ಮಾಜಿ ಶಾಸಕ ಸುರೇಶ್ ಗೌಡ ವಿರುದ್ಧ ಮಾನ ನಷ್ಠ ಮೊಕದ್ದಮೆ ನೋಟಿಸ್ ನೀಡಿದ ಆಟಿಕಾ ಬಾಬು
ತುಮಕೂರು:ಕೊಲೆ ಸುಪಾರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪ ಮಾಡಿದ್ದ ಮಾಜಿ ಶಾಸಕ ಬಿ.ಸುರೇಶ್ ಗೌಡ ವಿರುದ್ಧ ಖ್ಯಾತ ಉದ್ಯಮಿ ಹಾಗೂ ಜೆಡಿಎಸ್ ಮುಖಂಡ ಆಟಿಕಾ ಬಾಬು 100ಕೋಟಿ ರೂಗಳ ಮಾನನಷ್ಟ ಮೊಕದ್ದಮೆ ನೋಟೀಸ್ ನೀಡಿದ್ದಾರೆ.
ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಅರಿಯೂರು ಗ್ರಾಮದಲ್ಲಿ ಖಾಸಗಿ ಕಾರ್ಯಕ್ರಮದಲ್ಲಿ ಭಾಷಣ ಮಾಡುತ್ತಿದ್ದ ವೇಳೆ ಮಾಜಿ ಶಾಸಕ ಬಿ ಸುರೇಶ್ ಗೌಡ ಗ್ರಾಮಾಂತರ ಶಾಸಕ ಡಿಸಿ ಗೌರಿಶಂಕರ್ ತಮ್ಮನ್ನು ಕೊಲೆ ಮಾಡಲು ಜೈಲಿನಲ್ಲಿರುವ ಕೈದಿಯವರಿಗೆ ಸುಪಾರಿ ನೀಡಿದ್ದಾರೆ ಎಂದು ಆರೋಪಿಸಿದ್ದರು ಇನ್ನು ಇದೇ ವಿಷಯಕ್ಕೆ ಸಂಬಂಧಿಸಿದಂತೆ ಜೈಲಿನಲ್ಲಿರುವ ಖೈದಿಗೆ ಆಟಿಕಾ ಬಾಬು ಮುಖಾಂತರ ಹಣ ನೀಡಲಾಗುತ್ತದೆ ಎಂದು ಆರೋಪಿಸಿದ್ದರು.
ಇನ್ನು ಈ ವಿಷಯಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಆಟಿಕಾ ಬಾಬು ಈ ಪ್ರಕರಣಕ್ಕೂ ತಮಗೂ ಯಾವುದೇ ರೀತಿ ಸಂಬಂಧ ಇಲ್ಲ ಹಾಗೂ ಯಾವುದೇ ಈ ರೀತಿಯ ಹಿನ್ನೆಲೆಯಿಂದ ತಾವು ಬಂದಿಲ್ಲ ಎಂದು ಸ್ಪಷ್ಟೀಕರಣ ನೀಡಿದರು. ಪ್ರಸ್ತುತ ಪ್ರಕರಣ ಮತ್ತೊಂದು ತಿರುವು ಪಡೆದಿದ್ದು, ಆಟಿಕ ಬಾಬು ರವರ ಮೇಲೆ ಆರೋಪ ಮಾಡಿರುವ ಹಿನ್ನೆಲೆಯಲ್ಲಿ ಮಾಜಿ ಶಾಸಕ ಬಿ ಸುರೇಶ್ ಗೌಡ ವಿರುದ್ಧ 100 ಕೋಟಿ ರೂಗಳ ಮಾನನಷ್ಟ ಮೊಕದ್ದಮೆಯ ನೋಟಿಸ್ ನೀಡಲಾಗಿದೆ.
ಆಟಿಕಾ ಬಾಬು ಪರ ವಕೀಲರಾದ ಎಸ್.ಎಂ.ಪಾಷಾ (ಬೆಂಗಳೂರಿನ ಆಕ್ಸೆಸ್ ಲಾ ಸಂಸ್ಥೆ) ಈ ಸಂಬಂಧ ಮಾಜಿ ಶಾಸಕ ಬಿ.ಸುರೇಶ್ ಗೌಡ ರವರಿಗೆ ನೋಟಿಸ್ ನೀಡಲಾಗಿದೆ.
ನೋಟಿಸ್ ನ ಸಾರಾಂಶ:
ನಮ್ಮ ಕಕ್ಷೀದಾರರು ಒಬ್ಬ ದೊಡ್ಡ ಉದ್ಯಮಿಯಾಗಿದ್ದು, ಆಟಿಕಾ ಗೋಲ್ಡ್ ಕಂಪನಿಯ ಮಾಲೀಕರಾಗಿ ದಕ್ಷಿಣ ಭಾರತದಾದ್ಯಂತ ಸುಮಾರು 200ಕ್ಕೂ ಅಧಿಕ ಶಾಖೆಗಳನ್ನು ಹೊಂದಿದ್ದು, ಆರ್ಥಿಕವಾಗಿ ಸರ್ಕಾರಕ್ಕೆ ತೆರಿಗೆ ಪಾವತಿಸುತ್ತಾ,ಉದ್ಯಮ ನಡೆಇಲುತ್ತಿದ್ದಾರೆ. ಸಮಾಜದಲ್ಲಿ ಗೌರವಾದರಗಳನ್ನು ಹೊಂದಿ ಹಲವಾರು ಸಾಮಾಜಿಕ ಕಾರ್ಯಗಳಲ್ಲೂ ತೊಡಗಿದ್ದಾರೆ.
ಇನ್ನು ರಾಜಕಾರಣದಲ್ಲಿಯೂ ಸಹ ತೊಡಗಿಕೊಂಡು ರಾಜಕೀಯ ಕ್ಷೇತ್ರದಲ್ಲಿ ಸೇವೆ ಮಾಡಲು ತೊಡಗಿಸಿಕೊಂಡಿದ್ದಾರೆ. ಅವರು ಉತ್ತಮ ಕುಟುಂಬದ ಹಿನ್ನೆಲೆಯಲ್ಲಿ ಬಂದಿದ್ದು, ಯಾವುದೇ ಕ್ರಿಮಿನಲ್ ಚಟುವಟಿಕೆಗಳಲ್ಲಿ ತೊಡಗಿಲ್ಲ.
ತುಮಕೂರು ನಗರ ಹಾಗೂ ಗ್ರಾಮಾಂತರ ಪ್ರದೇಶದಲ್ಲಿ ರಾಜಕೀಯವಾಗಿ ತೊಡಗಿಕೊಂಡಿರುವ ನಮ್ಮ ಕಕ್ಕೀದಾರರನ್ನು ವೈಯಕ್ತಿಕವಾಗಿ ಗುರಿಯಾಗಿರಿಸಿಕೊಂಡು ಆಧಾರರಹಿತ ಆರೋಪ ಮಾಡಿರುವುದರಿಂದ ಅವರ ಸಾಮಾಜಿಕ ಹಾಗೂ ರಾಜಕೀಯ ಭವಿಷ್ಯಕ್ಕೆ ಧಕ್ಕೆಯುಂಟಾಗಿರುವುದರಿಂದ ಕೂಡಲೇ ನೋಟಿಸ್ ತಲುಪಿದ 15 ದಿನದೊಳಗೆ ಬಹಿರಂಗ ಕ್ಷಮೆಯಾಚಿಸಬೇಕು. ಇಲ್ಲವಾದಲ್ಲಿ ಕಾನೂನಿನನ್ವಯ 100ಕೋಟಿ ರೂಗಳ ಮಾನಮಷ್ಟ ಮೊಕದ್ದಮೆ ಹೂಡಲಾಗುತ್ತದೆ ಎಂದು ತಿಳಿಸಿದ್ದಾರೆ.