ಬದಲಾಗಬೇಕಿದೆ ಕೋರನ ಸೋಂಕಿತರನ್ನು ನೋಡುವ ದೃಷ್ಟಿ.

 

ಇನ್ನು ದೇಶದಾದ್ಯಂತ ಕೋರೋಣ ರುದ್ರತಾಂಡವ ನಡೆಸುತ್ತಿದೆ ಒಂದೆಡೆ ಸಾವು-ನೋವು ಹೆಚ್ಚಾಗಿ ಕಂಡುಬರುತ್ತಿದೆ ಮತ್ತೊಂದು ಕಡೆ ಆಸ್ಪತ್ರೆಗಳು ಕೊರನ ಸೋಂಕಿತ ರಿಂದ ತುಂಬಿತುಳುಕುತ್ತಿದೆ. ಮತ್ತೊಂದೆಡೆ ಸ್ಮಶಾನಗಳು ಹೆಣದಿಂದ ತುಂಬಿಹೋಗಿವೆ, ಇಷ್ಟೆಲ್ಲಾ ಘಟನೆಗಳು ಎಲ್ಲರೂ ಮುಂದೆ ಇಂದಿನ ದಿನಗಳಲ್ಲಿ ಸಾಮಾನ್ಯವಾಗಿದೆ.

 

ಇನ್ನು ಯಾರಮನೆ ಹಳ್ಳಿ ಕೇರಿ ಬೀದಿ ಎಲ್ಲಾ ನಗರಗಳಲ್ಲು ಕೊರನಾ ಮಹಾಮಾರಿ ತಾಂಡವವಾಡುತ್ತಿದೆ. ಸಾಕಷ್ಟು ಇಲಾಖೆಗಳಲ್ಲಿ ಸೋಂಕು ತಡೆಗಟ್ಟಲು ಹಗಲಿರುಳು ಶ್ರಮಿಸುತ್ತಿದ್ದರು ಸಹ ಎರಡನೇ ಅಲೆ ಕಡಿಮೆಯಾಗುವ ಲಕ್ಷಣಗಳು ಕಾಣುತ್ತಿಲ್ಲ ಆದರೂ ಸಹ ಎಲ್ಲ ಇಲಾಖೆಗಳು ತಮ್ಮ ಕೈಲಾದ ಮಟ್ಟಿಗೆ ಕೆಲಸ ನಿರ್ವಹಿಸುತ್ತಿವೆ. ಮತ್ತೊಂದೆಡೆ ಸಂಘ-ಸಂಸ್ಥೆಗಳು ತಮ್ಮ ಕೈಲಾದ ಮಟ್ಟಿಗೆ ಅಳಿಲು ಸೇವೆಗಳನ್ನು ಮಾಡುತ್ತಿದ್ದಾರೆ.

 

ಇಷ್ಟೆಲ್ಲಾ ನಿದರ್ಶನಗಳು ಕಣ್ಣಮುಂದೆಯೇ ಇದೆ ಆದರೂ ಸಹ ಇನ್ನು ಕೆಲ ಹಳ್ಳಿಹಳ್ಳಿಗಳಲ್ಲಿ ನಗರಗಳಲ್ಲಿ ಪಟ್ಟಣಗಳಲ್ಲಿ ಸಾರ್ವಜನಿಕರು ಕೊರನಾ ಸೋಂಕಿತರು ಎಂದರೆ ಬೆಚ್ಚಿ ಬೀಳುತ್ತಿದ್ದಾರೆ. ಇನ್ನು ಈ ಸೋಂಕು ಯಾರನ್ನು ಸಹ ಬಿಡುತ್ತಿಲ್ಲ ಬಡವರು ಶ್ರೀಮಂತರು ಎನ್ನುವ ಭೇದಭಾವ ಇಲ್ಲದೆ ತನ್ನ ಅಲೆಯನ್ನು ಮುಂದುವರಿಸುತ್ತಲೆ ಸಾರ್ವಜನಿಕರನ್ನು ಭಯ ಪಡಿಸುತ್ತದೆ. ಆದರೂ ಸಹ ಕೆಲವರು ಕೊರನಾ ಸೋಂಕಿತರನ್ನು ನೋಡುವ ದೃಷ್ಟಿ ನಿಜಕ್ಕೂ ನಾಚಿಕೆಗೇಡಿನ ಸಂಗತಿಯಾಗಿದೆ. ಕೋರೋಣ ಸೋಂಕಿತರು ಎಂದರೆ ಅವರನ್ನು ನೋಡುವ ದೃಷ್ಟಿ ಮಾತನಾಡುವ ಗುಣ ಸಾಕಷ್ಟು ಸೋಂಕಿತರನ್ನು ಕೊರಗುವಂತೆ ಮಾಡುತ್ತದೆ. ಕೊರನಾ ಸೋಂಕಿತರಿಗೆ ಧೈರ್ಯವನ್ನು ತುಂಬಿ ಅವರನ್ನು ಚೇತರಿಸಿಕೊಳ್ಳುವಂತೆ ಮಾಡುವುದು ಎಲ್ಲರ ಕರ್ತವ್ಯವಾಗಿದೆ. ಆದರೂ ಸಹ ಕೆಲವರು ಕೊರನ ಸೋಂಕಿತರನ್ನು ಕ್ರೂರಿಗಳಂತೆ ಕಾಣುತ್ತಿದ್ದಾರೆ ಇದು ಒಳ್ಳೆಯ ಬೆಳವಣಿಗೆಯಲ್ಲ ಇಂತಹ ಮನಸ್ಥಿತಿಗಳು ಬದಲಾಗಬೇಕಿದೆ. ಸೋಂಕಿತರು ನಮ್ಮವರೇ ಎಂದು ತಿಳಿದು ಅವರಿಗೆ ಆತ್ಮಸ್ಥೈರ್ಯ ಹೆಚ್ಚಿಸಿ ಬೇಗ ಗುಣಮುಖರಾಗುವಂತೆ ಧೈರ್ಯ ತುಂಬಾ ಬೇಕಾಗಿದೆ. ಇನ್ನಾದರೂ ಇಂತಹ ಮನಸ್ಥಿತಿ ಉಳ್ಳವರ ಮನಸ್ಸುಗಳು ಬದಲಾದಾಗ ಮಾತ್ರ ಮನುಷ್ಯತ್ವಕ್ಕೆ ಬೆಲೆ ಸಿಕ್ಕಂತಾಗುತ್ತದೆ.

Leave a Reply

Your email address will not be published. Required fields are marked *

You cannot copy content of this page

error: Content is protected !!
Exit mobile version