ಮನೆ ಮಾಲೀಕನ ಎಡವಟ್ಟಿಗೆ ಬೀದಿಗೆ ಬಿದ್ದ ಕುಟುಂಬಗಳು.

ಮನೆ ಮಾಲೀಕನ ಎಡವಟ್ಟಿಗೆ ಬೀದಿಗೆ ಬಿದ್ದ ಕುಟುಂಬಗಳು.

 

ತುಮಕೂರು ನಗರದ ಬನಶಂಕರಿ ಬಡಾವಣೆಯಲ್ಲಿ ವಾಸವಾಗಿರುವ ಮಂಜಣ್ಣಎಂಬುವವರು ಬ್ಯಾಂಕಿನಿಂದ ಪಡೆದ ಸಾಲವನ್ನು ಹಿಂದಿರುಗಿಸಲು ವಿಫಲರಾದ ಹಿನ್ನೆಲೆಯಲ್ಲಿ ಇಂದು ತುಮಕೂರಿನ ಕೆನರಾ ಬ್ಯಾಂಕ್ ವತಿಯಿಂದ 2 ಬಿಲ್ಡಿಂಗ್, ಮಹಿಳಾ ಬ್ಯಾಂಕ್ ವತಿಯಿಂದ ಒಂದು ಬಿಲ್ಡಿಂಗ್ ಸೇರಿದಂತೆ ಮೂರು ಕಟ್ಟಡಗಳನ್ನು ಬ್ಯಾಂಕ್ ನವರು ಏಕಾಏಕಿ ಸೀಜ್ ಮಾಡಿದ ಹಿನ್ನೆಲೆಯಲ್ಲಿ ಕಟ್ಟಡದಲ್ಲಿ ವಾಸವಿದ್ದ 32ಕ್ಕೂ ಹೆಚ್ಚು ಕುಟುಂಬಗಳು ಬೀದಿಗೆ ಬಿದ್ದಿವೆ.

 

 

ತುಮಕೂರು ನಗರದ ಬನಶಂಕರಿ ಬಡಾವಣೆ 2ನೇ ಮುಖ್ಯರಸ್ತೆಯಲ್ಲಿ ಬರುವ ಮಂಜುನಾಥ ಎನ್ನುವ ಮಾಲೀಕರಿಗೆ ಸೇರುವ ಕಟ್ಟಡಕ್ಕೆ ಸಂಬಂಧಿಸಿದಂತೆ ಬ್ಯಾಂಕ್ನಿಂದ ಪಡೆದ ಸಾಲವನ್ನು ಮನೆ ಮಾಲೀಕರು ಹಿಂದಿರುಗಿಸಲು ವಿಫಲರಾದ ಹಿನ್ನೆಲೆಯಲ್ಲಿ ಒಂದು ತಿಂಗಳ ಹಿಂದೆ ಬ್ಯಾಂಕ್ ವತಿಯಿಂದ ಮನೆ ಮಾಲೀಕರಿಗೆ ನೋಟಿಸ್ ನೀಡಲಾಗಿತ್ತು. ಇಂದು ಬ್ಯಾಂಕ್ ಸಿಬ್ಬಂದಿಗಳು ಏಕಾಏಕಿ ಬಂದು ಕಟ್ಟಡದಲ್ಲಿ ವಾಸವಿದ್ದ ಕುಟುಂಬಗಳನ್ನು ಬೀದಿಗೆ ಹಾಕಿ ಏಕಾಏಕಿ ಮೂರು ಕಟ್ಟಡಗಳಿಂದ ಸುಮಾರು 32ಕ್ಕೂ ಹೆಚ್ಚು ಮನೆಗಳಿಗೆ ಬೀಗ ಹಾಕುವ ಮೂಲಕ ಎಲ್ಲಾ ಕುಟುಂಬಗಳು ಬೀದಿಗೆ ಬಿದ್ದಿವೆ.

 

ಇನ್ನೂ ಕಟ್ಟಡದಲ್ಲಿ ವಾಸವಿದ್ದ ಮಹಿಳೆಯರು, ಪುಟ್ಟ ಕಂದಮ್ಮಗಳು ಮಳೆಯಲ್ಲಿ ನೆನೆಯುತ್ತಾ,ಆಶ್ರಯಕ್ಕಾಗಿ ಕಣ್ಣೀರಿಡುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಇನ್ನು ಪ್ರಕರಣಕ್ಕೆ ಸಂಬಂಧಿಸಿದಂತೆ ಮನೆ ಮಾಲೀಕರಾದ ಮಂಜಣ್ಣ ಅವರನ್ನು ಸಂಪರ್ಕಿಸಲಾಗಿ ಒಂದು ತಿಂಗಳ ಹಿಂದೆ ಬ್ಯಾಂಕ್ ವತಿಯಿಂದ ನೋಟಿಸ್ ನೀಡಲಾಗಿತ್ತು ಇದಕ್ಕೆ ಸಂಬಂಧಿಸಿದಂತೆ ಸಾಲ ಮರುಪಾವತಿ ಬಗ್ಗೆ ಬ್ಯಾಂಕ್ ಸಿಬ್ಬಂದಿಗಳು ಹಾಗೂ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಲಾಗಿದೆ ಆದರೆ ನಾವು ಇಂದು ನಮ್ಮ ಬಳಿ ಇರುವ ಹಣವನ್ನು ಅವರಿಗೆ ಪಾವತಿ ಮಾಡಲು ಸಾಕಷ್ಟು ಪ್ರಯತ್ನಪಟ್ಟರೂ ಅವಕಾಶ ನೀಡದೆ ಬ್ಯಾಂಕ್ ಸಿಬ್ಬಂದಿಗಳು ಏಕಾಏಕಿ ಬಂದು ಕಟ್ಟಡದಲ್ಲಿದ್ದ ವಾಸವಿದ್ದ ಕುಟುಂಬಗಳನ್ನು ಬೀದಿಗೆ ತಳ್ಳಿರುವುದು ನಿಜಕ್ಕೂ ನೋವುಂಟು ಮಾಡಿದೆ. ನಾನು ಮಾಡಿದ ಸಾಲದಿಂದ ಪುಟ್ಟ ಕಂದಮ್ಮಗಳು ಹಾಗೂ ಮಹಿಳೆಯರು ಬೀದಿಗೆ ಬರುವಂತಾಗಿತ್ತು ಇದಕ್ಕೆ ಸಂಬಂಧಿಸಿದಂತೆ ಬ್ಯಾಂಕ್ ಸಿಬ್ಬಂದಿಗಳನ್ನು ಸಂಪರ್ಕಿಸಲು ಸಾಕಷ್ಟು ಪ್ರಯತ್ನ ನಡೆಸಿದರೂ ಕೂಡ ಸಿಬ್ಬಂದಿಗಳು ಯಾವುದೇ ಪ್ರತಿಕ್ರಿಯೆ ನೀಡದೆ ಸುಮ್ಮನಾಗಿದ್ದಾರೆ ನಾಳೆ ಸರ್ಕಾರಿ ರಜೆ ಇರುವುದನ್ನು ಗಮನಿಸಿ ಇಂದು ಏಕಾಏಕಿ ಕಟ್ಟಡದಲ್ಲಿ ವಾಸವಿದ್ದ ಪ್ರತಿ ಮನೆಗಳಿಗೂ ಬೀಗ ಹಾಕುವ ಮೂಲಕ ಅಧಿಕಾರಿಗಳು ಕುಟುಂಬಗಳನ್ನು ಬೀದಿಗೆ ತಂದಿದ್ದಾರೆ ಎಂದರು.

 

ಪ್ರಕರಣಕ್ಕೆ ಸಂಬಂಧಿಸಿದಂತೆ ತುಮಕೂರು ನಗರ ಶಾಸಕರ ಗಮನಕ್ಕೆ ತರಲು ಕೂಡ ಸಾಕಷ್ಟು ಪ್ರಯತ್ನಪಟ್ಟೆವು ಆದರೆ ಶಾಸಕರು ಕೈಚೆಲ್ಲಿದ್ದಾರೆ ಇನ್ನು ಶಾಸಕರು ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಜಿಲ್ಲಾಧಿಕಾರಿಗಳು ಹಾಗೂ ತಹಸೀಲ್ದಾರರನ್ನು ಸಂಪರ್ಕಿಸುತ್ತೇವೆ ಎಂದು ಸುಮ್ಮನಾದರೂ ಎಂದು ಸ್ಥಳೀಯ ಮುಖಂಡರೊಬ್ಬರು ಆರೋಪಿಸಿದ್ದಾರೆ.

 

ಬೆಳಗ್ಗೆ ಕರೆ ಮಾಡಲು ತಿಳಿಸಿದ ಶಾಸಕರು.

 

 ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಟಿಜಿಟಿ ಮಳೆಯಲ್ಲಿ ನೆನೆಯುತ್ತಕುಟುಂಬಗಳು ಬೀದಿಗೆ ಬಿದ್ದಿದೆ ಅದರ ಸಲುವಾಗಿ ತುಮಕೂರು ನಗರ ಶಾಸಕರ ನ್ನು ಸಂಪರ್ಕಿಸಲು ಪ್ರಯತ್ನಿಸಿದಾಗ ತುಮಕೂರು ನಗರ ಶಾಸಕರಾದ ಜ್ಯೋತಿ ಗಣೇಶ್ ರವರು ಬೆಳಗ್ಗೆ ಕರೆ ಮಾಡಿ ಎಂದು ಫೋನ್ ಕಟ್ ಮಾಡಿದರು.

 

ಅದೇನೇ ಇರಲಿ ಮನೆ ಮಾಲೀಕನ ಎಡವಟ್ಟಿಗೆ 32 ಮನೆಗಳಿಗೆ ಬ್ಯಾಂಕ್ ಸಿಬ್ಬಂದಿಗಳು ಬೀಗ ಹಾಕಿದ್ದು ಸುಮಾರು 150ಕ್ಕೂ ಹೆಚ್ಚು ಜನ ಬೀದಿಯಲ್ಲಿ ರಾತ್ರಿ ಕಳೆಯುವ ಪರಿಸ್ಥಿತಿ ನಿರ್ಮಾಣವಾಗಿದ್ದು ಅಕ್ಕಪಕ್ಕದ ಮನೆಗಳಲ್ಲಿ ಆಶ್ರಯ ಪಡೆಯಲು ಕಟ್ಟಡದಲ್ಲಿ ವಾಸವಿದ್ದ ಕುಟುಂಬಗಳು ಪ್ರಯತ್ನ ಪಡುತ್ತಿದ್ದಾರೆ ದೃಶ್ಯ ಸಾಮಾನ್ಯವಾಗಿತ್ತು.

Leave a Reply

Your email address will not be published. Required fields are marked *

You cannot copy content of this page

error: Content is protected !!
Exit mobile version