ಭಾರತದ ಬಡ ಮುಸ್ಲಿಮರನ್ನು ತಾಲಿಬಾನಿಗಳು ಎನ್ನುವುದನ್ನು ನಿಲ್ಲಿಸಬೇಕು ಓವೈಸಿ ಕಿಡಿ

ಭಾರತದ ಬಡ ಮುಸ್ಲಿಮರನ್ನು ತಾಲಿಬಾನಿಗಳು ಎನ್ನುವುದನ್ನು ನಿಲ್ಲಿಸಬೇಕು ಓವೈಸಿ ಕಿಡಿ

 

ಹೈದರಾಬಾದ್: ಕೇಂದ್ರ ಸರ್ಕಾರವು ತಾಲಿಬಾನ್‌ ನ್ನು ಉಗ್ರ ಸಂಘಟನೆ ಎಂದು ಗುರುತಿಸಬೇಕು. ಇಲ್ಲವೇ ಬಡ ಮುಸ್ಲಿಮರನ್ನು ತಾಲಿಬಾನಿಗಳು ಎನ್ನುವುದನ್ನು ನಿಲ್ಲಿಸಬೇಕು ಎಂದು ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್‌ ಓವೈಸಿ ಹೇಳಿದ್ದು, ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ತಾಲಿಬಾನ್‌ ಬಗ್ಗೆ ಇಬ್ಬಗೆ ನೀತಿಯನ್ನು ಅನುಸರಿಸುತ್ತಿದೆ ಎಂದು ಹೇಳಿದ್ದಾರೆ.

 

ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ  ಅವರು,  ಪ್ರಧಾನಿ ಮೋದಿ ಸರ್ಕಾರವು ತಾಲಿಬಾನ್ ಉಗ್ರ ಸಂಘಟನೆಯೋ? ಅಲ್ಲವೋ? ಎನ್ನುವುದನ್ನು ದೇಶಕ್ಕೆ ಹೇಳಬೇಕು. ಒಂದು ವೇಳೆ ತಾಲಿಬಾನ್‌ ಒಂದು ಉಗ್ರ ಸಂಘಟನೆ ಎಂದು ಸರ್ಕಾರ ಹೇಳಿದರೆ, ತಾಲಿಮಾನ್‌ ಮತ್ತು ಹಕ್ಕಾನಿ ಜಾಲವನ್ನು ಅಕ್ರಮ ಚಟುವಟಿಕೆ(ತಡೆ) ಕಾಯ್ದೆ (ಯುಎಪಿಎ) ಅಡಿಯಲ್ಲಿ ಭಯೋತ್ಪಾದಕ ಪಟ್ಟಿಗೆ ಸೇರಿಸಲಾಗುತ್ತದೆಯೇ ಎಂಬುದನ್ನೂ ಸ್ಪಷ್ಟಪಡಿಸಬೇಕು. ಮೋದಿ ಸರ್ಕಾರ ತಾಲಿಬಾನ್‌ ಅನ್ನು ಉಗ್ರ ಸಂಘಟನೆಯಲ್ಲ ಎಂದು ಭಾವಿಸುವುದಾದರೆ, ಬಿಜೆಪಿ ಮತ್ತು ಅವರ ನಾಯಕರು ಎಲ್ಲರನ್ನೂ ತಾಲಿಬಾನಿಗಳು ಎನ್ನುವುದನ್ನು ನಿಲ್ಲಿಸಬೇಕು ಎಂದ ತಿಳಿಸಿದರು.

 

ದೇಶದಲ್ಲಿ ಇದು ಪ್ರತಿ ದಿನವೂ ನಡೆಯುತ್ತಿದೆ. ಒಬ್ಬ ಬಡ ಮುಸ್ಲಿಂ ವ್ಯಕ್ತಿ ರಸ್ತೆಯಲ್ಲಿ ತರಕಾರಿ ಮಾರುತ್ತಿದ್ದರೆ, ಅವನನ್ನು ತಾಲಿಬಾನಿ ಎನ್ನಲಾಗುತ್ತದೆ. ಯಾರಾದರೂ ರಾಜಕೀಯವಾಗಿ ಬಿಜೆಪಿಯನ್ನು ವಿರೋಧಿಸಿದರೆ, ಧರ್ಮವನ್ನು ಬದಿಗಿಟ್ಟು ತಾಲಿಬಾನಿ ಮನಸ್ಥಿತಿಯವರು ಎನ್ನಲಾಗುತ್ತದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

Leave a Reply

Your email address will not be published. Required fields are marked *

You cannot copy content of this page

error: Content is protected !!
Exit mobile version