ಈ ಬಾರಿ ಕಾಂಗ್ರೆಸ್ ಸರ್ಕಾರ ರಚನೆ ; ಸಿ-ವೋಟರ್ ಸಮೀಕ್ಷೆ

ಈ ಬಾರಿ ಕಾಂಗ್ರೆಸ್ ಸರ್ಕಾರ ರಚನೆ ; ಸಿ-ವೋಟರ್ ಸಮೀಕ್ಷೆ

 

 

ಬೆಂಗಳೂರು : ಮೂರು ವರ್ಷದಲ್ಲಿ ಎರಡು ಮುಖ್ಯಮಂತ್ರಿಗಳನ್ನು ಕಂಡ ಬಿಜೆಪಿಗೆ ಮಣ್ಣು ಮುಕ್ಕಿಸಿ ಕಾಂಗ್ರೆಸ್ ಈ ಬಾರಿ ಅಧಿಕಾರದ ಗದ್ದುಗೆ ಏರಲಿದೆ ಎನ್ನುವ ಸಂಗತಿ ಟಿವಿ9 ಸಮೀಕ್ಷೆಯಿಂದ ಬಯಲಾಗಿದೆ.

 

 

 

 

ಸಿ-ವೋಟರ್ ನ ಜೊತೆಗೂಡಿ ಸಮೀಕ್ಷೆ ನಡೆಸಿರುವ ಟಿವಿ9 ಸಂಸ್ಥೆ 21,895 ಮತದಾರರನ್ನು ಸಂದರ್ಶಿಸಿ ಮತದಾರನ ಒಲವು ಬಿಜೆಪಿ ವಿರುದ್ಧವಾಗಿದೆ ಎಂಬ ಅಂಶವನ್ನು ಬಿಚ್ಚಿಟ್ಟಿದೆ.

 

 

 

 

ಕರಾವಳಿ ಭಾಗ, ಮಧ್ಯ ಕರ್ನಾಟಕ, ಸಮಗ್ರ ಬೆಂಗಳೂರು, ಕಿತ್ತೂರು ಕರ್ನಾಟಕ ಹಾಗೂ ಕಲ್ಯಾಣ ಕರ್ನಾಟಕದ ಕ್ಷೇತ್ರಗಳೆಲ್ಲವನ್ನು ಒಳಗೊಂಡು ಕಾಂಗ್ರೆಸ್ ಒಟ್ಟು 106 ರಿಂದ 116 ಸೀಟುಗಳನ್ನು ಗಳಿಸಲಿದ್ದು, ಬಿಜೆಪಿ 79 ಸ್ಥಾನದಿಂದ 89 ಸ್ಥಾನಕ್ಕೆ ತಂಡವೊಡೆಯಲಿದೆ. ರಾಜ್ಯದ ಸಮಗ್ರ ಅಭಿವೃದ್ಧಿಗಾಗಿ ಕಾಂಗ್ರೆಸ್ ಸ್ವತಂತ್ರ ಸರ್ಕಾರ ರಚನೆ ಮಾಡಲಿ ಎಂದು ಜನ ಬಯಸಿದ್ದಾರೆ ಎಂದಿದೆ.

 

 

 

 

 

ಮಧ್ಯ ಕರ್ನಾಟಕ

 

ಕಾಂಗ್ರೆಸ್ : 18-22

 

ಬಿಜೆಪಿ : 13-17

 

ಜೆಡಿಎಸ್ : 0-1

 

ಇತರೆ : 0-1

 

_____________

 

ಕಿತ್ತೂರು ಕರ್ನಾಟಕ

 

ಕಾಂಗ್ರೆಸ್ : 25-29

 

ಬಿಜೆಪಿ : 21-25

 

ಜೆಡಿಎಸ್ : 0-1

 

ಇತರೆ : 0-1_____________

 

ಕರಾವಳಿ ಕರ್ನಾಟಕ

 

ಕಾಂಗ್ರೆಸ್ : 1-5

 

ಬಿಜೆಪಿ : 16-20

 

ಜೆಡಿಎಸ್ : 0-0

 

ಇತರೆ : 0-1

 

___________

 

ಕಲ್ಯಾಣ ಕರ್ನಾಟಕ

 

ಕಾಂಗ್ರೆಸ್ : 16-20

 

ಬಿಜೆಪಿ : 11-15

 

ಜೆಡಿಎಸ್ : 0-1

 

ಇತರೆ : 0-1

 

_____________

 

ಹಳೇ ಮೈಸೂರು

 

ಕಾಂಗ್ರೆಸ್ : 21-24

 

ಬಿಜೆಪಿ‌: 4-8

 

ಜೆಡಿಎಸ್ : 24-28

 

ಇತರೆ : 0-1

 

________________

 

ಕಾಂಗ್ರೆಸ್ : 18-20

 

ಬಿಜೆಪಿ : 7-11

 

ಜೆಡಿಎಸ್ : 1-5

 

ಇತರೆ : 0-1

 

______________

 

ಬಿ.ಎಸ್.ಯಡಿಯೂಪ್ಪ ಅವರಿಗೆ ಕಣ್ಣೀರಾಕಿಸಿ ರಾಜೀನಾಮೆ ಕಸಿದು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿದ ಬಿಜೆಪಿ ವಿರುದ್ಧ ಸ್ವತಃ ಯಡಿಯೂರಪ್ಪನವರಿಗೇ ನೋವಿದೆ. ಇತ್ತೀಚೆಗೆ ಸಿಟಿ ರವಿ ಅವರ ಹೇಳಿಕೆ ಎನ್ನಲಾಗಿದ್ದ “ಲಿಂಗಾಯತರ ಓಟು ನಮಗೆ ಬೇಕಿಲ್ಲ” ಎನ್ನುವ ವಿವಾದ ಹಾಗೂ ಲಿಂಗಾಯತ ಮುಖ್ಯಮಂತ್ರಿ ವಿಚಾರವನ್ನು ತಿರಸ್ಕರಿಸಿದ್ದ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ನಡೆ ಲಿಂಗಾಯತ ಸಮುದಾಯದ ಆಕ್ರೋಶಕ್ಕೆ ಗುರಿಯಾಗಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.

 

 

 

 

ಲಕ್ಷ್ಮಣ ಸವದಿ ಹಾಗೂ ಜಗದೀಶ್ ಶೆಟ್ಟರ್ ಅವರಿಗೆ ಬಿಜೆಪಿಯಿಂದ ಟಿಕೆಟ್ ನಿರಾಕರಣೆ ಮಾಡಿದ್ದು, ಬಿಜೆಪಿಗೆ ಇದು ಹೊಡೆತ ಬೀಳಲಿದೆ. ಜಗದೀಶ್ ಶೆಟ್ಟರ್ ಅವರೇ ಹೇಳಿರುವಂತೆ ತನ್ನನ್ನು ಕಡೆಗಣಿಸಿದರೆ 25-30 ಸ್ಥಾನ ಬಿಜೆಪಿಗೆ ನಷ್ಟವಾಗಲಿದೆ ಎಂದಿದ್ದರು. ಕೊನೆಯ ಚುನಾವಣೆ ಹಾಗೂ ಚುನಾವಣಾ ನಿವೃತ್ತಿ ಸಮಯದಲ್ಲಿ ನಾಯಕರನ್ನು ಗೌರವದಿಂದ ನಡೆಸಿಕೊಳ್ಳದೇ ಇರುವುದೂ ಇದಕ್ಕೆ ಮೂಲ ಕಾರಣವಾಗಬಹುದು.

 

 

 

 

 

ಇತ್ತೀಚೆಗೆ ಸಚಿವ ವಿ.ಸೋಮಣ್ಣ ಬಿಜೆಪಿ ವಿರುದ್ಧವೇ ಬಂಡೆದ್ದು, ತನ್ನ ಮನಗ ಅರುಣ್ ಸೋಮಣ್ಣನಿಗೂ ಟಿಕೇಟ್ ನೀಡಬೇಕು ಎಂದು ಪಟ್ಟು ಹಿಡಿದು ಕಾಂಗ್ರೆಸ್ ಸೇರುವ ಸುಳಿವು ನೀಡಿದ್ದರು. ಸೋಮಣ್ಣ ಗೋವಿಂದರಾಜ ನಗರ ಅಲ್ಲದೆ ಇತರ ಕ್ಷೇತ್ರಗಳಲ್ಲೂ ತನ್ನದೇ ಆದ ಪ್ರಭಾವ ಹೊಂದಿದ್ದಾರೆ. ಸೋಮಣ್ಣ ಬ್ಲಾಕ್ ಮೇಲ್ ಮಾಡುತ್ತಿದ್ದಾರೆ ಎಂದು ಪರಿಭಾವಿಸಿರುವ ಬಿಜೆಪಿ ಹೈಕಮಾಂಡ್ ಸೋಮಣ್ಣರನ್ನು ಮಟ್ಟಹಾಕಿ ಅವರ ಹಿಡಿತದಿಂದ ಬಿಡಿಸಿಕೊಳ್ಳಲು ಸಿದ್ದರಾಮಯ್ಯರ ವಿರುದ್ಧ ವರುಣಾದಲ್ಲಿ ತಂದು ನಿಲ್ಲಿಸಿದ್ದಾರೆ. ಜೊತೆಗೆ ಚಾಮರಾಜನಗರದಲ್ಲೂ ಸ್ಪರ್ಧಿಸುವ ಅವಕಾಶ ನೀಡಿ ಎತ್ತಕಡೆಯೂ ಸಮರ್ಪಕವಾಗಿ ಪ್ರಚಾರ ನಡೆಸದೆ ಪರಾಭವಗೊಳಿಸಲು ಹೈಕಮಾಂಡ್ ತಂತ್ರ ಊಡಿ, ಅವರ ರಾಜಕೀಯ ಭವಿಷ್ಯಕ್ಕೆ ಅಂತ್ಯ ಹಾಡಲು ಮುನ್ನುಡಿ ಬರೆದಿದೆ.

 

 

 

 

 

ಯಡಿಯೂರಪ್ಪ, ಜಗದೀಶ್ ಶೆಟ್ಟರ್ ಮತ್ತು ಸವದಿ ಹೀಗೆ ಒಂದು ಸಮುದಾಯದ ಪ್ರಬಲ ನಾಯಕರನ್ನು ಪರಸ್ಪರ ಕಚ್ಚಾಡಲು ಬಿಟ್ಟು ಅವರ ರಾಜಕೀಯವನ್ನು ಅವರೇ ಅಂತಿಮಗೊಳಿಸುವ ತಂತ್ರ ರಹಸ್ಯವಾಗಿ ಉಳಿದಿಲ್ಲ. ಜೊತೆಗೆ ಬಿಜೆಪಿ ಪಕ್ಷ ಅಧಿಕಾರದಲ್ಲಿದ್ದಾಗಲೇ ಯಡಿಯೂರಪ್ಪ ಜೈಲಿಗೆ ಹೋಗುವಂತಾಗಿದ್ದು, ರಾಜ್ಯದ ಜನ ಮರೆತಿಲ್ಲ. ಇಂತಹ ಹತ್ತು ಹಲವು ಕಾರಣಗಳಿಗಾಗಿ ಬಿಜೆಪಿ ಕರ್ನಾಟಕದಲ್ಲಿ ಅಧಿಕಾರ ಹಿಡಿಯುವ ಅವಕಾಶವನ್ನು ಸ್ವತಃ ಹಾಳು ಮಾಡಿಕೊಂಡಿದೆ.

 

ಉರಿಗೌಡ ಮತ್ತು ನಂಜೇಗೌಡರು ಟಿಪ್ಪುವನ್ನು ಕೊಂಡದರು ಎಂದು ಬಿಂಬಿಸಲು ಹೋಗಿ ಪರೋಕ್ಷವಾಗಿ ಒಕ್ಕಲಿಗರು ರಾಜದ್ರೋಹಿಗಳು ಎಂಬ ಪಟ್ಟ ಕಟ್ಟಲು ನಡೆಸಿದ ಕುತಂತ್ರ ಬಿಜೆಪಿಗೆ ಮುಳುವಾಗಿದೆ.

 

 

 

 

 

ಹಿಜಾಬ್ ವಿವಾದ, 40% ಭ್ರಷ್ಟಾಚಾರ, ಮಠಗಳಿಂದಲೇ 30%ಕಮಿಷನ್ ತೆಗೆದುಕೊಂಡ ಆರೋಪ, ಪಿಎಸ್ಸೈ ಹಗರಣ, ಅತಿಥಿ ಉಪನ್ಯಾಸಕರ ಅಕ್ರಮ ನೇಮಕಾತಿ, ಮಾಡಾಳ್ ವಿರೂಪಾಕ್ಷಪ್ಪ ಮತ್ತು ಅವರ ಮಗ ಲೋಕಾಯುಕ್ತ ಬಲೆಗೆ, ಸ್ಯಾಂಟ್ರೋ ರವಿ ಪ್ರಕರಣ, ಮುಸ್ಲಿಂ ಮೀಸಲಾತಿ ರದ್ದು, ಪಠ್ಯ ಪುಸ್ತಕ ವಿವಾದ, ಕೋವಿಡ್ ಸಂದರ್ಭದಲ್ಲಿ ಮೂರು ಸಾವಿರ ಕೋಟಿ ಭ್ರಷ್ಟಾಚಾರದ ಆರೋಪ, ಆಕ್ಸಿಜನ್ ಸಿಗದೆ ಚಾಮರಾಜನಗರದಲ್ಲಿ 27 ಜನರ ದುರ್ಮರಣ, ಉಚಿತವಾಗಿ ನೀಡಬೇಕಿದ್ದ ಕೋವಿಡ್ ಲಸಿಕೆ ನೀಡುವಂತೆ ಸುಪ್ರೀಂ ಕೋರ್ಟ್ ತರಾಟೆ, ರಾಜ್ಯಕ್ಕೆ ಬರಬೇಕಾದ ಜಿಎಸ್ಟಿ ಪಾಲು ಕೊಡದೆ ಅನ್ಯಾಯ, ಬಡಜನರ ಅಕ್ಕಿ ಕಡಿತ, ರಸಗೊಬ್ಬರದ ಬೆಲೆ ಏರಿಕೆ, ನಂದಿನಿ ಮತ್ತು ಅಮೂಲ್ ವಿಲೀನ ವಿವಾದ, ಕನ್ನಡ ಗಡಿ ತಂಡೆ, ನಿರುದ್ಯೋಗ, ಪ್ರತಿಯೊಬ್ಬರ ಅಕೌಂಟಿಗೆ ಹದಿನೈದು ಲಕ್ಷ, ಚಿನ್ನದ ರಸ್ತೆ, ಗ್ಯಾಸ್ ಮತ್ತು ಪೆಟ್ರೋಲ್ ಬೆಲೆ ಗಗನಕ್ಕೆ ಏರಿರುವ ಬಗ್ಗೆ ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದು, ದಾಬಸ್ ಪೇಟೆಯಲ್ಲಿ ನಿರೀಕ್ಷಿತ ಜನರು ಇಲ್ಲದ ಕಾರಣ ಸಿಎಂ ರ್ಯಾಲಿ ಮೊಟಕುಗೊಳಿಸಿದ್ದು, ತುಮಕೂರಿನಲ್ಲಿ ನಡೆದ ಫಲಾನುಭವಿಗಳ ಸಮಾವೇಶದಲ್ಲಿ ಜನರು ಗೇಟ್ ತಳ್ಳಿಕೊಂಡು ಹೊರ ನಡೆದ ದೃಶ್ಯಗಳು, ಬಿಜೆಪಿ ಸಮಾವೇಶಗಳಲ್ಲಿ ಖಾಲಿ ಕುರ್ಚಿ ಮತ್ತು ಹಣಕ್ಕಾಗಿ ಹೊಡೆದಾಟ ಆದ ಘಟನೆಗಳು ಇವಕ್ಕೆ ಸಾಕ್ಷಿಯಾದಂತಿದೆ.

Leave a Reply

Your email address will not be published. Required fields are marked *

You cannot copy content of this page

error: Content is protected !!
Exit mobile version