ಮಾರುಕಟ್ಟೆಯ ಸಮಯ ಬದಲು;ಅನಧಿಕೃತ ಅಂಗಡಿಗಳ ಮೇಲೆ ಎಪಿಎಂಸಿ ಸಮಿತಿ ದಿಢೀರ್ ದಾಳಿ; ದಂಡ ವಸೂಲಿ. ಅನಧಿಕೃತ ಅಂಗಡಿಗಳ ತೆರವಿಗೆ ಶುಕ್ರವಾರದವರೆಗೆ ಗಡುವು..!

ಮಾರುಕಟ್ಟೆಯ ಸಮಯ ಬದಲು;ಅನಧಿಕೃತ ಅಂಗಡಿಗಳ ಮೇಲೆ ಎಪಿಎಂಸಿ ಸಮಿತಿ ದಿಢೀರ್ ದಾಳಿ; ದಂಡ ವಸೂಲಿ. ಅನಧಿಕೃತ ಅಂಗಡಿಗಳ ತೆರವಿಗೆ ಶುಕ್ರವಾರದವರೆಗೆ ಗಡುವು..!

ತುಮಕೂರು: ಶುಕ್ರವಾರ ಏಕಾಏಕಿ ದಿಢೀರನೇ ಮಾರುಕಟ್ಟೆಗೆ ಎಪಿಎಂಸಿ ಅಧ್ಯಕ್ಷ ಉಮೇಶ್ ಗೌಡ ನೇತೃತ್ವದ ಅಧಿಕಾರಿಗಳು ಹಾಗೂ ಎಪಿಎಂಸಿ ಸದಸ್ಯರ ತಂಡ ಬೇಟಿ ನೀಡಿ ಅನದಿಕೃತ ಅಂಗಡಿ ಮಳಿಗೆಗಳಿಗೆ ಶಾಕ್ ನೀಡಿದ್ದಲ್ಲದೇ ಅನಧಿಕೃತ ಅಂಗಡಿ ಮಳಿಗೆಗಳು ಹಾಗೂ ಸ್ವಚ್ಚತೆ ಕಾಪಾಡದ ಅಂಗಡಿಗಳಿಗೆೆ ೧,೦೭,೫೦೦-೦೦ ದಂಡ ವಿಧಿಸಿದ್ದಾರೆ.

 

ಸ್ವಚ್ಚತೆ ಇಲ್ಲದವರಿಗೆ ದಂಡ: ಒತ್ತುವರಿಯವರಿಗೂ ದಂಡ:

ಅoಗಡಿ ಮಳಿಗೆಗಳ ಮುಂದೆ ಕಸಕಡ್ಡಿ, ತ್ಯಾಜ್ಯ ಎಸೆದು ಸರಿಯಾಗಿ ಬಳಕೆ ಮಾಡದೆ, ರೋಗರುಜಿನಗಳು ಉದ್ಬವವಾಗುವಂತೆ ಸ್ವಚ್ಚತೆ ಕಾಪಾಡದ ಅಂಗಡಿಗಳನ್ನಾ, ಸ್ವತಃ ಕಾಲ್ನೆಡಿಗೆಯ ಮೂಲಕ ಸುತ್ತಿ ಹುಡುಕಿ ದಂಡ ವಿದಿಸಲಾಯಿತು. ಹಾಗೆಯೇ ಎಪಿಎಂಸಿ ನೀಡಿದ ಜಾಗ ಬಿಟ್ಟು ರಸ್ತೆ ತುಂಬಾ ತರಕಾರಿ ಸುರಿದು ವಾಹನಗಳಿಗೆ, ಸಾರ್ವಜನಿಕರಿಗೆ ತೊಂದರೆಯುAಟುಮಾಡುತ್ತಿದ್ದ ವರ್ತಕರಿಗೆ ಸ್ಥಳದಲ್ಲೇ ದಂಡ ವಿಧಿಸಲಾಗಿದೆ.

ಅನಧಿಕೃತ ಅಂಗಡಿಗಳಿಗೆ ಶುಕ್ರವಾರದವರೆಗೆ ಗಡುವು..!

ಅನದಿಕೃತವಾಗಿ ಸಿಕ್ಕಸಿಕ್ಕ ಜಾಗದಲ್ಲೇ ಶೆಡ್ ನಿರ್ಮಿಸಿಕೊಂಡು, ನೈಜ ವ್ಯಾಪಾರಸ್ಥರಿಗೆ ತೊಂದರೆಯುAಟು ಮಾಡುತ್ತಿದ್ದ ಅನಧಿಕೃತ ವ್ಯಾಪಾರಸ್ಥರಿಗೆ ಸ್ಥಳದಲ್ಲೇ ಚಳಿಬಿಡಿಸಿದ ಸಮಿತಿ, ಶುಕ್ರವಾರದೊಳಗೆ ಅನಧಿಕೃತ ಅಂಗಡಿಗಳನ್ನಾ ಮುಚ್ಚಲು ಡೆಡ್‌ಲೈನ್ ನೀಡಿದೆ.

ಮಾರುಕಟ್ಟೆ ಸಮಯ ಮೊದಲಿನಂತೆ.

ಯಾರೋ ಇಬ್ಬರು, ಮೂವರು ಮಾಡುವ ಅನೈತಿಕ ವ್ಯಾಪಾರದ ಪರಿಣಾಮವಾಗಿ ಇಂದು ಮಾರುಕಟ್ಟೆಯ ಸಮಯವನ್ನಾ ರೈತರಿಗೆ ಅನುಕೂಲವಾಗದೇ ಇರೋ ರೀತಿಯಲ್ಲಿ, ರೈತರಿಗಾಗೋ ಅನ್ಯಾಯ ಕೇಳಲು ಅಧಿಕಾರಿಗಳು ಬಾರದೇ ಇರುವ ಸಮಯದಲ್ಲಿ ಮಾಡಲಾಗಿದೆ. ಈ ಹಿಂದೆ ಮಾರುಕಟ್ಟೆ ಬೆಳಿಗ್ಗೆ ೫ರಿಂದ ರಾತ್ರಿಯವರೆಗೆ ನಡೆಯುತ್ತಿತ್ತು, ಕೋವಿಡ್ ಬಂದಾಗ ಸ್ವಲ್ಪ ಸಮಯ ಏರುಪೇರಾಗಿದ್ದು, ಅದನ್ನೇ ದುರ್ಬಳಕೆ ಮಾಡಿಕೊಳ್ಳುವ ವ್ಯಾಪಾರಿಗಳಿಗೆ, ಈಗ ಕೋವಿಡ್ ಕಡಿಮೆಯಾಗಿದೆ ಹಾಗಾಗಿ ರೈತರಿಗೆ ಅನುಕೂಲವಾಗುವ ರೀತಿಯಲ್ಲಿ ಮಾರುಕಟ್ಟೆ ಸಮಯ ಇರಬೇಕು ಹಾಗಾಗಿ ಸೋಮವಾರದಿಂದ ಬೆಳಿಗ್ಗೆ ೫ಗಂಟೆಯಿAದಲೇ ಮಾರುಕಟ್ಟೆ ತೆರೆಯಬೇಕು, ತಪ್ಪಿದ್ದಲ್ಲಿ ದಂಡ ವಿಧಿಸಲಾಗುವುದು ಎಂದು ಎಚ್ಚರಿಕೆ ಹಾಗೂ ಸೂಚನೆ ನೀಡಿದರು.

 

ಅನಧಿಕೃತ ವ್ಯಾಪಾರಸ್ಥರು ಸಮಿತಿಯ ದಾಳಿಗೆ ಬೆಚ್ಚಿ ಬಿದ್ದಿದ್ದಾರೆ. ಮಾರುಕಟ್ಟೆ ಸಮಯ ಬದಲಿಸಿದ್ದಕ್ಕೆ ರೈತರು ನಿಟ್ಟುಸಿರು ಬಿಟ್ಟಿದ್ದಾರೆ. ಈ ಸಂದರ್ಭದಲ್ಲಿ ಅಧ್ಯಕ್ಷ ಉಮೇಶ್‌ಗೌಡ, ಉಪಾದ್ಯಕ್ಷ ಶಿವರಾಜು, ಸದಸ್ಯರುಗಳಾದ ಹೊನ್ನೇಶ್ ಕುಮಾರ್, ಸುಭಾಷ್ ಚಂದ್ರಣ್ಣ, ನೀಲಕಂಠಯ್ಯ, ಲೋಕೇಶ್, ಪುಟ್ಟಲಕ್ಷಮ್ಮಮ್ಮ ಚಿಕ್ಕರಂಗಯ್ಯ, ಶಿವರಾಜು, ಹಾಗೂ ಎಲ್ಲಾ ಸದಸ್ಯರುಗಳು ಹಾಗೂ ಕಾರ್ಯದರ್ಶಿ ಎಂ.ವಿ.ಸುಮ, ಸಹಕಾರ್ಯದರ್ಶಿ ಲಕ್ಷ್ಮೀಕಾಂತಯ್ಯ, ಉಷಾ, ನಂದೀಶ್, ಶ್ರೀನಿವಾಸ್ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

You cannot copy content of this page

error: Content is protected !!
Exit mobile version