ಬಾಬಾ ಸಾಹೇಬ್ ಅಂಬೇಡ್ಕರ್ ಫ್ಲೆಕ್ಸ್ ವಿರೂಪ, ದಲಿತ ಸಂಘಟನೆಗಳ ಆಕ್ರೋಶ.

ಬಾಬಾ ಸಾಹೇಬ್ ಅಂಬೇಡ್ಕರ್ ಫ್ಲೆಕ್ಸ್ ವಿರೂಪ, ದಲಿತ ಸಂಘಟನೆಗಳ ಆಕ್ರೋಶ.

ತುಮಕೂರು -ತುಮಕೂರಿನಲ್ಲಿ ಗಣರಾಜ್ಯೋತ್ಸವದ ಪ್ರಯುಕ್ತ ಬಜರಂಗದಳದ ವತಿಯಿಂದ ತುಮಕೂರು ನಗರದ ಟೌನ್ ಹಾಲ್ ವೃತ್ತದಲ್ಲಿ ಅಳವಡಿಸಿರುವ ಫ್ಲೆಕ್ಸ್ ಗಳಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್ ರವರ ಭಾವಚಿತ್ರವನ್ನು ವಿರೂಪ ಗೊಳಿಸಿದ್ದು ಘಟನೆಗೆ ಸಂಬಂಧಿಸಿದಂತೆ ತುಮಕೂರಿನ ದಲಿತ ಸಂಘಟನೆಗಳ ಮುಖಂಡರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

 

ಇದಕ್ಕೆ ಸಂಬಂಧಿಸಿದಂತೆ ತುಮಕೂರು ಮಹಾನಗರ ಪಾಲಿಕೆ ಮೇಯರ್ ಹಾಗೂ ಆಯುಕ್ತರಿಗೆ ಮನವಿ ಸಲ್ಲಿಸಿ ಕೂಡಲೇ ಫ್ಲಕ್ಸ್ ತೆರವುಗೊಳಿಸಲು ದಲಿತ ಸಂಘಟನೆಗಳ ಮುಖಂಡರು ಒತ್ತಾಯಿಸಿದ್ದಾರೆ.

ಇದೆ ಸಂದರ್ಭದಲ್ಲಿ ಪ್ರತಿಕ್ರಿಯೆ ನೀಡಿರುವ ಅಖಿಲ ಭಾರತ ದಲಿತ ಕ್ರಿಯಾ ಸಮಿತಿಯ ಜಿಲ್ಲಾಧ್ಯಕ್ಷ ನಿಧಿ ಕುಮಾರ್ ರಾಜ್ಯೋತ್ಸವದ ಪ್ರಯುಕ್ತ ವಿಶ್ವಹಿಂದೂ ಪರಿಷತ್ ಹಾಗೂ ಬಜರಂಗದಳ ದಳದವರು ಅಳವಡಿಸಿರುವ ಫ್ಲಕ್ಸ್ ನಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್ ರವರಿಗೆ ತಿಲಕ ಇಟ್ಟು  ಅವಮಾನಿಸಿದ್ದಾರೆ ರವರು ಮನುಷ್ಮೃತಿಯ ವಿರುದ್ಧವಾಗಿ ಇದ್ದಂತವರು ಆದರೆ ಅಂತ ಮಹಾತ್ಮರ ಫೋಟಗೆ ತಿಲಕ ಇಟ್ಟು ಅವಮಾನಿಸಿರುವುದು  ಖಂಡನೀಯ ಹಾಗಾಗಿ ಕೂಡಲೇ ಫ್ಲೆಕ್ಸ್ ಗಳು ತೆರವುಗೊಳಿಸಬೇಕು ಇಲ್ಲವಾದರೆ ನಾಳೆ ಪಾಲಿಕೆ ಆವರಣದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದರು.

 

 

ಅಂಬೇಡ್ಕರ್ ಅವರ ಆಶಯಗಳಿಗೆ ವಿರುದ್ಧವಾಗಿ ಫ್ಲಕ್ಸನ್ನ ಮುದ್ರಿಸಿದ್ದು ಆ ಮೂಲಕ ಅಂಬೇಡ್ಕರ್ ಅವರಿಗೆ ಅವಮಾನಿಸಲಾಗಿದೆ ಎಂದು ಮತ್ತೋರ್ವ ದಲಿತ ಮುಖಂಡ ಗುರುಪ್ರಸಾದ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Leave a Reply

Your email address will not be published. Required fields are marked *

You cannot copy content of this page

error: Content is protected !!
Exit mobile version