ಬಿಜೆಪಿ , ಜೆಡಿಎಸ್ ಗೆ ಸಾಮಾಜಿಕ ನ್ಯಾಯದ ಬದ್ದತೆ ಇಲ್ಲ. ಸರ್ವರಿಗೂ ಸಮಪಾಲು-ಸರ್ವರಿಗೂ ಸಮಬಾಳು ನನ್ನ ದ್ಯೇಯ – ಸಿದ್ದರಾಮಯ್ಯ.
ತುಮಕೂರು : ಯಾವ ಜನಾಂಗಕ್ಕೆ ತಮ್ಮ ಹಕ್ಕು ಪ್ರತಿಪಾದನೆ ಮಾಡಲು ಧ್ವನಿ ಇಲ್ಲವೊ,ಶಕ್ತಿ ಇಲ್ಲವೊ ಅವರ ಪರ ಹೋರಾಡಲು ನಾನಿದ್ದೇನೆ,ಅಧಿಕಾರ ಇರಲಿ ಇಲ್ಲದಿರಲಿ ಸಾಮಾಜಿಕ ನ್ಯಾಯಕ್ಕಾಗಿ ನನ್ನ ಹೋರಾಟ ನಿರಂತರ .ಈ ದೇಶದಲ್ಲಿ ಸರ್ವರಿಗೂ ಸಮಪಾಲು ಸಮಬಾಳು ಸಿಗಬೇಕು ಎಂಬುದೆ ನನ್ನ ಆಶೆಯ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಿ ಎಲ್ ಪಿ ನಾಯಕ ಸಿದ್ದರಾಮಯ್ಯ ತಿಳಿಸಿದ್ದಾರೆ.
ಅವರು ಇಂದು ತುಮಕೂರು ನಗರದ ಕಾಳಿದಾಸ ಕಾಲೇಜಿನ ಆವರಣದಲ್ಲಿ ನಡೆದ ಜಿಲ್ಲಾ ಮಟ್ಟದ ಕುರುಬರ ಜಾಗೃತಿ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡುತ್ತಾ ಬಿಜೆಪಿ ಮತ್ತು ಜೆಡಿಎಸ್ ಪಕ್ಷ ಗಳಿಂದ ಸಾಮಾಜಿಕ ನ್ಯಾಯ ಸಿಗದು,ಅವರಿಗೆ ಬದ್ದತೆಯೂ ಇಲ್ಲ. ದೇಶದ ಸಂಪತ್ತು ಮತ್ತು ಅಧಿಕಾರ ಎಲ್ಲಾ ಸಮುದಾಯಗಳಿಗೂ ಹಂಚಿಕೆಯಾಗಬೇಕು ಎಂಬುದು ಬಾಬಾ ಸಾಹೇಬ್ ಅಂಬೇಡ್ಕರ್ ರ ಒತ್ತಾಸೆಯಾಗಿತ್ತು ,ಅಧಿಕಾರ ಬಲಾಢ್ಯರ ಕೈಗೆ ಸಿಕ್ಕರೆ ಅವಕಾಶ ಗಳಿಂದ ವಂಚಿಚರಾದವರಿಗೆ ನ್ಯಾಯ ಸಿಗದು. ಸಂವಿಧಾನದ ಅಶಯಗಳ ಪರ ಹೋರಾಡುವವರಿಗೆ ನೀವು ಮತ ಹಾಕಬೇಕು ಎಂದು ಸಮಾವೇಶದಲ್ಲಿ ಜನಾಂಗವನ್ನು ಎಚ್ಚರಿಸಿದರು.
ಕುರುಬರು ಜಾಗೃತವಾಗಬೇಕು ,ಕೋರ್ಟ್ ನೆಪವೊಡಿ ಹಿಂದುಳಿದವರಿಗೆ ಸ್ಥಳೀಯ ಸಂಸ್ಥೆಗಳಲ್ಲಿ ಮೀಸಲಾತಿಯನ್ನು ವಂಚಿಸಲಾಗುತ್ತಿದೆ.1994ರಲ್ಲಿ ಹಿಂದುಳಿದ ಮತ್ತು ಅಲ್ಪಸಂಖ್ಯಾತರಿಗೆ ೩೩/ ಹಾಗೂ ಮಹಿಳೆಯರಿಗೆ ೫೦/ ಮೀಸಲಾತಿ ಸಿಗಲು ಕಾರಣನಾದೆ ಅಂದು ಮಂತ್ರಿಯಾಗಿ ಹಿಂದುಳಿದವರ ಪರ ಕೆಲಸ ಮಾಡಿದೆ ಎಂದು ಹೇಳಿದರು.
೧೯೮೬ ರಲ್ಲಿ ರಾಮಕೃಷ್ಣ ಹೆಗಡೆ ಮುಖ್ಯ ಮಂತ್ರಿಯಾಗಿದಾಗ ಕೊರಟಗೆರೆ ಕ್ಷೇತ್ರದ ವೀರಣ್ಣ ಹಾಗೂ ನಾನು ಕಾಡು ಕುರುಬ,ಜೇನು ಕುರುಬ,ನಾಯಕ,ವಾಲ್ಮೀಕಿ ಜನಾಂಗದವರಿಗೆ ಪರಿಶಿಷ್ಟ ಪಂಗಡದ ಸರ್ಟಿಫಿಕೇಟ್ ಕೊಡಲುಹೇಳಿದವೂ ,ಈ ಜಾತಿ ಪ್ರಮಾಣ ಪತ್ರ ತೆಗೆದುಕೊಂಡು ಉದ್ಯೋಗ ಸೇರಿದವರ ವಿರುದ್ಧ ಅಂದು ಕೇಸು ಗಳನ್ನು ಹಾಕಿ ಕೆಲಸ ದಿಂದ ವಜಾ ಮಾಡಿದರು ಅವರ ಪರ ನಿಂತು ಕೆಲಸ ಮಾಡಿ ಪುನಃ ಕೆಲಸಕ್ಕೆ ಸೇರಲು ಅವಕಾಶ ಕಲ್ಪಿಸಲಾಯಿತು. ಇಂದು ಬೀದರ್,ಕಲಬುರ್ಗಿ, ಯಾದಗಿರಿ ಜಿಲ್ಲೆಗಳಲ್ಲಿ ಗೊಂಡಾ ಜನರಿಗೆ ಜಾತಿ ಸರ್ಟಿಫಿಕೇಟ್ ನೀಡಲಾಗುತ್ತಿಲ್ಲ,ಗೊಂಡಾ,ರಾಜಗೊಂಡ ಹಾಗೂ ಕುರುಬರು ಒಂದೇ ಎಂದು ಸಿದ್ದರಾಮಯ್ಯ ಪ್ರತಿಪಾದಿಸಿದರು.
ನಾನು ಮುಖ್ಯಮಂತ್ರಿ ಅಗಿದಾಗ ೧೬೨ ಕೋಟಿ ಮೀಸಲಿಟ್ಟು ಜಾತಿ ಜನಗಣತಿಯನ್ನು ಮಾಡಿಸಿ ಯಾವ ಯಾವ ಸಮಾಜದ ಆರ್ಥಿಕ, ಸಾಮಾಜಿಕ, ರಾಜಕೀಯ ಶೈಕ್ಷಣಿಕ ಸ್ಥಿತಿಗತಿಗಳ ಬಗ್ಗೆ ತಿಳಿಯಲು ಕಾಂತರಾಜು ಆಯೋಗ ಮಾಡಿದೆ.ಆಯೋಗ ವರದಿಯನ್ನು ಅಂದಿನ ಮುಖ್ಯ ಮಂತ್ರಿ ಕುಮಾರಸ್ವಾಮಿ ಸ್ವೀಕರಿಸಿದೆ ನಿರ್ಲಕ್ಷ್ಯ ತೋರಿತು, ಕುಲಶಾಸ್ತ್ರೀಯಅದ್ಯಯನ ಕ್ಕೆ ೪೦ ಲಕ್ಷ ಬಿಡುಗಡೆ ಮಾಡಿದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ .
ಈಶ್ವರಪ್ಪ ವಿರುದ್ಧ ವಾಕ್ ಪ್ರಹಾರ :
ನಾನು ಕುರುಬ ಎಂದು ಹೇಳಿಕೊಳ್ಳಲು ಈಶ್ವರಪ್ಪ ಗೆ ನಾಚಿಕೆಯಾಗಬೇಕು.ಕೇಂದ್ರದಲೂ ,ರಾಜ್ಯದಲ್ಲೂ ಬಿಜೆಪಿ ಸರ್ಕಾರವೆ ಇದೇ ಸ್ವತಃ ಮಂತ್ರಿಯಾಗಿದ ಈಶ್ವರಪ್ಪ ಹಿಂದುಳಿದ ವರಿಗೆ ಸ್ಥಳೀಯ ಸಂಸ್ಥೆ ಗಳಲ್ಲಿ ಮೀಸಲಾತಿಯನ್ನು ನಿರಾಕರಿಸುತ್ತಿರುವುದರ ಬಗ್ಗೆ ದ್ವನಿ ಎತ್ತಬೇಕಾಯಿತ್ತು ಸರಿಯಾದ ವಕೀಲರನ್ನು ಇಡಬೇಕಾಯಿತು ಎಂದ ಸಿದ್ದರಾಮಯ್ಯ ಕನಕ ಗುರುಪೀಠವಾಗಲು ಸಹ ಈಶ್ವರ ಪಾತ್ರ ಇಲ್ಲ ಬರಿ ಬೂಟಾಟಿಕೆ,ನಾಟಕ ಮಾಡಿಕೊಂಡು ತಿರುಗುತ್ತಾನೆ ಎಂದು ಈಶ್ವರಪ್ಪ ವಿರುದ್ಧ ವಾಕ್ ಪ್ರಹಾರ ನಡೆಸಿದರು.
ಮೋದಿ ವಿರುದ್ಧವೂ ಹರಿಹಾಯ್ದ ಸಿದ್ದು :
ಸಂವಿಧಾನದ ಅಶಯಕ್ಕೆ ವಿರುದ್ಧ ವಾಗಿ ಮೋದಿಯವರು ಮೇಲ್ವರ್ಗದ ಜನರಿಗೆ ೧೦/ ಮೀಸಲಾತಿಯನ್ನು ಜಾರಿಗೆ ತಂದಿದ್ದಾರೆ.ಈ ಮೀಸಲಾತಿಯು ಸಂವಿಧಾನ ಬದ್ದವೇ ಎಂದು ಪ್ರಶ್ನಿಸಿರುವ ಸಿದ್ದರಾಮಯ್ಯ ಸಂವಿಧಾನ ವೂ ಸಾಮಾಜಿಕ ವಾಗಿ ಶೈಕ್ಷಣಿಕ ವಾಗಿ ಹಿಂದುಳಿದವರಿಗೆ ಮೀಸಲಾತಿಯನ್ನು ನೀಡಲು ಅವಕಾಶ ಮಾಡಲಾಗಿದೆ ಅರ್ಥಿಕವಾಗಿ ಹಿಂದುಳಿದ ಮೇಲ್ವರ್ಗದ ವರಿಗೆ ಮೀಸಲಾತಿ ನೀಡಿ ಎಂದು ಎಲ್ಲೂ ಹೇಳಿಲ್ಲ ಎಂದು ಕಿಡಿಕಾರಿದರು.
ಆಗಸ್ಟ್ ೩ರಂದು ಅಹಿಂದ ಸಮಾವೇಶ:
ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ ಬೈರತಿ ಸುರೇಶ್ ಸಿದ್ದರಾಮಯ್ಯ ರವರ ಹುಟ್ಟು ಹಬ್ಬದ ಅಂಗವಾಗಿ ಬರುವ ಆಗಸ್ಟ್ ೩ರಂದು ದಾವಣಗೆರೆಯಲ್ಲಿ ಹತ್ತು ಲಕ್ಷ ಮಂದಿ ಸೇರಿ ಬೃಹತ್ ಅಹಿಂದ ಸಮಾವೇಶ ಹಾಗೂ ಸಿದ್ದರಾಮಯ್ಯ ಹುಟ್ಟಹಬ್ಬವನ್ನು ಅಚ್ಚರಿಸಲಾಗುವುದು ಎಂದು ಹೇಳಿದರು .
ಸಮಾವೇಶದಲ್ಲಿ ಶಾಸಕ ವೆಂಕಟರಮಣಪ್ಪ,ಮಾಜಿ ಸಚಿವರಾದ ಹೆಚ್ ಎಮ್ ರೇವಣ್ಣ,ಟಿ ಬಿ ಜಯಚಂದ್ರ,ಮಾಜಿಶಾಸಕರಾದ ಕೆ ಎನ್ ರಾಜಣ್ಣ,ರಫೀಕ್ ಆಹಮ್ಮದ್,ಕಾಂತರಾಜು ಮಾತನಾಡಿದರು.
ಮುಖಂಡರಾದ ತಿಪಟೂರು ನಾರಾಯಣ್, ರಾಮಚಂದ್ರಪ್ಪ, ಕೆಂಪರಾಜು, ಶಿವಣ್ಣ,ರಘರಾಮ್,ಶೆಂಕರ್,ಭಾಗ್ಯಮ್ಮ,ಪ್ರಭಾವತಿ, ನಿಖೀತ್ ರಾಜು,ಸೇರಿದಂತೆ ಮಾಜಿ ,ಹಾಲಿ ಮಹಾನಗರಪಾಲಿಕೆ ಸದಸ್ಯರು ಭಾಗವಹಿಸಿದರು.