ಬೆರಳಚ್ಚುಗಾರರ ಸಂಘದ ವತಿಯಿಂದ ಸಂವಿಧಾನ ಸಮರ್ಪಣೆ ದಿನಾಚರಣೆಯ ಆಚರಣೆ

ಬೆರಳಚ್ಚುಗಾರರ ಸಂಘದ ವತಿಯಿಂದ ಸಂವಿಧಾನ ಸಮರ್ಪಣೆ ದಿನಾಚರಣೆಯ ಆಚರಣೆ

ತುಮಕೂರು ನಗರದ ಜಿಲ್ಲಾ ಉಪ ನೂಂದಣಾಧಿಕಾರಿ ಕಛೇರಿಯ ಮುಂಭಾಗದಲ್ಲಿ ಬೆರಳಚ್ಚುಗಾರರ ಸಂಘದ ಸದಸ್ಯರು ಇಂದು ಸಂವಿಧಾನ ಸಮರ್ಪಣಾ ದಿನಾಚರಣೆಯನ್ನು ಕೇಕ್ ಕತ್ತರಿಸುವ ಮೂಲಕ ಬಹಳ ವಿಜೃಂಭಣೆಯಿಂದ ಆಚರಿಸಿದರು .

 

ಈ ಕಾರ್ಯಕ್ರಮದಲ್ಲಿ ಉಪನೂಂದಣಾಧಿಕಾರಿಗಳಾದ ಸುಭಾಷ್ ಹೋಸಹಳ್ಳಿ ರವರು ಸಂವಿಧಾನದ ಪಿಠಿಕೆಗೆ ಪುಷ್ಪ ಗುಚ್ಛ ಹಾಕುವ ಮೂಲಕ ಸಂವಿಧಾನ ಪ್ರತಿಯೊಬ್ಬ ನಾಗರಿಕರಿಗೆ ಸಮಾಜದಲ್ಲಿ ಬದುಕುವ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ ಸಮಾಜಲ್ಲಿ ಯಾವುದೇ ರೀತಿಯ ತಾರತಮ್ಯ ಮಾಡದೆ ಪ್ರತಿಯೊಬ್ಬ ಮನುಷ್ಯನ ಬದುಕಿನ ಹಕ್ಕು ಸಮಾಜಿಕ ಹಕ್ಕು ಸಮಾನತೆ ಮತ್ತು ಶೋಷಣೆ ಹಕ್ಕನ್ನು ಸಂವಿಧಾನ ಶಿಲ್ಪಿ ಡಾ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ನಿಡಿದ್ದಾರೆ ಇದನ್ನು ಪ್ರತಿಯೊಬ್ಬರು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಬದುಕುವಂತ ಕೇಲಸವಾಗಬೇಕೆಂದರು .ಇದೆ ಸಂದರ್ಭದಲ್ಲಿ ಬೆರಳಚ್ಚುಗಾರರ ಸಂಘದ ಸದಸ್ಯರು ಎಲ್ಲರಿಗೂ ಸಂವಿಧಾನದ ಪಿಠಿಕೆಯನ್ನು ಹೇಳುವ ಮೂಲಕ ಪ್ರತಿಯೊಬ್ಬರೂ ಸಂವಿಧಾನದ ಪಿಠಿಕೆ ಓದುವ ಮೂಲಕ ಸಂವಿಧಾನದ ಹುಳುವಿನ ಪ್ರತಿಜ್ಞೆಯನ್ನು ಮಾಡುವ ಮೂಲಕ ಕಾರ್ಯಕ್ರಮನ್ನು ಸಿಹಿ ಹಂಚಿ ಸಂಭ್ರಮಿಸಿದರು .

 

ಈ ಕಾರ್ಯಕ್ರಮಕ್ಕೆ ವಿಶೇಷ ಅಥಿತಿಯಾಗಿ ದಲಿತ ಮುಖಂಡರಾದ ಜೆ ಸಿ ಪಿ ವೆಂಕಟೇಶ್ .ನಟರಾಜ್. ಮೇಳೇಕಲ್ಲಹಳ್ಳಿ ಯೋಗೀಶ್ .ಭಾಗವಹಿಸಿದ್ದರು. ಬೆರಳಚ್ಚು ಗಾರರ ಸಂಘದ ಗೌರವಧ್ಯಕ್ಷರಾದ ಪುಟ್ಟರಾಜು. ಅಧ್ಯಕ್ಷರಾದ ಗಂಗಾಧರ್. ಉಪಾಧ್ಯಕ್ಷರಾದ ಮಂಜುಳ. ಕಾರ್ಯದರ್ಶಿ ರಂಗನಾಥ್ ಕೆ ಅಪ್ಪಾಜಿ ಗೌಡ್ರು . ಸಂಘಟನಾ ಕಾರ್ಯದರ್ಶಿ ಜಗದೀಶ್ ಸಿ. ಎನ್. ಖಜಾಂಚಿ ರಮೇಶ್ ಎಲ್ . ಕೂಡಿಯಾಲ ಮಹಾದೇವ್. ಹಾಗು ಸಂಘದ ಇತರೆ ಎಲ್ಲಾ ಪದಾಧಿಕಾರಿಗಳು ಹಾಗು ಸಾರ್ವಜನಿಕರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *

You cannot copy content of this page

error: Content is protected !!
Exit mobile version