂಡೋಂಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದು ಇದನ್ನು ಕಂಡ ವಾಹನ ಸವಾರರ ಚರ್ಚಗೆ ಎಡೆ ಮಾಡಿ ಕೊಟ್ಟಿದೆ.
ಇನ್ನು ರಸ್ತೆಯಮೇಲೆ ಕಿಲೋಮೀಟರ್ ಗಟ್ಟಲೆ ಕಾಂಡೋಂಗಳು ಏತಕ್ಕಾಗಿ ಬಿದ್ದಿವೆ ಎಂದು ಯಾರಿಗೂ ಮಾಹಿತಿ ಇಲ್ಲ ಇನ್ನು ಹೈವೇ ರಸ್ತೆ ಆಗಿರುವುದರಿಂದ ಸಹಜವಾಗಿ ವಾಹನಗಳು ಸಂಚರಿಸುವ ವೇಳೆ ಅಚಾನಕ್ಕಾಗಿ ಬಿದ್ದಿವೆ ಯೋ….? ಅಥವಾ ಬೇಕಂತಲೇ ಯಾರಾದರೂ ರಸ್ತೆ ಪಕ್ಕದಲ್ಲಿ ಹಾಕಿದ್ದಾರೋ ಎಂದು ಯಾರಿಗೂ ಮಾಹಿತಿಯಲ್ಲ.
ಇನ್ನದರೂ ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಇದರ ಬಗ್ಗೆ ತನಿಖೆ ಕೈಗೊಳ್ಳಬೇಕು ಎಂದು ವಾಹನ ಸವಾರರು ಮನವಿ ಮಾಡಿದ್ದಾರೆ.