ಇದೇ ಸಂದರ್ಭದಲ್ಲಿ ಮಾತನಾಡಿದ ಅಂಬೇಡ್ಕರ ಪ್ರಚಾರ ಸಮಿತಿಯ ಜಿಲ್ಲಾಧ್ಯಕ್ಷರಾದ ಎನ್ ಕೆ ನಿಧಿ ಕುಮಾರ್ ಅವರು ಬಾಬಾಸಾಹೇಬ ಅಂಬೇಡ್ಕರ್ ಅವರ ಜೀವನ ಆಧಾರಿತ ಧಾರಾವಾಹಿ ಜೀ ಕನ್ನಡದಲ್ಲಿ ಯಶಸ್ವಿಯಾಗಿ ಮೂಡಿ ಬರುತಿದ್ದು ಅಂಬೇಡ್ಕರ್ ಅವರ ಜೀವನ ಚರಿತ್ರೆಯನ್ನು ಇಡೀ ದೇಶದ ಜನರಿಗೆ ಅವರ ಮನೆ ಬಾಗಿಲಿಗೆ ತಲುಪಿಸುತ್ತಿರುವ ಜೀ ಕನ್ನಡ ವಾಹಿನಿ ಮುಖ್ಯಸ್ಥರಿಗೆ ಹಾಗೂ ಇದರ ಕಾರಣೀಭೂತರಾದ ಧಾರವಾಹಿಯ ನಿರ್ಮಾಪಕರಾದ ಸಿಂದೆ ಹಾಗೂ ಅವರ ಸಹಪಾಠಿಗಳಿಗೆ ನಾಡಿನ ಜನತೆ ಚಿರಋಣಿಯಾಗಿದ್ದೇವೆ ಎಂದು ತಿಳಿಸಿದರು .
ಈ ಕಾರ್ಯಕ್ರಮದಲ್ಲಿ , ಊರುಕೆರೆ ಗ್ರಾಮ ಪಂಚಾಯತ್ ಅಧ್ಯಕ್ಷರು ಉಮಾ ಮಹೇಶ್ವರ್, ಎಪಿಎಂಸಿ ಮಾಜಿ ಅಧ್ಯಕ್ಷರು ಶಿವಕುಮಾರ್, ಊರ್ಕೆರೆ ಗ್ರಾಮ ಪಂಚಾಯಿತಿ ಸದಸ್ಯರು ಗಂಗಣ್ಣ, ಊರುಕೆರೆ ಗ್ರಾಮ ಪಂಚಾಯತ್ ಸದಸ್ಯರಾದ ಮಂಜುಳಾ ರಾಜಣ್ಣ, ಅಖಿಲ ಭಾರತ ಡಾಕ್ಟರ್ ಅಂಬೇಡ್ಕರ್ ಪ್ರಚಾರ ಸಮಿತಿಜಿಲ್ಲಾ ಅಧ್ಯಕ್ಷರು ಎನ್. ಕೆ ನಿಧಿ ಕುಮಾರ್, ಅಂಬೇಡ್ಕರ್ ಪ್ರಚಾರ ಸಮಿತಿ ಗೌರವಾಧ್ಯಕ್ಷರು ಚಲವಾದಿ ಶೇಖರ್, ಅಖಿಲ ಭಾರತ ದಲಿತ ಕ್ರಿಯಾ ಸಮಿತಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಿ. ಆರ್ ಸುರೇಶ್, ಅಂಬೇಡ್ಕರ್ ಪ್ರಚಾರ ಸಮಿತಿ ಜಿಲ್ಲಾ ಯುವ ಘಟಕ ಅಧ್ಯಕ್ಷರು ಗೋವಿಂದರಾಜ .ಕೆ, ಅಂಬೇಡ್ಕರ್ ಪ್ರಚಾರ ಸಮಿತಿ ಜಿಲ್ಲಾ ಉಪಾಧ್ಯಕ್ಷರು ಸಿದ್ದಲಿಂಗಯ್ಯ, ಅಂಬೇಡ್ಕರ್ ಪ್ರಚಾರ ಸಮಿತಿ ತಾಲೂಕ ಅಧ್ಯಕ್ಷರು ರಂಗಸ್ವಾಮಯ್ಯ, ಅಂಬೇಡ್ಕರ್ ಪ್ರಚಾರ ಸಮಿತಿ ತಾಲೂಕ್ ಯುವಘಟಕ ಅಧ್ಯಕ್ಷರು ತ್ಯಾಗರಾಜ್, ನರಸಾಪುರ ಗ್ರಾಮದ ಅಂಬೇಡ್ಕರ್ ಪ್ರಚಾರ ಸಮಿತಿ ಯುವ ಘಟಕದ ಪದಾಧಿಕಾರಿಗಳು ಚಂದ್ರಪ್ಪ, ಸಿದ್ದಲಿಂಗಯ್ಯಕೆ ಎನ್, ವಸಂತ್ ಕುಮಾರ್, ಅಣ್ಣಪ್ಪ, ಮನೋಹರ್, ಮೋಹನ್, ನರಸಿಂಹರಾಜ್, ಮಹೇಶ್, ನರಸಿಂಹಮೂರ್ತಿ, ರವೀಶ್, ಶ್ರೀಧರ್, ಅಭಿಷೇಕ್, ನವೀನ್ ಕುಮಾರ್, ಕೃಷ್ಣಅಣ್ಣ, ಮೂರ್ತಿಅಯ್ಯಾ, ಗ್ರಾಮದ ಹೆಣ್ಣು ಮಕ್ಕಳು, ಮಹಿಳೆಯರು ಸೇರಿದಂತೆ ಗ್ರಾಮದ ಪ್ರಮುಖ ಮುಖಂಡರು, ಇನ್ನು ಮುಂತಾದವರು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು