ಸರ್ಕಾರಿ ಶಾಲೆ ಶಿಕ್ಷಕನಿಂದ ಹೇಯಕೃತ್ಯ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಆರೋಪ , ಎಫ್.ಐ.ಅರ್ ದಾಖಲು.

ಸರ್ಕಾರಿ ಶಾಲೆ ಶಿಕ್ಷಕನಿಂದ ಹೇಯಕೃತ್ಯ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಆರೋಪ , ಎಫ್.ಐ.ಅರ್ ದಾಖಲು.

 

 

ತುಮಕೂರು – ಸರ್ಕಾರಿ ಶಾಲೆ ವಿದ್ಯಾರ್ಥಿಗಳ ಪಾಲಿಗೆ ಅತ್ಯಮುಲ್ಯ ಸ್ಥಳ ಆ ಮೂಲಕ ವಿದ್ಯಾರ್ಥಿಗಳ ಭವಿಷ್ಯ ರೂಪಿಸಿಕೊಳ್ಳುವ ಗರಡಿ ಮನೆ ಆದರೆ ಶಾಲೆಯಲ್ಲಿ ಪಾಠ ಮಾಡಬೇಕಾದ ಶಿಕ್ಷಕನೊಬ್ಬ ಇಲ್ಲಿ ವಿದ್ಯಾರ್ಥಿನಿಯೊಬ್ಬಳ ಮೇಲೆ ಶಿಕ್ಷಕ ಅತ್ಯಾಚಾರ ನಡೆಸಿದ ಆರೋಪ ಕೇಳಿ ಬಂದಿದೆ.

 

 

 

ತುಮಕೂರು ಜಿಲ್ಲೆ ಚಿಕ್ಕನಾಯಕನ ಹಳ್ಳಿಯ ಕಂದಿಕೆರೆ ಹೋಬಳಿಯ ಬೆಳ್ಳಾರ ಸರ್ಕಾರಿ ಪ್ರೌಢಶಾಲೆಯ ಶಿಕ್ಷಕನೇ ಈಗ ಅತ್ಯಾಚಾರ ಆರೋಪ ಹೊತ್ತಿರುವ ಶಿಕ್ಷಕನಾಗಿದ್ದು ಮೂಲತಹ ಕೊಪ್ಪಳ ಮೂಲದ ಶಿಕ್ಷಕ ದುರ್ಗಪ್ಪ ಬೆಳ್ಳಾರ ಸರ್ಕಾರಿ ಶಾಲೆಯಲ್ಲಿ ದೈಹಿಕ ಶಿಕ್ಷಕನಾಗಿ ಕರ್ತವ್ಯ ನಿರ್ವಹಿಸುತ್ತಿದ್ದು ಆದೇ ಶಾಲೆಯಲ್ಲಿ ಓದುತ್ತಿದ್ದ ಹತ್ತನೇ ತರಗತಿ ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರ ಆರೋಪ ಮಾಡಿರುವ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ನೊಂದ ಸಂತ್ರಸ್ತ ಯುವತಿಯ ತಾಯಿ ನೀಡಿದ ದೂರಿನ ಮೇರೆಗೆ ಎಫ್ಐಆರ್ ದಾಖಲಾಗಿದ್ದು.

 

 

ಸೆಪ್ಟಂಬರ್ ತಿಂಗಳ 19ರಂದು ಮನೆಯಲ್ಲಿದ್ದ ವಿದ್ಯಾರ್ಥಿನಿಯನ್ನ ಪೋಷಕರಿಗೆ ಗೊತ್ತಿಲ್ಲದೆ ರಾತ್ರಿ ಕರೆದು ಕೊಂಡು ಹೋಗಿ ಅತ್ಯಾಚಾರ ಮಾಡಿ ಪುನಃ ವಿದ್ಯಾರ್ಥಿನಿಯನ್ನ ನಡುರಾತ್ರಿ ಕರೆದುಕೊಂಡು ಬಂದು ಮನೆಗೆ ಬಿಟ್ಟು ಶಿಕ್ಷಕ ಪರಾರಿಯಾಗಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

 

 

 

 

ಆರೋಪ ಹೊತ್ತಿರುವ ಶಿಕ್ಷಕ ದುರ್ಗಪ್ಪ ಪರಾರಿಯಾಗಿದ್ದಾನೆ ಎನ್ನಲಾಗದ್ದು ಪರಾರಿ ಆಗಿರುವ ಶಿಕ್ಷಕನಿಗೆ ಪೊಲೀಸರು ಬಲೆ ಬೀಸಿದ್ದಾರೆ.

 

 

ಹುಳಿಯಾರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ಪೋಸ್ಕೊ ಕಾಯ್ದೆ ಅಡಿ ಎಫ್ಐಆರ್ ದಾಖಲಾಗಿದೆ.

 

 

 

ಅದೇನೇ ಇರಲಿ ವಿದ್ಯಾರ್ಥಿಗಳಿಗೆ ಶಿಕ್ಷಣ ಹೇಳಿಕೊಡುವ ಶಿಕ್ಷಕರನ್ನ ದೇವರ ಸ್ಥಾನದಲ್ಲಿಟ್ಟು ಆರಾಧಿಸಲಾಗುತ್ತದೆ ಆದರೆ ಇಂತಹ ಶಿಕ್ಷಕನಿಂದ ಇಡೀ ಶಿಕ್ಷಣ ಸಮೂಹವೆ ತಲೆತಗ್ಗಿಸುವಂತಹ ಕೃತ್ಯ ನಡೆಸಿರುವ ಶಿಕ್ಷಕನ ವಿರುದ್ಧ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ.

Leave a Reply

Your email address will not be published. Required fields are marked *

You cannot copy content of this page

error: Content is protected !!
Exit mobile version