ಮದುವೆಯಾದ ಏಳೇ ದಿನಕ್ಕೆ ಹುಡುಗ ಎಸ್ಕೇಪ್.ಪ್ರೀತಿಸಿ ಅಂತರ್ಜಾತಿ ವಿವಾಹ ಆಗಿದ್ದ ಹುಡುಗಿ ಬೀದಿಪಾಲು.

ಮದುವೆಯಾದ ಏಳೇ ದಿನಕ್ಕೆ ಹುಡುಗ ಎಸ್ಕೇಪ್.ಪ್ರೀತಿಸಿ ಅಂತರ್ಜಾತಿ ವಿವಾಹ ಆಗಿದ್ದ ಹುಡುಗಿ ಬೀದಿಪಾಲು.

 

 

ತುಮಕೂರು_ ಮದುವೆಯಾದ ಏಳೇ ದಿನಕ್ಕೆ ಹುಡುಗ ಎಸ್ಕೇಪ್.ಪ್ರೀತಿಸಿ ಅಂತರ್ಜಾತಿ ಆಗಿದ್ದ ಹುಡುಗಿ ಈಗ ಬೀದಿಪಾಲಾದ ಘಟನೆ ವರದಿಯಾಗಿದೆ.

 

ಕೆಲ ದಿನಗಳ ಹಿಂದೆ ಮದುವೆಯಾಗಿದ್ದ ಯುವತಿ ಗಂಡನನ್ನ ಹುಡುಕಿಕೊಂಡಿ ಎಂದು ಅಳಲು ತೋಡಿಕೊಂಡಿದ್ದಾರೆ ತುಮಕೂರು ಜಿಲ್ಲೆ, ತಿಪಟೂರು ತಾಲೂಕಿನ ಹಿಂಡಿಸ್ಕೆರೆ ಗ್ರಾಮದಲ್ಲಿ ಘಟನೆ ನಡೆದಿದ್ದು

ಪ್ರೀತಿಸಿ ಮದುವೆಯಾಗಿದ್ದ ಯುವಕ-ಯುವತಿ ಮನೆಯವರ ವಿರೋಧದ ನಡುವೆಯೂ ಇಬ್ಬರೂ ಮದುವೆಯಾಗಿದ್ದರು.

 

ದೇವಸ್ಥಾನದಲ್ಲಿ ತಾಳಿ ಕಟ್ಟಿದ ಬಳಿಕ ಎಸ್ಕೇಪ್ ಆಗಿರುವ ಪತಿ ನಿಖಿಲ್ ಮತ್ತು ಚೈತ್ರ ಇಬ್ಬರೂ ಕಳೆದ ಒಂದು ವರ್ಷದಿಂದ ಪ್ರೀತಿಸುತ್ತಿದ್ದರು.

 

ಮೂಲತಃ ತಿಪಟೂರು ತಾಲೂಕಿನ ಹಟ್ನ ಗ್ರಾಮದ ಚೈತ್ರಾ ವಿಶ್ವಕರ್ಮ ಸಮುದಾಯಕ್ಕೆ ಸೇರಿದ್ದು ಲಿಂಗಾಯತ ಸಮುದಾಯಕ್ಕೆ ಸೇರಿರೋ ನಿಖಿಲ್ ಈಗ ಪತ್ತೆಯಾಗಿದ್ದಾನೆ.

 

ತುರುವೇಕೆರೆಯ ಮೊಬೈಲ್ ಶಾಪ್ ಒಂದ್ರಲ್ಲಿ ಕ್ಯಾಶಿಯರ್ ಆಗಿ ಕೆಲಸ ಮಾಡುತ್ತಿದ್ದ ಚೈತ್ರಾ.

ಅದೇ ಮೊಬೈಲ್ ಶಾಪ್ ನ ಫೈನಾನ್ಸ್ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ನಿಖಿಲ್.

 

ಈ ವೇಳೆ ಇಬ್ಬರ ನಡುವೆ ಪ್ರೀತಿ ಬೆಳೆದಿತ್ತು.ಒಂದು ವರ್ಷದಿಂದ ಯುವತಿ ಜೊತೆ ಸುತ್ತಾಡಿ ಎಂಜಾಯ್ ಮಾಡಿದ್ದ ನಿಖಿಲ್.

 

ಚೈತ್ರ ಮನೆಯವರ ವಿರೋಧದ ನಡುವೆಯೂ ಓಡಿ ಹೋಗಿ ಮದುವೆಯಾಗಿದ್ದರು.ಕಳೆದ ಫೆಬ್ರವರಿ 4ರಂದು ಮದುವೆಯಾಗಿದ್ದ ನಿಖಿಲ್ ಮತ್ತು ಚೈತ್ರಾ.

 

ಫೆಬ್ರವರಿ 7ರಂದು ರಿಜಿಸ್ಟರ್ ಮ್ಯಾರೇಜ್ ಕೂಡ ಆಗಿದ್ದರು.

7 ದಿನಗಳ ವರೆಗೂ ಒಟ್ಟಿಗೇ ಇದ್ದರು ಚೈತ್ರಾ ಮತ್ತು ನಿಖಿಲ್

ತಿಪಟೂರು ತಾಲೂಕು ಕಿಬ್ಬನಳ್ಳಿ ಬಳಿಯ ಇಂಡಿಸ್ಕೆರೆ ಗ್ರಾಮದಲ್ಲಿ ಮನೆಮಾಡಿಕೊಂಡಿದ್ದರು ಆದ್ರೆ ಇದ್ದಕ್ಕಿದ್ದಂತೆ ತಾಯಿಗೆ ಹುಷಾರಿಲ್ಲ ಎಂದು ತಿಪಟೂರಿಗೆ ಹೋದ ನಿಖಿಲ್ ನಾಪತ್ತೆಯಾಗಿದ್ದಾರೆ ಎಂದು ಯುವತಿ ಆರೋಪಿಸಿದ್ದಾರೆ .

 

ಫೆಬ್ರವರಿ 10ರಂದು ತಾಯಿ ನೋಡಬೇಕೆಂದು ತೆರಳಿರೋ ನಿಖಿಲ್ ಇದುವರೆಗೂ ಮನೆಗೆ ಹೋದ ಕೆಲವೇ ಗಂಟೆಗಳಲ್ಲಿ ಎರಡೂ ಮೊಬೈಲ್ ಸ್ವಿಚ್ ಆಫ್ ಮಾಡಿದ್ದ ನಿಖಿಲ್.

ಎಷ್ಟೇ ಪ್ರಯತ್ನ ಪಟ್ಟರು ಸಂಪರ್ಕಕ್ಕೆ ಸಿಗದ ನಿಖಿಲ್ ಇದರಿಂದ ಗಾಬರಿಗೊಂಡ ಯುವತಿ ಗಂಡನನ್ನ ಹುಡುಕಿಕೊಡಲು ಮೋರೆ ಇಡುತ್ತಿದ್ದಾಳೆ

 

ತಿಪಟೂರು ತಾಲೂಕಿನ ಪರವಗೊಂಡನಹಳ್ಳಿಯವನಾದ ನಿಖಿಲ್.ಗಂಡನನ್ನ ಹುಡುಕಿ ಹೋದ ಚೈತ್ರಾಗೆ ನಿಖಿಲ್ ತಂದೆ ಬಸವರಾಜುವಿನಿಂದ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿರುವ ಆರೋಪ ಕೂಡಾ ಕೇಳಿಬಂದಿದ್ದು .

 

ನಿನ್ನ ಮೇಲೆಯೇ ಕಂಪ್ಲೇಂಟ್ ಕೊಡುತ್ತೇನೆ ಎಂಬ ಬೆದರಿಕೆ ಹಾಕಿದ್ದಾರೆ ಎಂದು ಯುವತಿ ಆರೋಪಿಸಿದ್ದಾರೆ .ದಿಕ್ಕುಕಾಣದ ಚೈತ್ರ ಗಂಡನನ್ನ ಹುಡುಕಿಕೊಡಿ ಎಂದು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ .

 

ಫೆಬ್ರವರಿ 17ರಂದು ಕಿಬ್ಬನಹಳ್ಳಿ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲು.

Leave a Reply

Your email address will not be published. Required fields are marked *

You cannot copy content of this page

error: Content is protected !!
Exit mobile version