ಫಾರಿನ್ ದೆಟೆಂಶನ್ ಸೆಂಟರ್ನಲ್ಲಿ ಉಳಿದಿರುವ ವಿದೇಶಿಗರಿಂದ ಪೊಲೀಸರ ಮೇಲೆ ಹಲ್ಲೆ.
ತುಮಕೂರು – ವಿವಿಧ ಕಾರಣಗಳಿಂದ ಹೊರದೇಶದಿಂದ ಭಾರತಕ್ಕೆ ಆಗಮಿಸಿ ತಮ್ಮ ತವರುದೇಶಕ್ಕೆ ತೆರಳಲು ಹಿಂದೇಟು ಹಾಕಿ ರಾಜ್ಯದಲ್ಲೇ ಉಳಿದಿರುವ ವಿದೇಶಿ ಮಹಿಳೆಯರಿಂದ ಪೊಲೀಸರ ಮೇಲೆ ಹಲ್ಲೆ ನಡೆದಿರುವ ಘಟನೆ ತುಮಕೂರಿನಲ್ಲಿ ವರದಿಯಾಗಿದೆ.
ಶುಕ್ರವಾರ ಸಂಜೆ ತುಮಕೂರಿನ ಹೊರವಲಯದ ದಿಬ್ಬೂರು ಬಳಿ ಇರುವ ಫಾರಿನ್ ಡಿಟೆಂಶನ್ ಸೆಂಟರ್ ನಲ್ಲಿ ಉಳಿದಿರುವ ವಿದೇಶಿಗರು ಕ್ಷುಲ್ಲಕ ಕಾರಣಕ್ಕೆ ಗಲಾಟೆ ಮಾಡುತ್ತಾ ಸ್ಥಳೀಯ ಪೊಲೀಸರು ಹಾಗೂ ಅಡುಗೆ ಸಹಾಯಕರ ಮೇಲೆ ಹಲ್ಲೆ ಮಾಡಿದ್ದು ವಿದೇಶೀಗರ ಹಲ್ಲೆಯಿಂದ ಇಬ್ಬರು ಮಹಿಳಾ ಪೊಲೀಸರು ಸಹ ಗಾಯಗೊಂಡಿರುವ ಘಟನೆ ವರದಿಯಾಗಿದ್ದು ಘಟನೆ ತಿಳಿದು ಕೂಡಲೇ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್ ಕುಮಾರ್ ಶಹಪುರ್ ವಾಡ್, ಅಡಿಷನಲ್ ಎಸ್ ಪಿ ಮರಿಯಪ್ಪ, ಡಿವೈಎಸ್ಪಿ ಶ್ರೀನಿವಾಸ್ ಸೇರಿದಂತೆ ಹಲವು ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ತನಿಖೆ ಕೈಗೊಂಡಿದ್ದಾರೆ.
ಇನ್ನು ಸ್ಥಳಕ್ಕೆ ಆಗಮಿಸಿದ ಪೊಲೀಸರೊಂದಿಗೆ ತೀವ್ರ ವಾಗ್ವಾದ ನಡೆಸಿದ ವಿದೇಶಿಗರು ಪೊಲೀಸರೊಂದಿಗೆ ಅನುಚಿತವಾಗಿ ವರ್ತಿಸಿದ್ದು ಪೊಲೀಸರು ಅವರನ್ನು ಸಮಾಧಾನ ಪಡಿಸಲು ಹರಸಾಹಸ ಪಡಬೇಕಾಯಿತು.
ಘಟನೆ ಬಗ್ಗೆ ಪ್ರತಿಕ್ರಿಯೆ ನೀಡಿರುವ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್ ಕುಮಾರ್ ಶಹಪೂರ್ ವಾಡ್ ಪ್ರತಿಕ್ರಿಯಿಸಿದ್ದು ತುಮಕೂರಿನಲ್ಲಿರುವ ಫಾರಿನ್ ಡಿಟೆನ್ಶನ್ ಸೆಂಟರ್ನಲ್ಲಿ 27ಕ್ಕೂ ವಿದೇಶಿಗರು ತಂಜೇನಿಯ, ನೈಜೀರಿಯಾ, ಬಾಂಗ್ಲಾದೇಶ್ ದೇಶದಿಂದ ಬಂದಿದ್ದು ತಾವಾಗಿಯೇ ಅಡಿಗೆ ಮಾಡಿಕೊಳ್ಳುತ್ತಿದ್ದು ಅದು ತುಂಬಾ ಕಷ್ಟದ ಕೆಲಸವಾಗಿತ್ತು ಇದನ್ನು ಗಮನಿಸಿದ ತಾಲೂಕು ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಊಟದ ವ್ಯವಸ್ಥೆ ಸಹ ಮಾಡಲಾಗಿತ್ತು ಆದರೆ ಇಂದು ಏಕಾಏಕಿ ಪೊಲೀಸರ ಮೇಲೆ ಹಲ್ಲೆ ಮಾಡಿದ್ದು ನಾಲ್ವರು ಪೊಲೀಸ್ ಸಿಬ್ಬಂದಿಗಳು ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಾಗಿದ್ದು ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.