ಆಟಿಕಾ ಬಾಬು ಎಂಟ್ರಿಗೆ ಬೆಚ್ಚಿಬಿತ್ತ್ಹಾ ತುಮಕೂರು ಜೆಡಿಎಸ್ ಘಟಕ. ತೆರೆಮರೆಯ ಕಸರತ್ತು ಶುರು ಆಯ್ತಾ ತುಮಕೂರು ನಗರಸಭಾ ವಿಧಾನಸಭಾ ಕ್ಷೇತ್ರದಲ್ಲಿ.
ತುಮಕೂರು : ಇತ್ತೀಚಿಗೆ ತುಮಕೂರು ಜಿಲ್ಲಾ ಜೆಡಿಎಸ್ ಪಾಳಯದಲ್ಲಿ ಗುಸು ಗುಸು ಸುದ್ಧಿ ಹಬ್ಬುತ್ತಿದ್ದ ತುಮಕೂರು ನಗರ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯ ಹೆಸರುಗಳು ಒಂದೊಂದು ದಿನ ಒಬ್ಬೊಬ್ಬರ ಹೆಸರು ಕೇಳಿಬರುತ್ತಿದೆ.
ಒಂದು ದಿನ ಈ ಹಿಂದೆ ಎರಡು ಭಾರಿ ಪರಾಜಯಗೊಂಡಿದ್ದ ಗೆಳೆಯರ ಬಳಗದ ಎನ್.ಗೋವಿಂದರಾಜು ಎಂದು ಪ್ರಭಲವಾಗಿ ಕೇಳಿ ಬರುತ್ತಿದ್ದರೂ, ಇದಕ್ಕೆ ಪರ್ಯಾಯವಾಗಿ ಹಲವಾರು ಜನರ ಹೆಸರುಗಳು ಸಹ ಇತ್ತೀಚೆಗೆ ಕೇಳಿ ಬಂದವು, ಅವುಗಳಲ್ಲಿ ಪ್ರಮುಖವಾಗಿ ಪ್ರಥಮ ದರ್ಜೆ ಗುತ್ತಿಗೆದಾರರು, ಸಮಾಜ ಸೇವಕರು ಜೆಡಿಎಸ್ ಹಿರಿಯ ಮುಖಂಡರಾದ ಬಿ.ನರಸೇಗೌಡ, ಉದ್ಯಮಿ ಹಾಗೂ ಕ್ರಿಯಾಶೀಲ ಜೆಡಿಎಸ್ ಮುಖಂಡ ಬೆಳ್ಳಿಲೋಕೇಶ್, ಸರ್ಕಾರಿ ಉದ್ಯೋಗಿಯಾಗಿರುವ ಎನ್.ನರಸಿಂಹರಾಜು, ಹಾಲಿ ಕಾರ್ಯಾಧ್ಯಕ್ಷರಾಗಿರುವ ಟಿ.ಆರ್.ನಾಗರಾಜು ಹೀಗೆ ಇನ್ನೂ ಹಲವರ ಹೆಸರು ಇತ್ತೀಚೆಗೆ ಸುದ್ಧಿ ಮಾಡಿದ್ದವು.
ಇವೆಲ್ಲದಕ್ಕೂ ತೆರೆ ಎಳೆಯುವಂತೆ ಮಾಡಿದೆ ಇತ್ತೀಚೆಗೆ ವ್ಯಕ್ತಿಯೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಹಾಕಿರುವ ಪೋಸ್ಟ್ ! ಇದು ಅಚ್ಚರಿಯಾದರೂ ಸತ್ಯ, ಏಕೆಂದರೆ ಇತ್ತೀಚೆಗೆ ಕಳೆದ ಮೂರು ನಾಲ್ಕು ತಿಂಗಳುಗಳಿಂದ ಯಾವುದೇ ಕೆಲಸವಿಲ್ಲದಿದ್ದರೂ ಅಟ್ಟಿಕಾ ಗೋಲ್ಡ್ ಕಂಪನಿಯ ಮಾಲೀಕರಾದ ಬಾಬುರವರು ಸುಖಾ ಸುಮ್ಮನೆ ತುಮಕೂರು ನಗರದ ಹಲವಾರು ಜೆಡಿಎಸ್ ಮುಖಂಡರುಗಳ ಮನೆಗೆ ಭೇಟಿ ನೀಡಿರುವುದು, ಹಲವಾರು ಸಮಾಜ ಸೇವಕರನ್ನು ಬಂದು ಮಾತನಾಡಿಸಿಕೊಂಡು ಹೋಗುತ್ತಿದ್ದರು, ಇದನ್ನೆಲ್ಲಾ ಕೆಲ ಕಾರ್ಯಕರ್ತರು ಗಮನಿಸಿದರೂ ಏನೋ ವ್ಯವಹಾರದ ನಿಮಿತ್ತ ಬಂದು ಹೋಗಿರಬಹುದು ಎಂದು ಸುಮ್ಮನಾಗುತ್ತಿದ್ದರು ಎನ್ನಲಾಗಿದೆ.
ಅಷ್ಟೂ ಸಾಲದು ಎಂಬಂತೆ ಇತ್ತೀಚೆಗೆ ಜೆಡಿಎಸ್ ಕಾರ್ಯಕರ್ತರುಗಳ ಬಾಯಲ್ಲಿ ಬಂದಿರುವ ಗುಸು ಗುಸು ವಿಷಯವೇನೆಂದರೆ ಸನ್ಮಾನ್ಯ ಹೆಚ್.ಡಿ.ಕುಮಾರಸ್ವಾಮಿಯವರ ಆದೇಶದ ಮೇರೆಗೆ ಅಟ್ಟಿಕಾ ಬಾಬುರವರು ತುಮಕೂರು ನಗರದ ಅಭ್ಯರ್ಥಿಯಾಗುವುದಲ್ಲದೇ, ಇಲ್ಲಿನ ಸಂಪೂರ್ಣ ವ್ಯವಸ್ಥೆಯ ಜವಾಬ್ದಾರಿಯನ್ನು ವಹಿಸಿಕೊಟ್ಟಿದ್ದಾರೆ ಎನ್ನಲಾಗುತ್ತಿದೆ.
ಅಟ್ಟಿಕಾ ಬಾಬುರವರು ಈ ಹಿಂದೆ ಬೆಂಗಳೂರಿನ ಬೊಮ್ಮನಹಳ್ಳಿ ಕ್ಷೇತ್ರದ ಅಭ್ಯರ್ಥಿಯಾಗಬೇಕೆಂಬುದು ಅವರ ಮಹದಾಸೆಯಾಗಿತ್ತು ಎನ್ನಲಾಗಿದ್ದು, ಅವರು ಆ ಕ್ಷೇತ್ರದಲ್ಲಿ ಸಾಕಷ್ಟು ಕೆಲಸಗಳನ್ನು ಮಾಡಿದ್ದಾರೆ ಎನ್ನಲಾಗಿದೆ. ಇನ್ನೂ ಈ ಬಾಬುರವರಿಗೆ ಚಿನ್ನದ ಗಣಿ ಎಂಬ ಮತ್ತೊಂದು ಹೆಸರೂ ಸಹ ಇದೆ, ಏಕೆಂದರೆ ಇವರು ಚಿನ್ನಾಭರಣದ ಉದ್ಯಮಿಯಾಗಿದ್ದು, ಇವರು ಆ ಉದ್ಯಮದಲ್ಲಿ ಸಾಕಷ್ಟು ಯಶಸ್ಸುಗಳಿಸಿದ್ದಾರೆಂಬ ಮಾತುಗಳಿವೆ.
ಇನ್ನೂ ಅಟ್ಟಿಕಾ ಬಾಬುರವರಿಗೆ ತುಮಕೂರು ಜಿಲ್ಲಾ ಚುನಾವಣಾ ಉಸ್ತುವಾರಿಯನ್ನೂ ಕುಮಾರಸ್ವಾಮಿರವರು ವಹಿಸಿಕೊಟ್ಟಿದ್ದಾರೆ ಎಂಬ ಗುಮಾನಿಯೂ ಇದ್ದು, ಇವರ ಆಗಮನದಿಂದ ಜಿಲ್ಲಾ ಜೆಡಿಎಸ್ ಘಟಕದಲ್ಲಿ ಅಲ್ಲೋಲ ಕಲ್ಲೋಲ ಎದ್ದಿದ್ದೆ, ಏಕೆಂದರೆ ಈಗಾಗಲೇ ಕೆಲವು ಸ್ಥಳೀಯ ಮುಖಂಡರುಗಳು ತಾವು ಶಾಸಕ ಸ್ಥಾನದ ಅಭ್ಯರ್ಥಿಗಳಾಗುತ್ತೇವೆಂದು ತುಂಬಾ ಶ್ರಮವಹಿಸಿ ಕೆಲಸ ನಿರ್ವಹಿಸುತ್ತಿದ್ದರು, ಆದರೆ ಇವರ ಆಗಮನದಿಂದ ಇವರುಗಳಿಗೆ ಬೇಸರ ಮೂಡಿಸಿದೆಂಬ ಅಭಿಪ್ರಾಯ ಪಕ್ಷದ ಕಾರ್ಯಕರ್ತರಲ್ಲಿ ಮೂಡಿದೆ.
ಇದಕ್ಕೆಲ್ಲಾ ತೆರೆ ಎಳೆಯಬೇಕೆಂದರೆ ಪಕ್ಷದ ಹಿರಿಯ ಮುಖಂಡರು, ಜಿಲ್ಲಾ ಘಟಕದ ಅಧ್ಯಕ್ಷರು ಹಾಗೂ ಸ್ಥಳೀಯ ಅಭ್ಯರ್ಥಿ ಆಕಾಂಕ್ಷಿಗಳ ಬಹಿರಂಗ ಹೇಳಿಕೆಯಿಂದ ಮಾತ್ರ ಕಾರ್ಯಕರ್ತರಲ್ಲಿ ಗೊಂದಲವನ್ನು ನಿವಾರಣೆ ಮಾಡಲು ಸಾಧ್ಯ ಎಂಬ ಭಾವನೆ ನಿಷ್ಠಾವಂತ ಜೆಡಿಎಸ್ ಕಾರ್ಯಕರ್ತರ ಕೂಗಾಗಿದೆ.