ಜಮೀರ್ ಹಾಗೂ ನಿಖಿಲ್ ಬೆಂಬಲಿಗರ ಗಲಾಟೆ ವಿಚಾರ.. ನಿಖಿಲ್ ಕುಮಾರ್ ಸ್ಪಷ್ಟನೆ

 

ತುಮಕೂರು ತಾಲ್ಲೂಕಿನ ಬಳಗೆರೆಯಲ್ಲಿ ನಿಖಿಲ್ ಪ್ರತಿಕ್ರಿಯೆ.. ಒಬ್ಬ ಜನಪ್ರತಿನಿಧಿಯಾಗಿ ಮಾತಾಡಬೇಕಾದ್ರೇ ತೂಕವಾಗಿ ಮಾತಾಡಬೇಕು..

ರಾಜಕೀಯವಾಗಿ ಯಾವಥರ ಬೇಕಾದ್ರೂ ಮಾತಾಡಿ..

ಎರಡು ಬಾರಿ ಸಿಎಂ‌ ಅನ್ನೋದನ್ನು ಬದಿಗಿಟ್ಟು ಮಾತಾಡೋಣ..

ಮನುಷ್ಯ,ಮನುಷ್ಯನಿಗೆ ಬೆಲೆ ಕೊಡೋದನ್ನ ಮೊದಲು ಕಲಿಯಬೇಕು..

ನಿನ್ನೆ ಅವ್ರು ಮಾಧ್ಯಮಗಳಲ್ಲಿ ಮಾತನಾಡಿದ್ದನ್ನ ಸೂಕ್ಷ್ಮವಾಗಿ ಗಮನಿಸಿದೆ..

ಅವ್ರ ಸಂಸ್ಕೃತಿ ಏನು ಅನ್ನೋದನ್ನ ಅರ್ಥ ಮಾಡಿಕೊಳ್ಳಬಹುದು..

ನಮ್ಮ ನಾಯಕರು ಆ ಮನೆಗೆ ಕಾಲಿಟ್ಟು ಸುಮಾರು ಏಳೆಂಟು ವರ್ಷಗಳಾಗಿದೆ..

ಮೆಖ್ರಿ ಸರ್ಕಲ್ ನಲ್ಲಿರೋ ಮನೆಯನ್ನ ಕುಮಾರಣ್ಣ ಗೆಸ್ಟ್ ಹೌಸ್ ಥರ ಉಪಯೋಗಿಸ್ತಿದ್ರು..

ಮೂರ್ನಾಲ್ಕು ದಿನಗಳ ಹಿಂದಷ್ಟೆ ಆ ಮನೆಯನ್ನ ಕ್ಲಿಯರ್ ಮಾಡಿಸಿಕೊಡಿ ಎಂದಿದ್ರು..

ಖಾಲಿ ಇದ್ದರಿಂದ ನನ್ನ ಸುತ್ತಮುತ್ತ ಕೆಲಸ ಮಾಡೋ ಹುಡುಗರು ಅಲ್ಲಿ ವಾಸ ಇದ್ರು..

ನನ್ನ ಕೆಲವೊಂದಷ್ಟು ಶೂಟಿಂಗ್ ಮೆಟಿರಿಯಲ್‌ಗಳು ಅಲ್ಲಿ ಇದ್ದವು..

ಕೋವಿಡ್ ಇರೋ ಕಾರಣ್ಣ ಎಲ್ಲಾ ಹುಡುಗರು ಬೀಗ ಹಾಕಿ ಊರಿಗೆ ಹೋಗಿದ್ರು..

ನಿನ್ನೆ‌‌ ಬೀಗ ಹೊಡೆದು ಎಲ್ಲವನ್ನೂ ಚೆಲ್ಲಾಪಿಲ್ಲಿ ಮಾಡಿರೋದು ನೋಡಿದ್ವಿ..

ಹುಡುಗರು ಬಂದು ಕೇಳಿದ್ದಕ್ಕೆ ಮಾತುಕತೆ ಆಗಿದೆ,ದೊಡ್ಡಮಟ್ಟದ ರಂಪಾಟ ಏನು ಆಗಿಲ್ಲಾ..

ಅವ್ರು ದೊಡ್ಡವರಿದ್ದಾರೆ,ಅವ್ರ ಬಗ್ಗೆ ಮಾತಾಡೋಕೆ ನಾನು ಇಷ್ಟಪಡಲ್ಲಾ..

ಅವ್ರ ವಸ್ತುವನ್ನ ಅವ್ರು ವಾಪಸ್ಕೇ

ಕೇಳುತ್ತಿದ್ದಾರೆ,ತಪ್ಪೇನಿಲ್ಲಾ..

ಈಗ ನಾವು ಅದನ್ನ ಖುಷಿಖುಷಿಯಾಗಿ ಕೊಡ್ತಿದ್ದೇವೆ..

ಒಂದ್ ಟೈಂನಲ್ಲಿ ಅವ್ರು ನಮ್ಮ ನಾಯಕರ ಜೊತೆ ಬಹಳ ಆತ್ಮೀಯವಾಗಿ‌ ಇದ್ರು..

ರಾಜಕಾರಣದಲ್ಲಿ ಅವ್ರು ಬೆಳೆಯೋದಕ್ಕೆ ನಮ್ಮ ನಾಯಕರದ್ದೂ ಕೂಡ ಕೊಡುಗೆ ಇದೆ..

ನಿಖಿಲ್ ಇನ್ನೂ ಹುಡುಗ ಅನ್ನೋ ಜಮೀರ್ ಹೇಳಿಕೆ ವಿಚಾರ..

ನನ್ನಿನ್ನೂ ಹುಡುಗಾನೇ,ನನಗೇನು ವಯಸ್ಸಾಗಿಲ್ಲಾ,ನಾನ್ ಇನ್ನೂ ಚಿಕ್ಕಹುಡುಗಾನೇ..

ನಾವ್ ಮಾತಾಡಬೇಕಾದ್ರೇ ಸಮಾಜಕ್ಕೆ ಏನ್ ಸಂದೇಶ ಕೊಡ್ತೀವಿ ಅನ್ನೋದನ್ನ ಅವ್ರು ಯೋಚನೆ ಮಾಡ್ಲಿ..

ಏಕವಚನದಲ್ಲಿ ಮಾತಾಡೋದು ಎಷ್ಟರಮಟ್ಟಿಗೆ ಸರಿ ಅನ್ನೋದು ನಾವ್ ಯೋಚನೆ ಮಾಡಬೇಕು..

ತುಮಕೂರು ತಾಲ್ಲೂಕಿನ ಬಳಗೆರೆಯಲ್ಲಿ ನಿಖಿಲ್ ಕುಮಾರ್ ಹೇಳಿಕೆ.

Leave a Reply

Your email address will not be published. Required fields are marked *

You cannot copy content of this page

error: Content is protected !!
Exit mobile version