ರಕ್ತದಾನ ಮಹತ್ವದ ಕುರಿತು ಅರಿವುಮೂಡಿಸಬೇಕು:ಅಂಬರೀಶ ಗೌಡ
ದೇವನಹಳ್ಳಿ:ಇಂದಿನ ಯವಕರು ಒಂದು ಸಿದ್ಧಾಂತದ ಮೇಲೆ ದೇಶವನ್ನು ಒಗ್ಗಟ್ಟಿನಿಂದ ಅಭಿವೃದ್ಧಿಯೆಡೆಗೆ ನಡೆಸಬೇಕು, ಸಮಾಜಮುಖಿ ಕಾರ್ಯಗಳಲ್ಲಿ ಅಗ್ರಸ್ಥಾನದಲ್ಲಿರುವ ರಕ್ತದಾನ ಮಾಡುವುದರ ಮೂಲಕ ಯುವಕರು ಒಳ್ಳೆಯ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಿ ಹಾಗೂ ಇತರರಿಗೂ ಸಹ ರಕ್ತದಾನದ ಕುರಿತು ಅರಿವು ಮೂಡಿಸಬೇಕು ಎಂದು ಅಸಂಘಟಿತ ಕಾರ್ಮಿಕರ ಪ್ರಕೋಷ್ಠದ ಜಿಲ್ಲಾ ಸಂಚಾಲಕರು ಅಂಬರೀಶಗೌಡರು ಹೇಳಿದರು.
ಬಿಜೆಪಿ ಪಕ್ಷದ ವತಿಯಿಂದ ತಾಲ್ಲೂಕು ಹಂತದಲ್ಲಿ” ಆಗಸ್ಟ್ 13 ಭಾನುವಾರದಂದು ಆವತಿ ಶಕ್ತಿಕೇಂದ್ರದಲ್ಲಿ ರಕ್ತದಾನ ಶಿಬಿರ ಏರ್ಪಡಿಸುವ ಕುರಿತು ಪೂರ್ವಭಾವಿ ಸಭೆ”ಯನ್ನು ಆವತಿಯ ಕತ್ತಿಮಾರಮ್ಮ ದೇವಲಾಯದಲ್ಲಿ ನಡೆಸಲಾಯಿತು.
ರೈತಮೋರ್ಚಾ ಜಿಲ್ಲಾಧ್ಯಕ್ಷ ರವಿಕುಮಾರ್ ಮಾತನಾಡಿ ಚುನಾವಣೆಯಲ್ಲಿ ಮುಂದಿನ ಗೆಲುವಿನ ಗುರಿಯೊಂದಿಗೆ ಜನರನ್ನು ಇಂದಿನ ಸರ್ಕಾರದ ಉಚಿತಗಳಿಂದಾಗುವ ರಾಜ್ಯಕ್ಕಾಗುವ ನಷ್ಟದ ಕುರಿತು ಮನವರಿಕೆ ಮಾಡಿ ಸಾಮಾಜಿಕ ಸೇವೆಗಳಲ್ಲಿ ನಾವೆಲ್ಲರೊ ಸಕ್ರಿಯರಾಗಬೇಕು, ರೈತವಿಧಿನಿಧಿಯನ್ನು ನಿಲ್ಲಿಸಲಾಗಿದೆ,ಜಿಲ್ಲೆಗಳಲ್ಲಿ ರೈತವಿರೋಧಿ ರೂಪುರೇಷೆಗಳನ್ನು ಖಂಡಿಸಿ ಜಿಲ್ಲಾಧಿಕಾರಿಗಳಲ್ಲಿ ಮನವಿ ಮಾಡಲಾಗುವುದು ಪ್ರತಿಯೂಬ್ಬರೂ ಭಾಗವಹಿಸಿ ಸಹಕರಿಸಬೇಕು ಎಂದರು.
ಮುಖಂಡರಾದ ಓಬದೇನಹಳ್ಳಿ ಮುನಿಯಪ್ಪ ಚುನಾವಣೆಯಲ್ಲಿ ಸೋಲು ಗೆಲುವು ಸಹಜ ಆದ್ದರಿಂದ ಸೋಲಿನ ಕುರಿತು ಧೃತಿಗೆಡದೆ ಮುಂದಿನ ಲೋಕಸಭಾ,ತಾಲ್ಲೂಕು ಮತ್ತು ಜಿಲ್ಲಾ ಪಂಚಾಯತಿ ಚುನಾವಣೆಗಳಿಗೆ ಸರ್ವಸನ್ನದ್ಧರಾಗಬೇಕು ಎಂದರು.
ಇದೇ ಸಂದರ್ಭದಲ್ಲಿ ರಾಜ್ಯ ಉಪಾಧ್ಯಕ್ಷ ಲೋಕೇಶ್, ಪ್ರಧಾನಕಾರ್ಯದರ್ಶಿ ನಿಲೇರಿ ಮಂಜುನಾಥ್ ,ಮುಖಂಡರಾದ ನಾಗರಾಜಗೌಡ ,ಮುರುಳಿ ,ಪುನೀತಾ,ದಾಕ್ಷಯಿಣಿ,ರಜನಿ ಸೇರಿದಂತೆ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.
ವರದಿ : ಮಂಜು ಬೂದಿಗೆರೆ
9113813926