ಬಸವ ಕಲ್ಯಾಣದಿಂದ ವಿಜಯೇಂದ್ರ?! – ರಾಜಕೀಯ ಶಕ್ತಿ ತುಂಬಲು “ಹೊಸ ಪ್ಲಾನ್” – ಬೆಳಗಾವಿಯಿಂದ ಸತೀಶ್ ಜಾರಕಿಹೊಳಿ!?

 

 

 

ಬೆಂಗಳೂರು: ರಾಜ್ಯದ ಮೂರು ವಿಧಾನ ಸಭಾ ಉಪ ಚುನಾವಣೆಗೆ ಈಗಾಗಲೇ ವೇದಿಕೆ ಸಿದ್ದಗೊಂಡಿದೆ.

ಮೂರು ಪಕ್ಷಗಳಲ್ಲಿ ರಾಜಕೀಯ ಗರಿಗೆದರಿದೆ. ಈ ನಡುವೆ

ಕಾಂಗ್ರೆಸ್​ ಇದೇ ಮೊದಲ ಬಾರಿಗೆ ಎಲ್ಲಾ ಪಕ್ಷಗಳಿಗಿಂತ ಮೊದಲೇ ಅಭ್ಯರ್ಥಿಗಳ ಹೆಸರು ಘೋಷಣೆ ಮಾಡಿದ್ದಾರೆ.

ಏಪ್ರಿಲ್​ 17ರಂದು ಮತದಾನ ನಡೆಯಲಿದ್ದು, ಮೇ 2ರಂದು ಫಲಿತಾಂಶ ಪ್ರಕಟವಾಗಲಿದೆ

ಸಿಂದಗಿ, ಬಸವಕಲ್ಯಾಣ, ಮಸ್ಕಿ, ವಿಧಾನಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದೆ. ಬೆಳಗಾವಿ ಲೋಕಸಭಾ ಉಪಚುನಾವಣೆ ಅಭ್ಯರ್ಥಿ ಆಯ್ಕೆಯನ್ನು ಮಾತ್ರ ಪ್ರಕಟಗೊಳಿಸಿಲ್ಲ. ಬಸವಕಲ್ಯಾಣದಿಂದ ಮಾಜಿ ಶಾಸಕ ನಾರಾಯಣ ರಾವ್​ ಹೆಂಡತಿ ಮಲ್ಲಮ್ಮ, ಸಿಂದಗಿ ಕ್ಷೇತ್ರದಿಂದ ಇತ್ತೀಚೆಗಷ್ಟೇ ಜೆಡಿಎಸ್​ ತೊರೆದು ಪಕ್ಷ ಸೇರ್ಪಡಗೊಂಡ ಅಶೋಕ್​ ಮನಗೂಳಿ, ಮಸ್ಕಿಯಿಂದ ಬಸವನಗೌಡ ತುರವಿಹಾಳ್ ಅವರಿಗೆ ಟಿಕಟ್​ ಘೋಷಣೆ ಮಾಡಲಾಗಿದೆ. ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್​ ಸಿಂಗ್​ ನೇತೃತ್ವದ ಕೋರ್​​ ಕಮಿಟಿಯು ಅಭ್ಯರ್ಥಿಗಳ ಬಗ್ಗೆ ತೀರ್ಮಾನಿಸಿದ ಬಳಿಕ ಈ ಹೆಸರನ್ನು ಹೈ ಕಮಾಂಡ್​ಗೆ ಕಳುಹಿಸಲಾಗುವುದು. ಬಳಿಕ ಬಿಜೆಪಿ ಕೇಂದ್ರ ಚುನಾವಣಾ ಸಮಿತಿ ಅಭ್ಯರ್ಥಿಗಳ ಹೆಸರನ್ನು ಅಂತಿಮಗೊಳಿಸಲಿದೆ ಎನ್ನಲಾಗಿದೆ.

ಇತ್ತ ಲಿಂಗಾಯತ ಮತ್ತು ಮರಾಠಿ ಪ್ರಾಬಲ್ಯ ಇರುವ ಬಸವ ಕಲ್ಯಾಣದಿಂದ ಬಿಜೆಪಿ ಯುವ ನಾಯಕ, ಯಡಿಯೂರಪ್ಪ ಪುತ್ರ ವಿಜಯೇಂದ್ರ ಬಿಜೆಪಿಯಿಂದ ಸ್ಪರ್ಧೆ ಮಾಡುವ ಸಾಧ್ಯತೆ ಇದೆ. ಇದಕ್ಕಾಗಿಯೇ ಲಿಂಗಾಯತ ಹಾಗೂ ಮರಾಠ ಅಭಿವೃದ್ಧಿ ಮಂಡಳಿಯನ್ನು ಬಿಜೆಪಿ ಸರ್ಕಾರ ರಚಿಸಿದೆ ಎಂಬ ಚರ್ಚೆ ನಡೆಯುತ್ತಿದೆ. ಇನ್ನು ಬಸವ ಕಲ್ಯಾಣದಲ್ಲಿ ಮೃತ ಕಾಂಗ್ರೆಸ್ ಶಾಸಕರ ಪತ್ನಿ ವಿರುದ್ಧ ವಿಜಯೇಂದ್ರ ಗೆಲುವು ಸುಲಭ ಇದೆ. ಜೊತೆಗೆ ರಾಜ್ಯ ರಾಜಕೀಯಕ್ಕೆ ಎಂಟ್ರಿ ಮಾಡುವ ಪ್ಲಾನ್ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.

ಇತ್ತ ಬೆಳಗಾವಿ ಲೋಕ ಸಭೆಗೆ ಸುರೇಶ್ ಅಂಗಡಿ ಪುತ್ರಿ, ಕಾಂಗ್ರೆಸ್ನಿಂದ ಸತೀಶ್ ಜಾರಕಿಹೊಳಿ ಹೆಸರು ಚಾಲ್ತಿಯಲ್ಲಿದೆ.

 

Leave a Reply

Your email address will not be published. Required fields are marked *

You cannot copy content of this page

error: Content is protected !!
Exit mobile version