ಸಿರಾ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ

 

 

ಶಿರಾ ತಾಲೂಕಿನ ಕಾರ್ಯ ಮತ್ತು ಪಾಲನಾ ಘಟಕ ಬೆಂಗಳೂರು ವಿದ್ಯುತ್ ಕಂಪನಿ ಶಿರಾ ನಗರ ಮತ್ತು ಗ್ರಾಮೀಣ ಭಾಗಕ್ಕೆ ಸಂಬಂಧಿಸಿದಂತೆ ದಿನಾಂಕ 4/3 /21ರಿಂದ ದಿನಾಂಕ 5/3/ 21ರವರೆಗೆ ಬೆಳಗ್ಗೆ 11ರಿಂದ ಸಂಜೆ 6ಗಂಟೆಯವರೆಗೆ ಚಂಗಾವರ ವೃತ್ತದಿಂದ ನಾಗಜ್ಜಿ ಗುಡಿಸಲು ವರೆಗೆ pwd ರಸ್ತೆ ಅಗಲೀಕರಣ ಕಾಮಗಾರಿ ಮಾಡಬೇಕಾಗಿರುವುದರಿಂದ 66/ 11ಕೆವಿ ಉಪ ಸ್ಥಾವರದಿಂದ ಹೊರಡುವ ಈ ಕೆಳಕಂಡ 11 ಕೆವಿ ಫೀಡರ್ಸ್ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗುವುದರಿಂದ ಈ ಕೆಳಕಂಡ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜು ವ್ಯತ್ಯಯವಾಗುತ್ತದೆ ಎಂದು ಬೆಸ್ಕಾಂ ಇಲಾಖೆ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

F1- ಕಾಮತ್- ಗೂಮ್ಮನಹಳ್ಳಿ ಜಂಜರಮನಹಳ್ಳಿ ಎಮ್ಮೆರಹಳ್ಳಿ ಹೆಗ್ಗನಹಳ್ಳಿ ಯಲಿಯೂರು ಮತ್ತು ಈಡಿಗರ ದಾಸರಳ್ಳಿ.

F2-ಎಲಿಯೂರು-ಎರಗುಂಟೆ ಎಲಿಯೂರು ಹಾಗೂ ಸುತ್ತಮುತ್ತಲಿನ ಗ್ರಾಮಗಳು.

F4-ಎಸ್ಕೆಜಿ-ಚಂಗಾವರ ವೃತ್ತದ ಕಾಂಪ್ಲೆಕ್ಸ್ ಸಪ್ತಗಿರಿ ಬಡಾವಣೆ, ಮಾಧವನಗರ, ಜಲೀಲ್ ಲೇಔಟ್, ವಾಜಿದ್ ಲೇಔಟ್ ,ಕೇಶವ ನಗರ ,ವಿದ್ಯಾ ನಗರ ,ನಂದಿನಿ ಲೇಔಟ್ ,ಮಾರುತಿ ನಗರ ಸಂತೆಪೇಟೆ ,ಕೊಳದಪ್ಪಲೆಶ್ವರ ದೇವಸ್ಥಾನ.

F10-ಕೆಎಸ್ಆರ್ಟಿಸಿ ಡಿಪೋ -ಆರ್ ಎಂಸಿ ಯಾರ್ಡ್ ,ಹನುಮಂತನಗರ ,ಸರಸ್ವತಿ ಬಡಾವಣೆ, ಎಚ್ಪಿ ಪೆಟ್ರೋಲ್ ಬಂಕ್, ಕೃಷ್ಣನಗರ ,ಮುಕ್ತಿದಾಮ.

F3 ಮೇಕೆರಹಳ್ಳಿ-ಬುತೇಶ್ವರ ನಗರ, ಬಜ್ಜಿ ಕಟ್ಟೆ ,ಮೇಕೆರಹಳ್ಳಿ ,ಮುದುಗೆರೆ ,ಮುದುಗೆರೆ ಕಾವಲ್, ಅಂತಾಪುರ ,ಹೊನ್ನೇನಹಳ್ಳಿ ಚಿತ್ತಗಾನಹಳ್ಳಿ, ಕುಣಿ ಗಾಟ ಗಾನ ಹಳ್ಳಿ ,ರಂಗಪ್ಪನ ಪಾಳ್ಯ.

F11 ಮಾನಂಗಿ-ಆಂಜನೇಯ ದೇವಸ್ಥಾನ ,ಮಾನಂಗಿ ಅಜ್ಜಯ್ಯನ ಪಾಳ್ಯ ಭುವನಹಳ್ಳಿ ಸೋರೆಕುಂಟೆ.

F12 ಬೆಂಚೆ-ನಿಂಬೆ ಮರದ ಹಳ್ಳಿ ,ವಡ್ಡನಹಳ್ಳಿ ,13 ಕಂಚಿಗಾನಹಳ್ಳಿ ಕಾಳಪ್ಪನಹಳ್ಳಿ ಕೆಂಚಪ್ಪನ ಹಳ್ಳಿ ವಡ್ಡರಹಟ್ಟಿ.

 

ಈ ಮೇಲೆ ತಿಳಿಸಿರುವ ದಿನಾಂಕದಂದು ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗುತ್ತದೆ ಎಂದು ಈ ಮೂಲಕ ಬೆಂಗಳೂರು ವಿದ್ಯುತ್ ಕಂಪನಿ ಗ್ರಾಹಕರ ಗಮನಕ್ಕೆ ತಿಳಿಯಪಡಿಸಲಾಗಿದೆ ಹಾಗೂ ಎಲ್ಲಾ ಗ್ರಾಹಕರು ಸಹಕರಿಸಬೇಕೆಂದು ಬೆಸ್ಕಾಂ ಕಾರ್ಯನಿರ್ವಾಹಕ ಎಂಜಿನಿಯರ್ ಪ್ರಕಟಣೆಯಲ್ಲಿ ಕೋರಿದ್ದಾರೆ.

Leave a Reply

Your email address will not be published. Required fields are marked *

You cannot copy content of this page

error: Content is protected !!
Exit mobile version