ವೇಗವಾಗಿ ಬಂದ ಕಾರು ಡಿಕ್ಕಿ ಮಹಿಳೆಯರು ಹಾಗೂ ಕಾರು ಚಾಲಕ ಆಸ್ಪತ್ರೆಗೆ ದಾಖಲು.

ವೇಗವಾಗಿ ಬಂದ ಕಾರು ಡಿಕ್ಕಿ ಮಹಿಳೆಯರು ಹಾಗೂ ಕಾರು ಚಾಲಕ ಆಸ್ಪತ್ರೆಗೆ ದಾಖಲು.

 

ತುಮಕೂರು ಜಿಲ್ಲೆ ಗುಬ್ಬಿ ತಾಲೂಕಿನ ಹೊದಲೂರು ಗ್ರಾಮದ ಏಕೆ ಕಾಲೋನಿ ಬಳಿ ಮಂಗಳವಾರ  ಸಂಜೆ 4.30 ರ ಸಮಯದಲ್ಲಿ ವೇಗವಾಗಿ ಬಂದ ಮಾರುತಿ ಆಲ್ಟೋ ಕಾರು (KA 05 MA 1879) ರಸ್ತೆಬದಿ ನಡೆದುಕೊಂಡು ಹೋಗುತ್ತಿದ್ದ ಕಿಟ್ಟದ ಕುಪ್ಪೆ ಗ್ರಾಮದ ಮಹಿಳೆಯರಾದ ರಾಧಮ್ಮ (38)ಸಿದ್ದಗಂಗಮ್ಮ(28) ಎಂಬುವರಿಗೆ ವೇಗವಾಗಿ ಬಂದ ಕಾರು ಹಿಂಬದಿಯಿಂದ ಡಿಕ್ಕಿ

 

 

 ಹೊಡೆದ ಪರಿಣಾಮ ಕಾರು ಪಲ್ಟಿಯಾಗಿ ರಸ್ತೆ ಬದಿಯಲ್ಲಿದ್ದ ಸೇತುವೆಗೆ ಡಿಕ್ಕಿಯಾಗಿ ಕಾರು ಪಲ್ಟಿಯಾಗಿದೆ ಪರಿಣಾಮ ಕಿಟ್ಟದ ಕುಪ್ಪೆ ಗ್ರಾಮದ ರಾಧಮ್ಮ ಎಂಬುವವರಿಗೆ ಕೈ,ಕಾಲು ಹಾಗೂ ಎದೆಗೆ ತೀವ್ರ ಪೆಟ್ಟಾಗಿದ್ದು ಕಾಲು ಸಂಪೂರ್ಣ ಮುರಿದಿದೆ ಹಾಗೂ ಸಿದ್ದಗಂಗಮ್ಮ ಹಾಗೂ ಕಾರು ಚಾಲಕನಾದ ಷಡಕ್ಷರಿ ಎಂಬುವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು ತುಮಕೂರಿನ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.

ಇನ್ನೂ ತೀವ್ರವಾಗಿ ಗಾಯಗೊಂಡ ಕೆಟ್ಟದ ಕುಪ್ಪೆ ಗ್ರಾಮದ ರಾಧಮ್ಮ ಎಂಬುವರಿಗೆ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

 

ಪ್ರಕರಣಕ್ಕೆ ಸಂಬಂಧಿಸಿದಂತೆ ಅತೀವೇಗ ಹಾಗೂ ಚಾಲಕನ ಅಜಾಗರೂಕತೆಯಿಂದ ಅಪಘಾತ ಸಂಬಂಧಿಸಿದಂತೆ ಗುಬ್ಬಿ ಪೊಲೀಸ್ ಠಾಣೆಯಲ್ಲಿ ಎಫ್ .ಐ .ಅರ್ . ದಾಖಲಾಗಿದೆ ಪೊಲೀಸರು ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಮುಂದುವರೆಸಿದ್ದಾರೆ.

Leave a Reply

Your email address will not be published. Required fields are marked *

You cannot copy content of this page

error: Content is protected !!
Exit mobile version