ಮೇ 2 ರಂದು ಹನೂರಿಗೆ ಅಮಿತ್ ಶಾ ಆಗಮನ
ಹನೂರು: ದೇಶದ ಗೃಹ ಮಂತ್ರಿ ರಾಜಕೀಯ ಚಾಣಕ್ಯ ಅಮಿತ್ ಷಾ ಅವರು ಪ್ರೀತನ್ ನಾಗಪ್ಪ ಪರ ಚುನಾವಣ ಪ್ರಚಾರಕ್ಕೆ ಮೇ.2 ರಂದು ಹನೂರಿಗೆ ಬೇಟಿ ನೀಡಲಿದ್ದು ಪಕ್ಷದ ಕಾರ್ಯಕರ್ತರು ಮುಖಂಡರುಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕೆಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ತಿಳಿಸಿದರು.
ಪಟ್ಟಣದ ಬಿಜಿಪಿ ಕಛೇರಿಯಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.
ಅಮಿತ್ ಷಾ ಅವರ ಅಣತಿಯಂತೆ ಸಾರ್ವಜನಿಕರ ಬೃಹತ್ ಸಮಾವೇಶವನ್ನು ಆಯೋಜಿಸಲಾಗಿದ್ದು ಸಾರ್ವಜನಿಕರನ್ನುದ್ದೇಶಿಸಿ ಮಾತನಾಡಲಿದ್ದಾರೆ.
ಇವರ ಜೊತೆಗೆ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಇನ್ನಿತರೆ ನಾಯಕರುಗಳು ಆಗಮಿಸಲಿದ್ದಾರೆ. ಹನೂರಿನಲ್ಲಿ ಕಮಲ ಅರಳಿಸಲೇಬೇಕು ಎಂಬ ದೃಷ್ಟಿಯಲ್ಲಿ ಬಿಜೆಪಿ ವಿಜಯ ಸಂಕಲ್ಪ ಯಾತ್ರೆಗೆ ರಾಜ್ಯದ ಹನೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಧಾರ್ಮಿಕ ಪುಣ್ಯಸ್ಥಳ ಮಲೆಮಹದೇಶ್ವರ ಬೆಟ್ಟದಲ್ಲಿ ಬಿಜೆಪಿ ರಾಷ್ಟ್ರಿಯ ಅಧ್ಯಕ್ಷ ಜೆ.ಪಿ.ನಡ್ಡಾ ಚಾಲನೆ ನೀಡಿದ್ದಾರೆ. ಕಳೆದ 15 ವರ್ಷಗಳಿಂದಲೂ
ಹನೂರು ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಬಾವುಟ ಹಾರಿಸಲು ಪ್ರಯತ್ನಿಸಲಾಗುತ್ತಿದೆ. ಆದರೆ ಪಕ್ಷದೊಳಗಿನ ಆಂತರಿಕ ಭಿನ್ನಾಭಿಪ್ರಾಯ, ಪಕ್ಷ ವಿರೋಧಿ ಚಟುವಟಿಕೆಗಳು ಹಾಗೂ ಪಕ್ಷದಲ್ಲಿದ್ದು ಚುನಾವಣೆ ಕೊನೆ ಹಂತದಲ್ಲಿ ಪಕ್ಷ ಬಿಟ್ಟು ಹೋಗಿರುವುದರಿಂದ ಪ್ರಮಾದ ಆಗಿದೆ. ಎಲ್ಲಾ ಕ್ಷೇತ್ರಗಳು ಅಭಿವೃದ್ಧಿಯಾಗಿವೆ ಆದರೆ ಹನೂರು ವಿಧಾನಸಭಾ ಕ್ಷೇತ್ರ ಅಭಿವೃದ್ಧಿಯಾಗಿಲ್ಲ. ಆದರೆ
ಈ ಬಾರಿ ಜನತೆ ಬಿಜೆಪಿಯನ್ನು ಅಧಿಕಾರಕ್ಕೆ ತರಬೇಕೆಂಬುದನ್ನು ಜನ ನಿರ್ಧರಿಸಿದ್ದಾರೆ. ಆ ಮೂಲಕ ಕ್ಷೇತ್ರದ ಅಭಿವೃದ್ಧಿಯನ್ನು ಉತ್ತಮಪಡಿಸಬೇಕಾಗಿದೆ. ರಾಜ್ಯದಲ್ಲಿ ಬಿಜೆಪಿ 120 ರಿಂದ 130 ಸೀಟು ತೆಗೆದುಕೊಂಡು ಅಧಿಕಾರಿಗೆ ಬರುತ್ತದೆ. ಈ ಹಿನ್ನಲೆಯಲ್ಲಿ ಡಾ.ಪ್ರೀತನ್ ನಾಗಪ್ಪನವರನ್ನುವಿಜಯಶಾಲಿಯನ್ನಾಗಿ ಮಾಡಿ ಎಂದು ಮನವಿ ಮಾಡಿದರು.
ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಡಾ. ದತ್ತೇಶ್ ಕುಮಾರ್ ಮಾತನಾಡಿ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಒಂದು ಪಕ್ಷದಿಂದ ಟಿಕೆಟ್ ಆಕಾಂಕ್ಷಿಗಳಾಗಿರುವುದು ತಪ್ಪಲ್ಲ. ಟಿಕೆಟ್ ಯಾರಿಗೆ ಸಿಗುತ್ತದೆ ಅವರ ಪರವಾಗಿ ಶ್ರಮಿಸುವುದು ಧರ್ಮ. ಪ್ರಧಾನಿ ನರೇಂದ್ರ ಮೋದಿ ವಿಶ್ವದ ನಾಯಕರಾಗಿದ್ದು ಅವರ ಕೈಬಲಪಡಿಸುವ ನಿಟ್ಟಿನಲ್ಲಿ ಎಲ್ಲರೂ ಮುಂದಾಗಬೇಕು ಎಂದರು.
ಬಿಜೆಪಿ ಒಬಿಸಿ ರಾಜ್ಯ ಕಾರ್ಯಕಾರಿಣಿ ಜನಧ್ವನಿ ಬಿ. ವೆಂಕಟೇಶ್ ಮಾತನಾಡ, ಅಂದು ಇರುವುದು ಬಿಜೆಪಿಯಲ್ಲಿ ಇಂದು ಇರುವುದು ಬಿಜೆಪಿಯಲ್ಲಿ ಮುಂದೆಯೂ ಬಿಜೆಪಿಯಲ್ಲಿ ಇರಲಿದ್ದೇನೆ. ನಮ್ಮ ಗುರಿ ಒಂದೇ ಹನೂರಿನಲ್ಲಿ ಬಿಜೆಪಿ ಗೆಲ್ಲಿಸುವುದೇ ಆಗಿದೆ ಎಂದರು.
ಬಿಜೆಪಿ ಅಭ್ಯರ್ಥಿ ಡಾ. ಪ್ರೀತನ್ ನಾಗಪ್ಪ ಮಾತನಾಡಿ, ಹನೂರು ಕ್ಷೇತ್ರ ಅಭಿವೃದ್ದಿಯಲ್ಲಿ ಹಿಂದುಳಿದಿರುವುದರಿಂದ ಬಿಜೆಪಿ ಗೆ ಮತ ನೀಡಿ ಅಭಿವೃದ್ಧಿಪಡಿಸಬೇಕಾಗಿದೆ. ಬಿಜೆಪಿ ಸರ್ಕಾರದ ಸಾಧನೆಗಳು ಶ್ರೀರಕ್ಷೆ ಆಗಲಿದ್ದು ಈ ಬಾರಿ ಜನತೆ ನನ್ನನ್ನು ಆಶೀರ್ವದಿಸಲಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಚಾಮರಾಜನಗರ ಚುನಾವಣಾ ಉಸ್ತುವಾರಿ ದಿಲೀಪ್ ಕುಮಾರ್ ಜೇಸ್ವಾಲ್, ಮಂಡಲ ಅಧ್ಯಕ್ಷ ಸಿದ್ದಪ್ಪ, ವೃಷಬೇಂದ್ರಸ್ವಾಮಿ, ಬಿಜೆಪಿ ಕಾರ್ಯಕಾರಣಿ ಸದಸ್ಯರುಗಳಾದ ನೂರೂಂದು ಶೆಟ್ಟರು, ಬೂದುಬಾಳು ವೆಂಕಟಸ್ವಾಮಿ, ಕೃಷಿ ಮಾರುಕಟ್ಟೆ ಸಮಿತಿ ಅಧ್ಯಕ್ಷ ಜನಗನ್ನಾಥ್ ನಾಯ್ಡು, ಮಾದ್ಯಮ ವಕ್ತಾರ ಬಿ.ಕೆ ಶಿವಕುಮಾರ್ ಮಂಡಲ ಅಧ್ಯಕ್ಷ ಸಿದ್ದಪ್ಪ ಮಾಧ್ಯಮ ಸಂಚಾಲಕ ಕೆ ಬಿ ಮಧು ಹಾಗೂ ಇನ್ನಿತರರು ಇದ್ದರು.
ವರದಿ :- ನಾಗೇಂದ್ರ ಪ್ರಸಾದ್