ತುಮಕೂರು ನಗರ ಬಿಜೆಪಿ ಅಭ್ಯರ್ಥಿಯಾಗಿ ಹಾಲಿ ಶಾಸಕ ಜ್ಯೋತಿ ಗಣೇಶ್ ಹೆಸರು ಘೋಷಣೆ.

ತುಮಕೂರು ನಗರ ಬಿಜೆಪಿ ಅಭ್ಯರ್ಥಿಯಾಗಿ ಹಾಲಿ ಶಾಸಕ ಜ್ಯೋತಿ ಗಣೇಶ್ ಹೆಸರು ಘೋಷಣೆ.

 

 

 

ತುಮಕೂರು – ತೀವ್ರ ಕುತೂಹಲ ಕೆರಳಿಸಿದ ಬಿಜೆಪಿಯ ಮೊದಲ ಅಭ್ಯರ್ಥಿಗಳ ಪಟ್ಟಿ ಘೋಷಣೆಯಾಗಿದ್ದು ಮೊದಲ ಪಟ್ಟಿಯಲ್ಲಿ ಅಭ್ಯರ್ಥಿಗಳ 189 ಅಭ್ಯರ್ಥಿಗಳ ಹೆಸರನ್ನ ಘೋಷಿಸುವ ಮೂಲಕ ಚುನಾವಣಾ ಅಖಾಡಕ್ಕೆ ಬಿಜೆಪಿ ಸಿದ್ಧವಾಗಿದೆ.

 

 

 

ತೀರಾ ಕುತೂಹಲ ಕೆರಳಿಸಿದ ತುಮಕೂರು ನಗರ ವಿಧಾನಸಭಾ ಕ್ಷೇತ್ರಕ್ಕೆ ಹಾಲಿ ಶಾಸಕ ಜ್ಯೋತಿ ಗಣೇಶ್ ಹೆಸರು ಘೋಷಣೆ ಮಾಡುವ ಮೂಲಕ ಅಧಿಕೃತ ಬಿಜೆಪಿ ಪಕ್ಷದ ಅಭ್ಯರ್ಥಿಯಾಗಿ ಕಣಕ್ಕೆ ಇಳಿಸಿದೆ.

 

 

 

ಮಾಜಿ ಸಚಿವ ಸೊಗಡು ಶಿವಣ್ಣ ಹಾಗೂ ಜ್ಯೋತಿ ಗಣೇಶ್ ನಡುವೆ ಟಿಕೆಟ್ ಗಾಗಿ ತೀವ್ರ ಪೈಪೋಟಿ ನಡೆಸಿದ್ದರು .

 

 

 

 

ಇನ್ನು ಕೊನೆ ಕ್ಷಣದಲ್ಲಿ ಬಿಜೆಪಿಯ ಆಂತರಿಕ ಸಮೀಕ್ಷಾ ವರದಿ ಅನ್ವಯ ಅಭ್ಯರ್ಥಿಯಾಗಿ ಹಾಲಿ ಶಾಸಕ ಜ್ಯೋತಿ ಗಣೇಶ್ ಹೆಸರು ಘೋಷಣೆ ಮಾಡುವ ಮೂಲಕ ಬಿಜೆಪಿ ಪಕ್ಷ ತೆರೆ ಎಳೆದಿದೆ.

 

 

ತುಮಕೂರು ನಗರ -ಜ್ಯೋತಿ ಗಣೇಶ್

 

ತಿಪಟೂರು -ಬಿಸಿ ನಾಗೇಶ್

 

 

ತುರುವೇಕೆರೆ -ಮಸಾಲಾ ಜಯರಾಮ್

 

 

ಕೊರಟಗೆರೆ  -ಬಿ.ಎಚ್ ಅನಿಲ್ ಕುಮಾರ್

 

ಕುಣಿಗಲ್- ಡಿ ಕೃಷ್ಣಕುಮಾರ್

 

 

ಚಿಕ್ಕನಾಯಕನಹಳ್ಳಿ- ಜೆಸಿ ಮಾಧುಸ್ವಾಮಿ.

 

ತುಮಕೂರು ಗ್ರಾಮಾಂತರ -ಬಿ ಸುರೇಶ್ ಗೌಡ

 

ಮಧುಗಿರಿ- ಎಲ್ ಸಿ ನಾಗರಾಜ್.

 

ಸಿರಾ- ಡಾಕ್ಟರ್ ಸಿ ಎಂ ರಾಜೇಶ್ ಗೌಡ

 

ಪಾವಗಡ-  ಕೃಷ್ಣ ನಾಯಕ್.

 

 

ಇನ್ನು ಗುಬ್ಬಿ ವಿಧಾನಸಭಾ ಕ್ಷೇತ್ರಕ್ಕೆ ಯಾವುದೇ ಅಭ್ಯರ್ಥಿಗಳನ್ನ ಘೋಷಣೆ ಮಾಡದೆ ತಡೆಹಿಡಿಯಲಾಗಿದ್ದು ಯಾರ ಹೆಸರನ್ನ ಕೊನೆ ಕ್ಷಣದಲ್ಲಿ ಘೋಷಿಸಲಾಗುತ್ತೆ ಎನ್ನುವುದನ್ನು ಕಾದು ನೋಡಬೇಕಿದೆ

 

 

ಕನಕಪುರ -ಆರ್ ಅಶೋಕ್.

 

 

ವರುಣ – ವಿ ಸೋಮಣ್ಣ

ಇನ್ನು ವಿ ಸೋಮಣ್ಣ ಅವರನ್ನು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ವಿರುದ್ಧ ಕಣಕ್ಕೆ ಇಳಿಸಲು ಬಿಜೆಪಿ ಹೈಕಮಾಂಡ್ ನಿರ್ಧರಿಸಿದೆ.

 

 

ಇನ್ನು ಮಾಜಿ ಸಚಿವ ವಿ ಸೋಮಣ್ಣ ರವರಿಗೆ ಚಾಮರಾಜನಗರ ಹಾಗೂ ವರುಣ ಎರಡು ಕ್ಷೇತ್ರದಲ್ಲಿ ಟಿಕೆಟ್ ನೀಡುವ ಮೂಲಕ ವಿ ಸೋಮಣ್ಣ ರವರಿಗೆ ಬಂಪರ್ ಪರೀಕ್ಷೆಗೆ ಅನುವು  ಮಾಡಿಕೊಟ್ಟಿದ್ದಾರೆ.

 

 

ಡಿಕೆ ಶಿವಕುಮಾರ್ ವಿರುದ್ಧ ಆರ್ ಅಶೋಕ್ ರವರನ್ನು ನಿಲ್ಲಿಸುವ ಮೂಲಕ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ರವರ ವಿರುದ್ಧ ಘಟಾನುಘಟಿ ನಾಯಕರನ್ನು ನಿಲ್ಲಿಸುವ ಮೂಲಕ ಡಿಕೆ ಶಿವಕುಮಾರ್ ಹಾಗೂ ಸಿದ್ದರಾಮಯ್ಯನವರ ವಿರುದ್ಧ ತೊಡೆತೊಟ್ಟಲು ಬಿಜೆಪಿ ಹೈಕಮಾಂಡ್ ಮುಂದಾಗಿದೆ.

 

 

 

 

 

 

ವರದಿ ಮಾರುತಿ ಪ್ರಸಾದ್ ತುಮಕೂರು

Leave a Reply

Your email address will not be published. Required fields are marked *

You cannot copy content of this page

error: Content is protected !!
Exit mobile version