ಕ್ರಿಸ್ಮಸ್ ಹಬ್ಬದಂದೇ ಹರಿದ ನೆತ್ತರು ಯುವಕನ ಕೊಲೆ ತುಮಕೂರಿನಲ್ಲಿ ಘಟನೆ.

ಕ್ರಿಸ್ಮಸ್ ಹಬ್ಬದಂದೇ ಹರಿದ ನೆತ್ತರು ಯುವಕನ ಕೊಲೆ ತುಮಕೂರಿನಲ್ಲಿ ಘಟನೆ.

 

2

 

ತುಮಕೂರು – ಹಬ್ಬದ ಸಂಭ್ರಮದಲ್ಲಿದ್ದ ಯುವಕರ ನಡುವೆ ಕ್ಷುಲ್ಲಕ ಕಾರಣಕ್ಕೆ ನಡೆದ ಜಗಳದಲ್ಲೀ ಯುವಕನೊಬ್ಬನ ಕೊಲೆ ಮಾಡಿರುವ ಘಟನೆ ವರದಿಯಾಗಿದೆ.

 

 

 

 

ತುಮಕೂರು ತಾಲೂಕಿನ ಗ್ರಾಮಾಂತರ ವ್ಯಾಪ್ತಿಯ ಬೆತ್ತಲೂರು ಗ್ರಾಮದಲ್ಲಿ ಘಟನೆ ನಡೆದಿದ್ದು ಕೊಲೆಯಲ್ಲಿ ಮೃತಪಟ್ಟ ಯುವಕನನ್ನ ನಿರಂಜನ್ (30) ಎಂದು ಗುರುತಿಸಲಾಗಿದೆ.

 

 

 

ಇನ್ನು ಯುವಕರ ನಡುವೆ ನಡೆದ ಗಲಾಟೆ ವೇಳೆ ಮೃತಪಟ್ಟ ನಿರಂಜನ್ಗೆ ಕೆಲವರು ಡ್ರ್ಯಾಗರ್ನಿಂದ ಚುಚ್ಚಿದ್ದಾರೆ ಎನ್ನಲಾಗಿದೆ ಅದರ ಹಿನ್ನೆಲೆಯಲ್ಲಿ ತೀವ್ರವಾಗಿ ಗಾಯಗೊಂಡ ನಿರಂಜನ್ ನನ್ನು ತುಮಕೂರು ಜಿಲ್ಲಾ ಆಸ್ಪತ್ರೆಗೆ ರವಾನಿಸಲಾಯಿತು ಎನ್ನಲಾಗಿದೆ ಆದರೆ ಆಸ್ಪತ್ರೆಗೆ ತೆರಳುವ ಮಾರ್ಗ ಮಧ್ಯೆ ಮೃತಪಟ್ಟ ನಿರಂಜನ್.

 

 

 

 

ಘಟನೆ ನಡೆದ ಕೂಡಲೇ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ತನಿಖೆ ಕೈಗೊಂಡಿದ್ದಾರೆ ಇನ್ನು ತುಮಕೂರು ಜಿಲ್ಲಾ ಆಸ್ಪತ್ರೆಗೆ ಭೇಟಿ ನೀಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಶೋಕ್ ಕೆ ವಿ ರವರು ಅಧಿಕಾರಿಗಳಿಂದ ಮಾಹಿತಿ ಪಡೆದಿದ್ದಾರೆ.

 

 

 

ಘಟನೆಗೆ ನಿಖರ ಕಾರಣ ತಿಳಿದು ಬಂದಿಲ್ಲ ಇನ್ನು ಪೊಲೀಸರು ಎಲ್ಲಾ ಆಯಾಮದಲ್ಲೂ ತನಿಖೆ ಕೈಗೊಂಡಿದ್ದು ಕೊಲೆ ಮಾಡಿರುವ ಆರೋಪಿಗಳಿಗಾಗಿ ಶೋಧ ಮುಂದುವರಿಸಿದ್ದಾರೆ.

 

 

 

ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದ್ದು ಪೊಲೀಸರು ತನಿಖೆ ಕೈಗೊಂಡಿದ್ದಾರೆ

Leave a Reply

Your email address will not be published. Required fields are marked *

You cannot copy content of this page

error: Content is protected !!
Exit mobile version