ಸಿರಾ ಕ್ಷೇತ್ರಕ್ಕೆ ಜಯಚಂದ್ರ ಒಬ್ಬರೇ ಶಾಸಕರಾಗಿ ಇರಲು ಸಾಧ್ಯವಿಲ್ಲ_ಚಿದಾನಂದ ಎಂ ಗೌಡ

 

ಅಪ್ಪರ್ ಭದ್ರಾ ಪ್ರಾಜೆಕ್ಟ್ ಮೂಲಕ ಸಿರಾ ತಾಲೂಕಿನ 72 ಕೆರೆಗಳಿವೆ ಮುಂದಿನ ಎರಡು ವರ್ಷದಲ್ಲಿ ನೀರು ಲಭ್ಯವಾಗಲಿದೆ ಎಂದು ಹೇಳುವ ಮೂಲಕ ಟಿ ಬಿ ಜಯಚಂದ್ರ ರವರಿಗೆ ವಿಧಾನಪರಿಷತ್ ಶಾಸಕ ಚಿದಾನಂದ ಎಂ ಗೌಡ ಟಾಂಗ್ ನೀಡಿದ್ದಾರೆ.

 

 

ಶಿರಾ ತಾಲ್ಲೂಕು ಕಛೇರಿ ಆವಣದಲ್ಲಿ ಪ್ರತಿಕ್ರಿಯಿಸಿದ ಅವರು ನಿಜಲಿಂಗಪ್ಪನವರ ಕಾಲದಿಂದಲೂ ಈ ಕಾರ್ಯಯೋಜನೆ ಸಿದ್ಧವಾಗಿದ್ದು ಸಾಕಷ್ಟು ಹೋರಾಟದ ಪಲವಾಗಿ ಈ ವಿಷಯ ಇಂದು ಯೋಜನೆಯಾಗಿ ರೂಪುಗೊಂಡಿದ್ದು .ಇದರ ಸಂಬಂಧ ಸಾಕಷ್ಟು ಕೆಲಸ ಆಗಿದೆ ಆದರೂ ಕೂಡ ಈ ವಿಷಯದಲ್ಲಿ ಜಯಚಂದ್ರ ಅವರು ಮಾತನಾಡುತ್ತಿರುವುದು ಶೋಭೆಯಲ್ಲ.

 

 

ಸರ್ಕಾರದ ವ್ಯವಸ್ಥೆ ಅವರಿಗೆ ಗೊತ್ತಿದ್ದರೂ ಈ ತರದ ಹೇಳಿಕೆ ನೀಡುತ್ತಿರುವುದು ಸರಿಯಲ್ಲ ಎಲ್ಲಾ ನೀರಾವರಿ ಯೋಜನೆಗಳು ನಾನೇ ಮಾಡಿದ್ದು ನನ್ನಿಂದಲೇ ಆಗಿದ್ದು ಅನ್ನೋ ಮನೋಭಾವ ಅವರದ್ದು .ಒಬ್ಬ ಶಾಸಕರು ಹಾಗೂ ಹಿರಿಯ ಸಚಿವರು ಆಗಿ ಅವರ ಕೆಲಸ ಅವರು ಮಾಡಿದ್ದಾರೆ.

 

ಈಗ ಇರುವ ಶಾಸಕರು ಹಾಗೂ ಸರ್ಕಾರ ಹಲವು ಕೆಲಸಗಳಿಗೆ ಆದ್ಯತೆ ನೀಡುತ್ತಿದ್ದು ಆದ್ಯತೆ ಮೇರೆಗೆ ಕಾಮಗಾರಿಗಳು ತೆಗೆದುಕೊಳ್ಳಬೇಕು ಎನ್ನುವುದನ್ನು ಸಂವಿಧಾನ ಹೇಳುತ್ತದೆ .ಅದರ ಸಂಬಂಧ ನಾವು ಕೂಡ ಸಾಕಷ್ಟು ಪ್ರಯತ್ನ ಮುಂದುವರಿಸಿದ್ದು ಮುಂದಿನ ಎರಡು ವರ್ಷದಲ್ಲಿ ತುಮಕುರು ಬಂಡ್ ಕೆನಾಲ್ ಪೂರ್ಣಗೊಳ್ಳಲಿದ್ದು. ಶಿರಾದ 72 ಕೆರೆಗಳಿಗೆ ನೀರು ಲಭ್ಯವಾಗಲಿದೆ ಎಂದರು.

 

ನೀರಾವರಿ ಯೋಜನೆಯು ನ್ಯಾಷನಲ್ ಪ್ರಾಜೆಕ್ಟ್ ಆಗಲು ಏನನ್ನು ಕಾರ್ಯ ಆಗಬೇಕು ಅವೆಲ್ಲವೂ ಮುಗಿದಿದೆ.

 

ಆದರೆ ಈ ನೀರಾವರಿ ಯೋಜನೆಗಳಿಗೆ ಜಯಚಂದ್ರ ಅವರೇ ಅಪ್ಪ-ಅಮ್ಮ ಅನ್ನುವ ಹೇಳಿಕೆ ಸರಿ ಇಲ್ಲ . ಶಿರಾ ಕ್ಷೇತ್ರಕ್ಕೆ ಜಯಚಂದ್ರ ಒಬ್ಬರೇ ಶಾಸಕರಾಗಿ ಇರಲು ಸಾಧ್ಯವಿಲ್ಲ ಇದು ಪ್ರಜಾಪ್ರಭುತ್ವ ವ್ಯವಸ್ಥೆ ಅದನ್ನ ಜಯಚಂದ್ರ ಅವರು ಅರ್ಥ ಮಾಡಿಕೊಳ್ಳಬೇಕು.

ಅವರ ಹಿರಿತನ ಅವರ ಮಾರ್ಗದರ್ಶನ ತಾಲೂಕು ಆಡಳಿತಕ್ಕೆ ಅವಶ್ಯಕತೆಯಿದೆ.

ನಮ್ಮಂತ ಯುವ ಶಾಸಕರಿಗೆ ಅವರೇ ಮಾರ್ಗದರ್ಶಕರಾಗಿ ನಮಗೆ ಮಾರ್ಗದರ್ಶನ ನೀಡುವ ಬದಲು ತಮಗೆ ಇಷ್ಟ ಬಂದಂತೆ ಹೇಳಿಕೆ ನೀಡುವ ಮೂಲಕ ಚುನಾವಣೆಗೆ ಅನುಕೂಲವಾಗುವಂತ ಹೇಳಿಕೆಗಳನ್ನು ನೀಡುತ್ತಿರುವುದು ಅವರ ಹಿರಿತನಕ್ಕೆ ಶೋಭೆ ತರುವುದಿಲ್ಲ ಅವರ ಮನೋಭಾವ ಬದಲಾಗಬೇಕಾಗಿದೆ.

 

ಜೈ ಚಂದ್ರರವರ ಕಾಲದಲ್ಲಿ ಸಾಕಷ್ಟು ಹೋರಾಟದ ಫಲವಾಗಿ ನೀರಾವರಿ ಯೋಜನೆಗಳಿಗೆ ಸಂಬಂಧಿಸಿದಂತೆ ಹಲವು ಕೆಲಸಗಳು ಆಗಿದ್ದು ಅದು ಕ್ಷೇತ್ರದ ಜನರಿಗೆ ಗೊತ್ತಿರುವ ವಿಷಯ. ಅವರೊಬ್ಬ ಶಾಸಕರಾಗಿ ಅವರ ಕೆಲಸವನ್ನು ಅವರು ನಿರ್ವಹಿಸಿದ್ದಾರೆ ಆದರೆ ಎಲ್ಲ ಯೋಜನೆಗಳು ನಾನೇ ಮಾಡಿದ್ದು ನನ್ನಿಂದಲೇ ಆಗಿದ್ದು ಎನ್ನುವ ಮೂಲಕ ದಿಕ್ಕುತಪ್ಪಿಸುವ ಹೇಳಿಕೆಗಳನ್ನು ನೀಡುತ್ತಿರುವುದು ಸರಿಯಲ್ಲ ಎಂದು ವಿಧಾನಪರಿಷತ್ ಶಾಸಕರಾದ ಚಿದಾನಂದ ಗೌಡರವರು ಪ್ರತಿಕ್ರಿಯಿಸಿದರು.

Leave a Reply

Your email address will not be published. Required fields are marked *

You cannot copy content of this page

error: Content is protected !!
Exit mobile version