ಬಿಜೆಪಿ ಅಭ್ಯರ್ಥಿ ಡಾ ಪ್ರೀತನ್ ನಾಗಪ್ಪ ತಮ್ಮ ಅಪಾರ ಬೆಂಬಲಿಗರ ಜೊತೆ ಸೇರಿ ನಾಮಪತ್ರ ಸಲ್ಲಿಕೆ 

ಬಿಜೆಪಿ ಅಭ್ಯರ್ಥಿ ಡಾ ಪ್ರೀತನ್ ನಾಗಪ್ಪ ತಮ್ಮ ಅಪಾರ ಬೆಂಬಲಿಗರ ಜೊತೆ ಸೇರಿ ನಾಮಪತ್ರ ಸಲ್ಲಿಕೆ 

ಹನೂರು :- ವಿಧಾನಸಭಾ ಕ್ಷೆತ್ರದ ಬಿಜೆಪಿ ಅಭ್ಯರ್ಥಿ ಡಾ ಪ್ರೀತನ್ ನಾಗಪ್ಪ ನವರು ಹನೂರು ಪಟ್ಟಣದ ಶ್ರೀ ಬೆಟ್ಟಳ್ಳಿ ಮಾರಮ್ಮನ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ನಂತರ ಬೆಟ್ಟಳ್ಳಿ ಮಾರಮ್ಮ ದೇವಸ್ಥಾನದಿಂದ ಚುನಾವಣಾ ಅಧಿಕಾರಿ ಕಚೇರಿಯ ತನಕ ತಮ್ಮ ಪಕ್ಷದ ಕಾರ್ಯಕರ್ತರು ತಮ್ಮ ತಾಯಿಯಾದ ಮಾಜಿ ಶಾಸಕಿ ಪರಿಮಳ ನಾಗಪ್ಪ ಹಾಗೂ ಬೆಂಬಲಿಗರ ಜೊತೆ ತಮಟೆ ವಾದ್ಯ ಗೋಷ್ಠಿಯ ಮೂಲಕ ವಿಜೃಂಭಣೆಯಿಂದ ಒಂದು ಕಿಲೋಮೀಟರ್ ತನಕ ಹನೂರು ಪಟ್ಟಣದ ಮುಖ್ಯ ರಸ್ತೆಯಲ್ಲಿ ಕಾಲ್ನಡಿಗೆಯ ಮೂಲಕ ಸಾಗಿ ದಿವಂಗತ ಎಚ್ ನಾಗಪ್ಪನವರ ಸುಪುತ್ರ ಡಾ ಪ್ರೀತನ್ ನಾಗಪ್ಪ ನವರು ಮೇ 13 ಕ್ಕೆ ಹನೂರು ವಿಧಾನ ಕ್ಷೆತ್ರದಿಂದ ಜಯಶೀಲರಾಗಿ ಗೆದ್ದು ಬರುತ್ತಾರೆ ಎಂಬ ಜಯ ಘೋಷಣೆ ಕೂಗುತ್ತ ಭಾರತೀಯ ಜನತಾ ಪಾರ್ಟಿ ಪಕ್ಷದ ಪರ ಜೈಕಾರ ಕೂಗುತ್ತ ಸಾವಿರಾರು ಬೆಂಬಲಿಗರ ಜೊತೆ ಸಾಗಿ ನಾಮಪತ್ರ ಸಲ್ಲಿಸಿದ್ದಾರೆ.

 

 

 

 

 

ಹಾಗೂ ಇದೆ ವೇಳೆಯಲ್ಲಿ ಹನೂರು ಬಿಜೆಪಿ ಟಿಕೆಟ್ ರೇಸ್ ನಲ್ಲಿದ್ದ ಜನಧ್ವನಿ ವೆಂಕಟೇಶ್. ಮಾನಸ ಸಂಸ್ಥೆಯ ದತ್ತೆಶ್. ಯುವ ಮುಖಂಡ ನಿಶಾಂತ್. ಗೈರಾಗಿದ್ದಾರೆ ಬಿಜೆಪಿ ಟಿಕೆಟ್ ಫೈನಲ್ ಹಾಗುವ ವರೆಗೂ ಪಕ್ಷ ಯಾರಿಗೆ ಟಿಕೆಟ್ ಕೊಟ್ಟರು ಒಗ್ಗಟ್ಟಾಗಿ ದುಡಿಯುತ್ತೇವೆ ಹನೂರು ಕ್ಷೆತ್ರದಲ್ಲಿ ಬಿಜೆಪಿ ಪತಾಕೆ ಹಾರಿಸುವುದೇ ನಮ್ಮ ಗುರಿ ಬಿಜೆಪಿ ಅಭ್ಯರ್ಥಿ ಯಾರೇ ಆದರೂ ಅಧಿಕಾರಕ್ಕೆ ತರುವುದೇ ನಮ್ಮ ಕೆಲಸ ನಾವೆಲ್ಲರೂ ಜೊತೆ ಸೇರಿ ಕೆಲಸ ಮಾಡುತ್ತೇವೆ ಎಂದು ಹೇಳುತಿದ್ದ ಮೂವರು ಹನೂರು ವಿಧಾನಸಭಾ ಕ್ಷೆತ್ರದ ಪ್ರಭಾವಿ ಬಿಜೆಪಿ ಟಿಕೆಟ್ ಆಕಾಂಕ್ಷಿ ಗಳಾಗಿದ್ದ ಮುಖಂಡರುಗಳು ಹನೂರು ಕ್ಷೆತ್ರದ ಬಿಜೆಪಿ ಅಭ್ಯರ್ಥಿ ಡಾ ಪ್ರೀತನ್ ನಾಗಪ್ಪನವರು ಸೋಮವಾರ ಬೆಳಿಗ್ಗೆ ನಾಮಪತ್ರ ಸಲ್ಲಿಸುವ ವೇಳೆ ಕಾಣಿಯಾಗಿರುವ ಕುರಿತು ಈ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಪ್ರೀತನ್ ನಾಗಪ್ಪ ಅವರೆಲ್ಲರೂ ನಮ್ಮ ಜೊತೆ ಬರುತ್ತಾರೆ ನನ್ನ ಪರವಾಗಿ ನಮ್ಮ ಬಿಜೆಪಿ ಪಕ್ಷದ ಪರವಾಗಿ ಕೆಲಸ ಮಾಡುತ್ತಾರೆ ಎಂದು ಹೇಳಿದರು .

 

 

 

 

ಹಾಗೂ ಸುಮಾರು 15 ವರ್ಷದಿಂದ ಅಭಿವೃದ್ಧಿ ಕುಂಟಿತವಾಗಿದೆ ನಿರುದ್ಯೋಗ ಸಮಸ್ಯೆ ತಾಂಡವ ಆಡುತ್ತಿದೆ ಇದೆಲ್ಲವೂ ಮುಕ್ತಿ ಸಿಗಬೇಕೆಂದರೆ ಹನೂರು ಕ್ಷೆತ್ರದ ಬದಲಾವಣೆ ಆಗಬೇಕಿದೆ ಮೂಲಭೂತ ಸೌಕರ್ಯ ದಿಂದ ವಂಚಿತವಾಗಿರುವ ನಮ್ಮ ಕ್ಷೆತ್ರವನ್ನು ಅಭಿರುದ್ದಿ ಯತ್ತ ಕೊಂಡೋಯ್ಯಬೇಕಿದೆ ಸನ್ಮಾನ್ಯ ನರೇಂದ್ರ ಮೋದಿಜಿ ಯವರ ಜನಪರ ಯೋಜನೆಗಳು ಜನರಿಗೆ ತುಂಬಾ ಹರ್ಷದಾಯಕವಾಗಿದೆ ಕ್ಷೆತ್ರದ ಅಪಾರ ಜನರು ವ ವಿಸ್ವಾಸ ಇಟ್ಟುಕೊಂಡು ಆಶೀರ್ವಾದ ಮಾಡಿದ್ದಾರೆ ಆಗಾಗಿ ಇವತ್ತು ನಾಮಪತ್ರ ಸಲ್ಲಿಸಿದ್ದೇನೆ ನಮ್ಮ ಬಿಜೆಪಿ ಪಕ್ಷದ ಎಲ್ಲಾ ಮತದಾರರು ಮುಖಂಡರು ಬಹಳ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಆಶೀರ್ವಾದ ಮಾಡಿದ್ದಾರೆ ಅವರಿಗೆ ಹೃತ್ಪೂರ್ವಕವಾದ ಧನ್ಯವಾದಗಳನ್ನು ತಿಳಿಸುತ್ತೇನೆ ಇದೆ ರೀತಿ ಚುನಾವಣೆ ಸಮಯದಲ್ಲಿ ಕ್ಷೆತ್ರದ ಮತದಾರ ಬಂಧುಗಳ ಆಶೀರ್ವಾದ ಸದಾ ಈಗೆ ಇರಲಿ ಎಂದು ಮಾತನಾಡಿದರು.

 

 

 

 

 

 

ಈ ಸಂದರ್ಭದಲ್ಲಿ ಕಾಡ ಅಧ್ಯಕ್ಷರು ನಿಜಗುಣರಾಜು ರಾಜ್ಯ ಬಿಜೆಪಿ ಉಪಾಧ್ಯಕ್ಸರು ಚಾಮರಾಜನಗರ ಚುನಾವಣಾ ಉಸ್ತುವಾರಿಗಳು ರಾಜೇಂದ್ರ ಪ್ರಸಾದ್ ಬುದುಬಾಳು ವೆಂಕಟಸ್ವಾಮಿ ಹನೂರು ಮಾಧ್ಯಮ ಸಂಚಾಲಕ ಕೆ ಬಿ ಮಧು ಮಂಗಲ ಪ್ರಕಾಶ್. ಮಹಾ ಶಕ್ತಿ ಕೇಂದ್ರ ಪ್ರಧಾನ ಕಾರ್ಯದರ್ಶಿ ಪ್ರಭಾಕರ್. ಬಿಂದು ಲೋಕೇಶ್. ಮತ್ತು ಬಿಜೆಪಿ ಪಕ್ಷದ ಕಾರ್ಯಕರ್ತರು ಬೆಂಬಲಿಗರು ಹಾಜರಿದ್ದರು

 

ವರದಿ :- ನಾಗೇಂದ್ರ ಪ್ರಸಾದ್

Leave a Reply

Your email address will not be published. Required fields are marked *

You cannot copy content of this page

error: Content is protected !!
Exit mobile version