ಕೆ ಎಸ್ ಆರ್ ಟಿ ಸಿ ಡಿಪೋದಲ್ಲಿ ನಾಗರಹಾವು ರಕ್ಷಣೆ
ತುಮಕೂರಿನ ಅಂತರಸನಹಳ್ಳಿಯ ಕೆ ಎಸ್ ಆರ್ ಟಿ ಸಿ ಡಿಪೋ ಘಟಕ -1 ರಲ್ಲಿ ಬಸ್ಸಿನಲ್ಲಿ ಸೇರಿಕೊಂಡಿದ್ದ ಭಾರಿ ಗಾತ್ರದ ನಾಗರಹಾವನ್ನು ರಕ್ಷಿಸಿ ಸಮೀಪದ ಅರಣ್ಯಕ್ಕೆ ಬಿಟ್ಟಿದ್ದಾರೆ.
ಡಿಪೋದಲ್ಲಿ ಹಾವನ್ನು ಕಂಡ ಸಿಬ್ಬಂದಿಯವರಿಗೆ ಕೆಲ ಕಾಲ ಆತಂಕದ ವಾತವರಣ ಸೃಷ್ಟಿಯಾಯಿತು, ನಾಗರಹಾವನ್ನು ನೋಡಲು ಅಲ್ಲಿದ್ದ ಸಿಬ್ಬಂದಿ ಜಮಾಯಿಸಿದರಿಂದ ಬಸ್ಸಿನೊಳಗೆ ಸೇರಿಕೊಂಡಿದೆ.
ಕೂಡಲೇ ವನ್ಯಜೀವಿ ಜಾಗೃತಿ ಹಾಗೂ ಉರಗ ಸಂರಕ್ಷಣಾ ಸಂಸ್ಥೆಯವರಿಗೆ (ವಾರ್ಕೊ) ಕರೆ ಮಾಡಿ ಮಾಹಿತಿ ನೀಡಿದರು. ಸ್ಥಳಕ್ಕೆ ಆಗಮಿಸಿದ ವಾರ್ಕೊ ಸಂಸ್ಥೆಯ ಉರಗ ತಜ್ಞರಾದ ಮನು ಅಗ್ನಿವಂಶಿ ಮತ್ತು ಸಚಿನ್ ಗೌಡ ಸುಮಾರು ಎರಡು ಗಂಟೆಗಳ ಕಾಲ ಕಾರ್ಯಚರಣೆ ನಡೆಸಿ ಬಸ್ಸಿನ ಛಾರ್ಸಿ ಒಳಗೆ ಸೇರಿಕೊಂಡಿದ್ದ 5 ಅಡಿ ಉದ್ದದ ನಾಗರಹಾವುನ್ನು ಸುರಕ್ಷಿತವಾಗಿ ರಕ್ಷಿಸಿ ಅರಣ್ಯ ಪ್ರದೇಶಕ್ಕೆ ಬಿಟ್ಟಿದ್ದಾರೆ. ನಾಗರಹಾವು ಪೊರೆ ಬಿಡುವ ಹಂತದಲ್ಲಿದೆ ಎಂದು ಉರಗ ತಜ್ಞ ಮನು ತಿಳಿಸಿದರು.